
ಬಾಗಲಕೋಟೆ/ ಹುನಗುಂದ: ಪಿ.ಬಿ.ಧುತ್ತರಗಿ ಟ್ರಸ್ಟ್ (ಸೂಳೇಬಾವಿ) ಬಾಗಲಕೋಟೆ ಮತ್ತು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಶ್ರಯದಲ್ಲಿ ೩೦ ರಂದು ಗುರುವಾರ ಮಧ್ಯಾಹ್ನ ೧೨ ಕ್ಕೆ ಕಾಲೇಜಿನಲ್ಲಿ ಧುತ್ತರಗಿ ಅವರ ಮದುಮಗಳು ನಾಟಕ ಕುರಿತು ವಿದ್ಯಾರ್ಥಿಗಳ ಓದು-ಅಭಿಪ್ರಾಯ-ಸಂವಾದ ಕಾರ್ಯಕ್ರಮ ನಡೆಯುವುದು.
ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಅಧ್ಯಕ್ಷತೆ ವಹಿಸುವರು. ಸಿಡಿಸಿ ಉಪಾಧ್ಯಕ್ಷ ವಿಜಯ ಮಹಾಂತೇಶ ಗದ್ದನಕೇರಿ ಉದ್ಘಾಟಿಸುವರು. ಹಿರಿಯ ಲೇಖಕ ಶರಣಪ್ಪ ಹೂಲಗೇರಿ ನಾಟಕ ಕುರಿತು ಮಾತನಾಡುವರು. ಹಿರಿಯ ರಂಗಕರ್ಮಿಗಳಾದ ಜಿ.ವಿ.ದೇಶಪಾಂಡೆ, ಅರುಣಾಚಾರ್ಯ ಹುನಗುಂದ, ಬಿ.ವೈ.ಕೊಡಗಾನೂರ ಮತ್ತು ವ್ಯಾಸತೀರ್ಥ ಜೋಶಿ ಅತಿಥಿಗಳಾಗಿ ಭಾಗವಹಿಸುವರು. ಪ್ರಾಚಾರ್ಯ ಸಿಕಂದರ್ ಧನ್ನೂರ ಮತ್ತು ಟ್ರಸ್ಟ್ ಸದಸ್ಯ ಡಾ.ನಾಗರಾಜ ನಾಡಗೌಡ ಉಪಸ್ಥಿತರಿರುವರು ಎಂದು ಕಾರ್ಯಕ್ರಮ ಸಂಚಾಲಕ ಡಾ.ಮುರ್ತುಜಾ ಒಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ



















