ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಂದ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು.
ಕಿಟ್ಟಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸೋಮನಾಥ ಬೇಲೂರೆ ಅವರು 10ನೇ ತರಗತಿಯ ಮಕ್ಕಳು ಪರೀಕ್ಷಾ ಶುಲ್ಕ ಕಟ್ಟಲು ಹೊದಾಗ ಶುಲ್ಕ ಕಟ್ಟಿಸಿಕೊಳ್ಳದೇ ತಿರಸ್ಕರಿಸಿದ್ದಾರೆ. ಆಮೇಲೆ ಆ ಮಕ್ಕಳು ತಮ್ಮ ತಂದೆಯೊಂದಿಗೆ ಶಾಲೆಗೆ ಹೋಗಿ ಕೇಳಿದರೆ ಅವರ ತಂದೆಯನ್ನೆ ಕುತ್ತಿಗೆಗೆ ಕೈಹಾಕಿ ತಳ್ಳಿದ್ದಾರೆ ಇಂತಹ ಮುಖ್ಯ ಗುರುಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಶಾಲೆಯ ವಿದ್ಯಾರ್ಥಿಗಳು, ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಿಎಸ್‌ಪಿ ತಾಲೂಕ ಅಧ್ಯಕ್ಷರಾದ ಶಂಕರ ಫುಲೆ ಅವರು ಮಾತನಾಡಿ ಶಾಲೆಯ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣದಿಂದ ವಂಚಿತ ಮಾಡುತಿದ್ದಾರೆಂದು ಆರೋಪಿಸಿ, ಇಂತಹ ನೀಚ ವಿಚಾರದ ಮುಖ್ಯ ಗುರುಗಳ ಮೇಲೆ ಕೂಡಲೇ ಸೂಕ್ತ ಕಾನೂನ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. ಪರೀಕ್ಷಾ ಶುಲ್ಕ ಕಟ್ಟಲು ಹೋದ ವಿದ್ಯಾರ್ಥಿಗಳು ವಿಜಯ ತಂದೆ ಉಮೇಶ ಪಾಂಚಾಳ ಇವರ ಹತ್ತಿರ ಕಳೆದ ವರ್ಷ ಒಂದು ಸಾವಿರ ರೂಪಾಯಿ ತೆಗೆದುಕೊಂಡು ಅವನಿಗೆ ಪರೀಕ್ಷಾ ಪ್ರವೇಶ ಪತ್ರ ನೀಡಿರುವುದಿಲ್ಲ, ಈ ಹುಡುಗನ ತಂದೆ ಇಲ್ಲ ತಾಯಿ ಕೂಡಾ ವಿಶೇಷಚೇತನರಾಗಿದ್ದು ಇವರು ತುಂಬಾ ಬಡತನದಿಂದ ಜೀವನ ನಡೆಸುತ್ತಿದ್ದಾರೆ ಇಂತಹದರಲ್ಲಿ ಒಂದು ಸಾವಿರ ರೂಪಾಯಿ ಕೊಟ್ಟರೂ ಕೂಡಾ ಪರೀಕ್ಷೆ ಬರೆಯಲು ಬಿಡಲಿಲ್ಲ ಇಂತಹ ಮುಖ್ಯ ಗುರುಗಳನ್ನು ಇನ್ನೂ ಶಾಲೆಯಲ್ಲಿ ಇಡಬೇಕಾ ? ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆಯಾಗಿದೆ.
ಈ ಸಂಧರ್ಭದಲ್ಲಿ ಬಿಎಸ್‌ಪಿ ತಾಲೂಕು ಅಧ್ಯಕ್ಷರಾದ ಶಂಕರ ಫುಲೆ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಬಂದು ವಿದ್ಯಾರ್ಥಿಗಳ ಪರಿಸ್ಥಿತಿ ಕುರಿತು ಮಾಹಿತಿ ನೀಡಿ ವಿದ್ಯಾರ್ಥಿಗಳೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















