
ಕಲಬುರಗಿ ಜಿಲ್ಲೆಯ ಕಾಳಗಿ ತಾಲ್ಲೂಕಿನ ಸುಗೂರ(ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸ ಶುಕ್ಲ ಪಕ್ಷದ ಸಪ್ತಮಿ ದಿನದಂದು ಮಂಗಳವಾರ ರಾತ್ರಿ ದೇವಸ್ಥಾನದ ಸಂಚಾಲಕ ಕೃಷ್ಣದಾಸ ಮಹಾರಾಜರ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ಅನ್ನಕೂಟ ಉತ್ಸವ ಜರುಗಿತು. ಅನ್ನಕೂಟ ಉತ್ಸವದ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ವೆಂಕಟೇಶ್ವರ ಹಾಗೂ ಅನ್ನಪೂರ್ಣೇಶ್ವರಿ ದೇವಿಯ ಬೆಳ್ಳಿ ಮೂರ್ತಿಗೆ ವಿಶೇಷ ಅಲಂಕಾರ, ಅಭಿಷೇಕ, ತೊಮಲಾ ಸೇವೆ, ತುಳಸಿ ಅರ್ಚನೆ ಮಾಡಿ 56 ಪ್ರಕಾರದ ವಿವಿಧ ಅಡುಗೆ ತಯಾರಿಸಿ ನೈವೇದ್ಯ ಅರ್ಪಿಸಿದರು.
ನಂತರ ದೇವಸ್ಥಾನದ ಸಂಚಾಲಕ ಕೃಷ್ಣದಾಸ ಮಹಾರಾಜ ಮಾತನಾಡಿ, ವೆಂಕಟೇಶ್ವರನು ಒಂದು ಸಂದರ್ಭದಲ್ಲಿ ಅನ್ನಗೃಹಕ್ಕೆ ಆಗಮಿಸಿದಾಗ ಅವರಿಗೆ ದೇವಿ ಅನ್ನಪೂಣೇಶ್ವರಿಯ ಮೇಲೆ ಪ್ರೇಮವಾಗಿ ಅವರಿಬ್ಬರಿಗೂ ಮದುವೆಯಾಯಿತು.
ಸುಗೂರ(ಕೆ) ಗ್ರಾಮದ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆದ ಅನ್ನಕೂಟ ಉತ್ಸವದಲ್ಲಿ 56 ಪ್ರಕಾರದ ವಿವಿಧ ವೈವಿಧ್ಯಮಯವಾದ ಅಡುಗೆ ತಯಾರಿಸಿ ಅನ್ನಪೂರ್ಣ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವೈವಿಧ್ಯಮಯವಾದ 56 ಪ್ರಕಾರದ ಆಹಾರ ಪದಾರ್ಥಗಳು ತಯಾರು ಮಾಡಿ ವೆಂಕಟೇಶ್ವರ ದೇವರಿಗೆ ಉಳಿಸಲಾಗಿತ್ತು. ಮದುವೆಯಾದ ಕೆಲ ದಿನಗಳ ನಂತರ ವೆಂಕಟೇಶ್ವರ ಸ್ವಾಮಿ ಹಿಂದುರುಗಿ ತಮ್ಮ ಸ್ಥಾನಕ್ಕೆ ಬರುವ ದಿನದಂದು ಪುರದ ಜನರಿಂದ ಸಂಭ್ರಮ ಆಚರಿಸಿ ವೈವಿಧ್ಯಮಯ ಪ್ರಕಾರದ ಆಹಾರ ಪದಾರ್ಥಗಳನ್ನು ತಯಾರಿಸಿ ವೆಂಕಟೇಶ್ವರ ಸ್ವಾಮಿಗೆ ಉಣಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂದಿನಿಂದ ಇಂದಿನ ದಿನದವರೆಗೂ ಜಗತ್ತಿನ ಎಲ್ಲಾ ವೆಂಕಟೇಶ್ವರ ದೇವಸ್ಥಾನಗಳಲ್ಲಿ ಇಂದಿಗೂ ಅನ್ನಕೂಟ ಉತ್ಸವದ ಆಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ ಎಂದು ತಿಳಿಸಿದರು.
