ಚಾಮರಾಜನಗರ/ ಹನೂರು : ಗ್ರಾಮಸ್ಥರ ಬಹುದಿನದ ಬೇಡಿಕೆಯಾದ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡುತ್ತಿದ್ದು ಇದರ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಶಾಸಕ ಎಂ.ಆರ್ ಮಂಜುನಾಥ್ ತಿಳಿಸಿದರು.
ತಾಲೂಕಿನ ಕುರುಬರದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಹಾಗೂ ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿ ನಂತರ ಮಾತನಾಡಿದರು.
ಗ್ರಾಮಸ್ಥರು ಈ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಮಗೆ ಶುದ್ಧ ಕುಡಿಯುವ ನೀರಿನ ಘಟಕ ಬೇಕು ಎಂಬ ಮನವಿಯನ್ನು ಸಲ್ಲಿಸಿದರು. ಅದಕ್ಕೆ ಅನುಗುಣವಾಗಿ 10 ಲಕ್ಷ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ಗುತ್ತಿಗೆದಾರರು ಕ್ರಮ ವಹಿಸಬೇಕು ಗ್ರಾಮಸ್ಥರು ಸಹ ಕಾಮಗಾರಿಯನ್ನು ವೀಕ್ಷಣೆ ಮಾಡಬೇಕು ಎಂದರು.
ಸಿಸಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಅಲ್ಪಸಂಖ್ಯಾತರ ಬಡಾವಣೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ್ದು, ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳಬೇಕು ಜೊತೆಗೆ ಜವಾಬ್ದಾರಿ ಒತ್ತಂತಹ ಗುತ್ತಿಗೆದಾರರು ನಿಗದಿತ ಅವಧಿ ಒಳಗೆ ಕಾಮಗಾರಿಯನ್ನು ಮುಗಿಸಿ ಸಾರ್ವಜನಿಕರ ಅನುಕೂಲಕ್ಕೆ ಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಬಹುದಿನದ ಬೇಡಿಕೆಯನ್ನ ಪೂರೈಕೆ ಮಾಡಿದ ಶಾಸಕ ಎಂ. ಆರ್. ಮಂಜುನಾಥ್ ರವರಿಗೆ ಕುರುಬರದೊಡ್ಡಿ ಗ್ರಾಮಸ್ಥರಿಂದ ಅಭಿನಂದನೆ ಸಲ್ಲಿಸಿ ಸನ್ಮಾನ ಸಹ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಚಂದ್ರಮ ಮುರಳಿ, ಮಾಜಿ ಗ್ರಾಮ ಪಂಚಾಯಿತಿ, ಮಂಜೇಶ್ ಗೌಡ, ಪುಟ್ಟಮಾದನಾಯಕ ಅಧ್ಯಕ್ಷರಾದ ಮಂಜು ಸದಸ್ಯರಾದ ಶಿವಣ್ಣ, ಜಬ್ಬರ್ ಸಾಹೇಬ್, ಗ್ರಾಮದ ಮುಖಂಡರಾದ ನಾಗರಾಜು, ನಂಜಪ್ಪ, ಬಸವರಾಜು ಮಾದೇವ ನಟೇಶ್, ಸೈಯದ್ ಆರೀಫ್, ರಫೀಕ್ ಹಾಗೂ ಅಭಿಯಂತರರಾದ ಕಾರ್ತಿಕ ಎಂ. ಸೇರಿದಂತೆ ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್




















