ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪರುಷುಕಟ್ಟೆಯ ಪಕ್ಕದಲ್ಲಿದ್ದ ಗಣೇಶ ಮಂದಿರ ಮತ್ತು ಮಹಾದೇವ ಮಂದಿರ ಪುನರ್ ನಿರ್ಮಾಣಕ್ಕೆ ಆಗ್ರಹ

ಬೀದರ್ ಜಿಲ್ಲೆಯ ಬಸವಕಲ್ಯಾಣ ಸಮಸ್ತ ನಾಗರೀಕರ ಪರವಾಗಿ ವಿಶ್ವ ಹಿಂದೂ ಪರಿಷತ್ತು, ಭಜರಂಗದಳದ ವತಿಯಿಂದ ಕಳೆದ 2022 ರಿಂದ ಇಲ್ಲಿಯವರೆಗೆ ನಗರದ ಪವಿತ್ರ ಹಾಗೂ ಪುಣ್ಯಸ್ಥಳ, ಜೊತೆಗೆ ಸಾಮಾಜಿಕ ನ್ಯಾಯ ನೀಡುವ, ಐತಿಹಾಸಿಕ ಪರಷುಕಟ್ಟೆಯ ಕಟ್ಟೆಯ ಪಕ್ಕದಲ್ಲಿ ಈ ಮೊದಲು ಗಣೇಶ ಮಂದಿರ ಮತ್ತು ಮಹಾದೇವ ಮಂದಿರ ಇದ್ದದ್ದನ್ನು, ಅಭಿವೃದ್ಧಿಯ ನೆಪದಲ್ಲಿ ತೆರವುಗೊಳಿಸಿ, ಅಲ್ಲಿರುವ ಮೂರ್ತಿಗಳನ್ನು ಸ್ಥಳಾಂತರಿಸುವುದಕ್ಕೆ ಖಂಡಿಸಿ, ನಗರದ ಯಾವದಾದರೂ ಪ್ರದೇಶದಲ್ಲಿ ಸರ್ಕಾರವೇ ಸ್ಥಳಾವಕಾಶ ಮಾಡಿ ಗಣೇಶ ಮಂದಿರ ಮತ್ತು ಮಹಾದೇವ ಮಂದಿರಕ್ಕೆ ಅನುದಾನ ನೀಡಿ, ಪುನರ್ ನಿರ್ಮಾಣ ಮಾಡಿ ,ಅಭಿವೃದ್ಧಿ ಪಡಿಸಬೇಕಾಗಿ ಹಲವು ಸಲ ಬೇಡಿಕೆ ಇಟ್ಟು ಮಾನ್ಯ ಮುಖ್ಯ ಅಧಿಕಾರಿಗಳು ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ರವರಿಗೂ ಹಾಗೂ ಬಿಕೆಡಿಬಿ ಆಯುಕ್ತರಿಗೂ ಮನವಿ ಸಲ್ಲಿಸಿಲಾಗಿದೆ, ಇದರ ಪ್ರತ್ಯುತ್ತರವಾಗಿ ಈ ಮನವಿಗೆ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರವರು ಮಾನ್ಯ ಅಪರ ಜಿಲ್ಲಾಧಿಕಾರಿಗಳ ಮೂಲಕ ಆದೇಶಿಸಿ, ಮನವಿ ಪತ್ರದ ಮೂಲಕ ವಿನಂತಿಸಿದರೂ ಇದರ ಬಗ್ಗೆ ಯಾವ ಕ್ರಮ ಜರುಗಿಸಿರುವುದಿಲ್ಲ. ಹಾಗೂ ಸದರಿ ಪತ್ರದಲ್ಲಿನ ಅಂಶಗಳು ನಿಯಮಾನುಸಾರವಾಗಿ ಪರಿಶೀಲಿಸಿ ಅಗತ್ಯ ಕ್ರಮ ಅಥವಾ ನಿರ್ಣಯ ಸಹ ಕೈಗೊಂಡಿಲ್ಲ. ಇದು ಯಾವ ನ್ಯಾಯ ಈ ವಿಷಯದ ಕುರಿತು ಗಂಭೀರತೆಯನ್ನು ತೆಗೆದುಕೊಳ್ಳದೆ ಇರುವುದೇ ವಿಪರ್ಯಾಸ ಅದ್ದರಿಂದ ದಯಾಮಾಡಿ ಈ ವಿಷಯದ ಕುರಿತು ಸೂಕ್ತ ಕ್ರಮ ಕೈಗೊಂಡು ಬಸವಕಲ್ಯಾಣ ನಗರದ ನಿವಾಸಿಗಳು ಹಾಗೂ ವಿಶ್ವ ಹಿಂದೂ ಪರಿಷತ್ತು, ಭಜರಂಗದಳದ ವಿನಂತಿಗೆ ಸ್ಪಂದಿಸಿ ಈ ಕೂಡಲೇ ನ್ಯಾಯ ದೊರಕಿಸಿಕೊಡಬೇಕೆಂದು ತಮ್ಮಲ್ಲಿ ಮತ್ತೊಮೆ ವಿನಂತಿಸಲಾಗಿದೆ. ಇಲ್ಲವಾದಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮುಂದೆ ಒಂದು ದಿನ ಸಾಂಕೇತಿಕ ಧರಣಿ ಕೂಡಲಾಗುವುದು ಎಂದು ವಿಶ್ವ ಹಿಂದೂ ಪರಿಷತ್ತು, ಭಜರಂಗದಳದ ಮೂಲಕ ಎಚ್ಚರಿಕೆ ನೀಡಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಶ್ರೀ ಶ್ರೀಶೈಲ ವಾತಡೆ ,ಭಜರಂಗದಳ ಸಂಯೋಜಕರಾದ ರವಿ ನಾವದ್ಗೇಕರ, ಸುರೇಶ ಜಮ್ಮು, ಶ್ರೀನಿವಾಸ ಬಿರಾದರ, ವಿನೋದ ಬಡಿಗೇಕರ, ಸಚಿನ ಗರುಡಕರ ಇತರರು ಇದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!