ಪ್ರತಿವರ್ಷ ದೀಪಾವಳಿ ಹಬ್ಬದ ನಂತರ ಬರುವ ಶುಕ್ಲ ಪಕ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಅನ್ನಕೂಟವನ್ನು ಆಚರಿಸಬಹುದಾಗಿದೆ.
ಅದೇ ಹಿನ್ನೆಲೆಯಲ್ಲಿ ಕಳೆದ ಹದಿನಾರು ವರ್ಷಗಳಿಂದ ನಮ್ಮ ಸುಗೂರ (ಕೆ.) ವೆಂಕಟೇಶ್ವರ ದೇವಸ್ಥಾನದಲ್ಲಿ ಈ ಆಚರಣೆ ಉತ್ಸವದ ರೀತಿಯಲ್ಲಿ ಪ್ರತಿವರ್ಷ ನಡೆಯುತ್ತಿದೆ ಎಂದು ಹೇಳಿದರು.
ಈ ಸಂಭ್ರಮದ ಕಾರ್ಯಕ್ರಮದಲ್ಲಿ ದೇವಸ್ಥಾನ ಕೇಶವದಾಸ ಮಹಾರಾಜ, ಬಾಲಕದಾಸ ನಾಗಸಾದು, ರಾಮಾಜುನದಾಸ ಮಹಾರಾಜ, ಸಾಗರದಾಸ ಮಹಾರಾಜ, ಸಂತೋಷವರ್ಮಾ ದಾಮೋದರ ಗಿಲ್ಲಾ, ವಿಷ್ಣುದಾಸ ತಾಕಡಿಯ, ರಾಜೇಶ ಮಾಲು, ಗುರುರಾಜಬಾವಗಿ, ಶ್ರೀಕಾಂತ್ ಬಲದಾವ, ಸಿದ್ದುಕೇಶ್ವರ, ದತ್ತಾತ್ರೇಯಮಚ್ಚೆಟ್ಟಿ, ಅರುಣ ಪಾಟೀಲ, ಜಗನ್ನಾಥ ಕೋಳ್ಳಿ, ಖೇಮು ರಾಠೋಡ, ಸಂಜು ಕಾರಬಾರಿ, ಮೋಹನ್ ಚವ್ಹಾಣ, ದಾವುದ ಮುಜಾವಾರ, ದೀಲಿಪ ಪರತನ್, ಶಿವು ಕಲಶೆಟ್ಟಿ, ಅನೀಲ ಚವ್ಹಾಣ, ಅಶೋಕ ರೆಮ್ಮಣ್ಣಿ, ವೀರಣ್ಣ ಗಂಗಾಣಿ ರೈತ ಮುಖಂಡರು, ರಾಘವೇಂದ್ರ ಗುಂಡಾನೋರ, ಕಲ್ಲಯ್ಯಾಸ್ವಾಮಿ ಸಾಲಿಮಠ, ಮಲ್ಲಿಕಾರ್ಜುನ ರೆಡ್ಡಿ, ದೀಲಿನ ಗುರುರಾತ್, ಹಸಮೂಕ್ ಗುಜುರಾತಿ ಸೇರಿದಂತೆ ನೂರಾರು ಭಕ್ತರು ಹಾಗೂ ಸೂಗುರ ಗ್ರಾಮಸ್ಥರು ಅನ್ನಕೂಟ ಉತ್ಸವದಲ್ಲಿ ಭಾಗವಹಿಸಿ 56 ಪ್ರಕಾರದ ಪ್ರಸಾದ ಸ್ವೀಕರಿಸಿ ಪುನೀತ ರಾದರು. ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗಿಯಾಗಿ ಪ್ರಸಾದ ಸ್ವೀಕರಿಸಿ ಪುನೀತರಾದರು.
ವರದಿ ಚಂದ್ರಶೇಖರ್ ಆರ್ ಪಾಟೀಲ್



















