ಚಾಮರಾಜನಗರ/ಹನೂರು ಪಟ್ಟಣದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರವರ ವೃತ್ತ ನಿರ್ಮಾಣ ಆಗುತ್ತಿದ್ದು ಬೇಕಾಗಿರುವ ಜಾಗವನ್ನು ಅರಣ್ಯ ಅಧಿಕಾರಿಗಳ ಜೊತೆ ಖುದ್ದು ಚರ್ಚಿಸಿ ಬಿಡಿಸಿದರು.
ದಲಿತ ಸಮುದಾಯದವರ ಬೇಡಿಕೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಅರಣ್ಯ ಅಧಿಕಾರಿಗಳನ್ನು ಕರೆಸಿಕೊಂಡು ಅಗತ್ಯ ಇರುವ ಜಾಗದ ಬಗ್ಗೆ ಚರ್ಚಿಸಿ ಕಾಂಪೌಂಡ್ ತೆರವುಗೊಳಿಸಿದ್ದರು ಅಂಬೇಡ್ಕರ್ ಅವರ ವೃತ್ತ ಗೋಪುರದ ಕೆಲಸ ಅಚ್ಚುಕಟ್ಟಾಗಿ ಮಾಡಿ ಎಂದು ತಿಳಿಸಿದ್ದರು.
ಸಿಹಿ ಸಂಭ್ರಮಾಚರಣೆ ,ದಲಿತ ಸಮುದಾಯ ಬಹುದಿನದ ಬೇಡಿಕೆ ನೆರೆವೇರಿದ ಹಿನ್ನಲೆ ಸೇರಿದ್ದ ಸಾರ್ವಜನಿಕರಿಗೆ ಹಾಗೂ ಲೋಕಸಭಾ ಸದಸ್ಯರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂಧರ್ಭದಲ್ಲಿ ಹನೂರು ಪಟ್ಟಣದ ಮುಖಂಡ ಪುಟ್ಟಸ್ವಾಮಿ ಮಾತನಾಡಿ ವೃತ್ತ ನೋಡುವುದಕ್ಕೆ ವಿಶಾಲದಿಂದ ಹಾಗೂ ಆಕರ್ಷಣೆಯಿಂದ ಕೂಡಿರಬೇಕು ಎಂದು ಅನೇಕ ವರ್ಷಗಳಿಂದ ಅರಣ್ಯ ಇಲಾಖೆಯ ಸ್ಥಳವನ್ನು ಬಿಡಿಸಿಕೊಡಿ ಎಂದು ದಲಿತ ಸಮುದಾಯದ ಮುಖಂಡರು ಅನೇಕರಲ್ಲಿ ಬೇಡಿಕೆ ಇಟ್ಟಿದ್ದರು ಅದು ಆಗಿರಲಿಲ್ಲ ಆದರೆ ಇಂದು ನಮ್ಮ ಲೋಕಸಭಾ ಸದಸ್ಯರು ಖುದ್ದು ಅವರೇ ನಿಂತು ಜಾಗ ಬಿಡಿಸಿದ್ದಾರೆ ಇದು ತುಂಬಾ ಖುಷಿ ಕೊಡುತ್ತದೆ ಎಂದು ತಿಳಿಸಿದರು.
ವರದಿ ಉಸ್ಮಾನ್ ಖಾನ್




















