ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರಗೆ ಜಿಲ್ಲಾ ರಾಜ್ಯೋತ್ಸವ ಗರಿ

ಬಾಗಲಕೋಟೆ : ಬಾಲ್ಯದಿಂದಲೆ ಜನಪದವನ್ನು ತಮ್ಮ ಉಸಿರಾಗಿಸಿಕೊಂಡು ಕಲೆ.ಸಾಹಿತ್ಯ.ಸಂಗೀತ. ಸಂಸ್ಕೃತಿ ಪರಂಪರೆಯ ಉಳಿವಿಗೆ ಸುಮಾರು 40 ವಷ೯ಕ್ಕೂ ಹೆಚ್ಚು ಕಾಲ ಜನಪದ ಸಂಗೀತ ಸೇವೆ ಮಾಡಿದ ಹಿರಿಯ ಜನಪದ-ಜನಪರ ಸೇವಕಿ ಮುಧೋಳ ತಾಲೂಕಿನ ಮುಗಳಖೋಡದ ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರ ಅವರಿಗೆ ಬಾಗಲಕೋಟೆ “ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ “2025 ರ ಗರಿ ಇವರ ಮುಡಿಗೇರಿದೆ. ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಸಾವ೯ಜನಿಕ ವಲಯದಲ್ಲಿ ಇವರ ಸೇವೆ ಶ್ಲಾಘನೀಯವಾಗಿದೆ. 2015 ರಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಗೋವಿಂದ ಎಂ ಕಾರಜೋಳ, ವಿಧಾನ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪೂರ ಅವರಿಂದ ರಾಜ್ಯ ಮಟ್ಟದ ಜನಪದ ಭೂಷಣ ಪ್ರಶಸ್ತಿ ಪಡೆದು ಪ್ರಶಂಸೆಗೆ ಪಾತ್ರರಾದವರು. 2016ದಲ್ಲಿ ಇಕಚಲದ ಸಾಧು ಚಕ್ರವರ್ತಿ ಜಗದ್ಗುರು ಶಿವಾನಂದ ಭಾರತಿ ಶ್ರೀಗಳಿಂದ “ಗುರು ಸೇವಾ ರತ್ನ” ಪ್ರಶಸ್ತಿ ಪಡೆದವರು. 2017 ರಲ್ಲಿ ಮುಧೋಳ ತಾಲೂಕಾಡಳಿತ ಗೌರವಿಸಿದ್ದು ಹಿಂದಿನ ಸಚಿವೆ ಉಮಾಶ್ರೀ ಶಾಸಕ ಸಿದ್ದು ಸವದಿ ಸೇರಿದಂತೆ ಅನೇಕ ಗಣ್ಯರ ಮುಂದೆ ಸಂಗೀತ ಸೇವೆ ಸಲ್ಲಿಸಿದ್ದಾರೆ.

1]ನಿತ್ಯ ತತ್ವ ಚಿಂತನ ಭಕ್ತಿ ಬೆಳಗು ಕಾರ್ಯಕ್ರಮ . 2]ಪ್ರತಿ ರವಿವಾರದ ಸತ್ಸಂಗ ಕಾರ್ಯಕ್ರಮ. 3]ತತ್ವದರ್ಶನ ಮನೆಯಂಗಳದಲ್ಲಿ ಶರಣರ ಮನದ ಮಾತು ಮಾಸಿಕ ಕಾರ್ಯಕ್ರಮ.
4]ಕನಕ ಪುರಂದರ ಬಸವಾದಿ ಶರಣರ ಚಿಂತನ ತ್ರೈಮಾಸಿಕ ಕಾರ್ಯಕ್ರಮ.
5 ] ಶಿವಶರಣರ ಜಯಂತಿ -ತತ್ವಪ್ರಚಾರ ಇವರ ನಿತ್ಯ ಕಾಯಕ.
ಇದರೊಂದಿಗೆ ಬಾಗಲಕೋಟೆ .ವಿಜಯಪುರ. ಬೆಳಗಾವಿ .ಹುಬ್ಬಳ್ಳಿ . ಧಾರವಾಡ ಸೇರಿದಂತೆ ಅನೇಕ ಭಾಗಗಳಲ್ಲಿ ಜನಪದ ತತ್ವಪದಗಳನ್ನ ಹಾಡಿ ಜನಮನ ಗೆದ್ದಿದ್ದಾರೆ . ಇವರ ಸಾರ್ಥಕ ಸೇವೆಗೆ 2025 ನವಂಬರ 1ರಂದು ಬಾಗಲಕೋಟೆ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇವರನ್ನ ಗೌರವ ಪೂರಕವಾಗಿ ಸತ್ಕರಿಸಿ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಿದ್ದಾರೆ.

ಅಭಿನಂದನೆಗಳು –
ಜಿಲ್ಲಾ ಪ್ರಶಸ್ತಿಗೆ ಭಾಜನರಾದ ಕಲಾವಿದೆ ಶ್ರೀಮತಿ ಶ್ಯಾಮಲಾ ಲಕ್ಷ್ಮೇಶ್ವರವರನ್ನು ಕರ್ನಾಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ .ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನ. ಶ್ರೀಮನ್ ನಿಜಗುಣ ಶಿವಯೋಗಿ ಪ್ರತಿಷ್ಠಾನ. ಬಸವ ಜಾನಪದ ಕಲಾಬಳಗ ಸೇರಿದಂತೆ ಅನೇಕ ಕಲಾವಿದರ ಬಳಗ ಅಭಿನಂದನೆಯನ್ನು ಸಲ್ಲಿಸಿವೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!