
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ದೇಗಿನಾಳ ಗ್ರಾಮದಲ್ಲಿ ಗ್ರಾಮ ದೇವತೆಯಾದ ಶ್ರೀ ಮಹಾಲಕ್ಷ್ಮಿ ದೇವಿ ಪಲ್ಲಕ್ಕಿ ಉತ್ಸವವು ಕುಂಭಮೇಳ ಹಾಗೂ ಡೊಳ್ಳು ಕುಣಿತದೊಂದಿಗೆ ಬಹಳ ಅದ್ದೂರಿಯಾಗಿ ನಡೆಯಿತು.
ಹುಲಿಗುಡ್ಡ ಮಾಳಿಂಗರಾಯ ಪೂಜಾರಿಯವರು ಈ ಸಂದರ್ಭದಲ್ಲಿ ಇದ್ದರು.
ಈ ಗ್ರಾಮವು ನೂರಾರು ವೀರ ಯೋಧರನ್ನು ಸೇನೆಗೆ ನೀಡಿದ್ದು, ಜಾತ್ರೆಯ ಸಮಯದಲ್ಲಿ ಮಾಜಿ ಯೋಧರಾದ ಗೌರಿಶಂಕರ್ ನೀಲಂಗಿ, ನಾಗಪ್ಪ ಎಡಿಗೆ ಹಾಗೂ ಉಮಾಕಾಂತ ನೀಲಂಗಿಯವರಿಗೆ ಊರಿನ ಗಣ್ಯರು ಎಲ್ಲರೂ ಸೇರಿ ಮೆರವಣಿಗೆ ಮುಖಾಂತರ ಬರ ಮಾಡಿಕೊಂಡು ಸನ್ಮಾನ ಮಾಡಿದರು. ಸನ್ಮಾನ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೂ ಈ ಗ್ರಾಮದ 120 ಯೋಧರಿಗೆ ಇದುವರೆಗೆ ತೊಂದರೆ ಆಗಿಲ್ಲ ಕಾರಣ ಈ ಮಹಾತಾಯಿ ಆಶೀರ್ವಾದ ಎಂದು ಈ ಊರಿನ ಗಣ್ಯರು ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ರಾಮಕಾಂತ ಬಿರಾದಾರ ಅವರು ಮಾತನಾಡಿದರು. ಹಾಗೂ ಈ ಜಾತ್ರೆಗೆ ದೇವಿಯ ಭಕ್ತರಾದ ಸಂತೋಷ ಅಮೋಗಿಸಿದ್ದ ಹರಿಜನ ಅವರು ಮಾಳಿಂಗರಾಯ ದೇವರ ನಾಟಕ ತಂಡವನ್ನು ಕರೆಸಿದ್ದರು. ಈ ಊರಲ್ಲಿ ದ್ವಿತೀಯ ಪಿಯುಸಿ ಮುಗಿದಿರುವ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಹೊಲಿಗೆ ಯಂತ್ರವನ್ನು ಕೊಡಲಾಗುವುದೆಂದು ಗ್ರಾಮದ ರಮೇಶ್ ಜಾದವ್ ಅವರು ಹೇಳಿದರು.
ವರದಿ ಆನಂದ ಹರಿಜನ




















