ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಪ್ರಾಪ್ತ ಬಾಲಕಿ ಸೌಜನ್ಯ ಹಡಪದ ಕೊಲೆ ಖಂಡಿಸಿ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಡಪದ ಅಪ್ಪಣ್ಣ ಸಮಾಜದ ಬೃಹತ್ ಹೋರಾಟ ‌ ‌ ‌ ‌

ಯಾದಗಿರಿ: ಹುಣಸಗಿ ತಾಲೂಕಿನ ಕೋಡೆಕಲ್ ಗ್ರಾಮದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ 17 ವರ್ಷದ ವಿಧ್ಯಾರ್ಥಿನಿ ದಿಂ. ಸೌಜನ್ಯ ಹಡಪದ ಅವರನ್ನು ಅಪಹರಿಸಿ ಕ್ರೂರವಾಗಿ ಹತ್ಯೆಮಾಡಿ ಶವವನ್ನು ಕಾಲುವೆಯಲ್ಲಿ ಬಿಸಾಕಿದ ಘಟನೆಯು ಜಿಲ್ಲೆಯಾದ್ಯಂತ ಆಕ್ರೋಶ ಹುಟ್ಟಿಸಿದೆ.
ಈ ಕೊಲೆಯನ್ನು ಖಂಡಿಸಿ ನಿನ್ನೆ ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಎದುರು ಹಡಪದ ಅಪ್ಪಣ್ಣ ಸಮಾಜದ ವತಿಯಿಂದ ಬೃಹತ್ ಹೋರಾಟ ನಡೆಯಿತು. ಪ್ರತಿಭಟನಾಕಾರರು ಉಗ್ರ ಘೋಷಣೆಗಳನ್ನು ಕೂಗಿ, “ಆರೋಪಿಗಳನ್ನು ತಕ್ಷಣ ಪತ್ತೆಹಚ್ಚಿ ಬಂಧಿಸಬೇಕು ಹಾಗೂ ಗಲ್ಲು ಶಿಕ್ಷೆ ವಿಧಿಸಬೇಕು” ಎಂದು ಆಗ್ರಹಿಸಿದರು.
ಸಮಾಜದ ನಾಯಕರ ಆರೋಪದ ಪ್ರಕಾರ, ಸೌಜನ್ಯ ಕಾಣೆಯಾದ ಬಗ್ಗೆ ಕುಟುಂಬವು ಕೋಡೆಕಲ್ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಕೇಸ್ ದಾಖಲಿಸದೇ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಲೇ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಖಂಡಿಸಿದರು. ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯ ನಂತರ ಸಮಾಜದ ಪ್ರತಿನಿಧಿಗಳು ಜಿಲ್ಲಾಧಿಕಾರಿಯ ಮೂಲಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲರು, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಹೋರಾಟದಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಡಪದ ಕುಳಗೇರಿ ಅವರ ನೇತೃತ್ವದಲ್ಲಿ ನೂರಾರು ಹಡಪದ ಅಪ್ಪಣ್ಣ ಸಮಾಜದ ಸದಸ್ಯರು ಭಾಗವಹಿಸಿದರು ಮತ್ತು ಸಮಾಜದ ಗಣ್ಯ ನಾಯಕರಾದ ಈರಣ್ಣ ಸಿ. ಹಡಪದ (ಸಣ್ಣೂರ – ಕಲಬುರಗಿ ಜಿಲ್ಲಾ ಅಧ್ಯಕ್ಷರು), ಬಸವರಾಜ ಹಡಪದ (ಸುಗೂರ ಎನ್ ಕಲಬುರಗಿ ಗೌರವಾಧ್ಯಕ್ಷರು), ಬಸವರಾಜ ಸಿ. ಹಡಪದ (ಹಳ್ಳಿ ಶಹಾಬಾದ್ ಮಾಜಿ ಸಂಘಟನಾ ಕಾರ್ಯದರ್ಶಿ), ಸಮಾಜದ ಹಿರಿಯರು ಅಯ್ಯಣ್ಣ ಹಡಪದ (ಇಬ್ರಾಹಿಂಪೂರ), ಹಣಮಂತ್ರಾಯ ಹಡಪದ (ಹುಣಸಗಿ ತಾಲೂಕು ಅಧ್ಯಕ್ಷ), ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ (ಕಲಬುರಗಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು), ಮಲ್ಲಿಕಾರ್ಜುನ ಹಡಪದ (ಸಾವಳಗಿ ಕಲಬುರಗಿ ನಗರಾಧ್ಯಕ್ಷ), ತಿಪ್ಪಣ್ಣ ಹಡಪದ (ನರಿಬೋಳ – ಜೇವರ್ಗಿ ತಾಲೂಕು ಅಧ್ಯಕ್ಷ), ಸಿದ್ರಾಮ ಹಡಪದ (ಯಾಗಾಪೂರ – ಶಹಾಬಾದ್ ತಾಲೂಕು ಅಧ್ಯಕ್ಷ), ರಮೇಶ್ ಕೊಲ್ಲೂರು (ಚಿತ್ತಾಪುರ ತಾಲೂಕು ಅಧ್ಯಕ್ಷ), ಶರಣಬಸ್ಸು (ಶಹಾಪೂರ ತಾಲೂಕು ಅಧ್ಯಕ್ಷ). ರೇವಣಸಿದ್ದ ಮಾಲಗತ್ತಿ, ರವಿ ಹಡಪದ ಎಲ್ಲೆರಿ, ಅಂಬ್ರೇಶ ವಡಗೇರಿ , ಮಲ್ಲಿಕಾರ್ಜುನ ಮದ್ರಕಿ, ಮಲ್ಲಿಕಾರ್ಜುನ ದೋರಹನಹಳ್ಳಿ.ಸುಭಾಶಚಂದ್ರ ಹಡಪದ , ದೇವು ನೀರಲಗಿ, ಬಸವರಾಜ ಹಡಪದ ಮುದ್ದನೂರ. ಅಪ್ಪಣ್ಣ ಮಾಲಗತ್ತಿ ,ಭಾಗಣ್ಣ ಹಡಪದ ನಾರಾಯಣಪುರ, ಮಲ್ಲು ಹಡಪದ ಮುದ್ದನೂರ, ನಾಗರಾಜ ಹಡಪದ ಸಾತನೂರ, ಬಸವರಾಜ ಕಡ್ನಳ್ಳಿ, ಈಶ್ವರ ಅರಿಕೇರಿ,ಶರಣು ಹಡಪದ ಕೊಲ್ಲೂರು, ಶೇಕಣ್ಣ ಹಡಪದ ದಂಡಗುಂಡ.ಶಿವುಕುಮಾರ ಹಡಪದ ಕೊಳ್ಳಿ ನಾಲವಾರ.ಶಿವಲಿಂಗ ಶಹಾಬಾದ , ತೋಟೇಂದ್ರ ಚನ್ನೂರ. ಹಾಗೂ ಭಾಗಣ್ಣ ಹಡಪದ ರಾವೂರ ವಡಗೇರಿ, ಶರಣಪ್ಪ ಹಡಪದ ಚಟ್ನಳ್ಳಿ. ಸಂಗಮೇಶ ಹಡಪದ ಮಾರಡಗಿ, ಶ್ರೀಮಂತ ಹಡಪದ ಕಲಬುರಗಿ ಅರನೂರ, ಸಿದ್ದು ಹಡಪದ ನಾಲವಾರ.ಭೀಮು ಹಡಪದ ಶಿರವಾಳ, ಶಂಕರ ಹಡಪದ ಹರವಾಳ, ಸೇರಿದಂತೆ ಸಮಾಜದ ಅನೇಕ ಮುಖಂಡರು ಮತ್ತು ನೂರಾರು ಸ್ವಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
ಸಮಾಜದವರು ಈ ಘಟನೆಗೆ ನ್ಯಾಯ ದೊರೆಯುವವರೆಗೆ ಹೋರಾಟ ಮುಂದುವರಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

  • ಕರುನಾಡ ಕಂದ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!