ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡ್ಡಹಳ್ಳಿಯಲ್ಲಿ 70ನೇ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ನಮ್ಮ ಮಾತೃಭಾಷೆ ಕನ್ನಡ, ನಮ್ಮ ನಾಡು ಕರ್ನಾಟಕ, ನಮ್ಮ ಹೆಮ್ಮೆಯ ಕರುನಾಡು ಎಲ್ಲರಿಗೂ ಕನ್ನಡ ರಾಜ್ಯೋತ್ಸವ ಶುಭಾಶಯ ತಿಳಿಸುತ್ತಾ ಕರ್ನಾಟಕ ಇತಿಹಾಸದ ಬಗ್ಗೆ ಹಾಗೂ ಅದು ಬೆಳೆದು ಬಂದ ಹಾದಿಯನ್ನು ಬಗ್ಗೆ ಅದ್ಭುತವಾಗಿ ಶ್ರೀಮಂತ್ ಗಂಜಿ ಮುಖ್ಯಗುರುಗಳು ಹಿ. ಪ್ರಾ. ಶಾ. ಕುಡ್ದಹಳ್ಳಿ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಮಂತ ಗಂಜಿ ಮುಖ್ಯ ಗುರುಗಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಡ್ಡಹಳ್ಳಿ, ರಮೇಶ್ ದೇವನಕರ ಎಸ್ ಡಿ ಎಮ್ ಸಿ ಅಧ್ಯಕ್ಷರು ಸ. ಹಿ. ಪ್ರಾ.ಶಾ. ಕುಡ್ದಹಳ್ಳಿ, ಶಂಕರ್ ಕಣ್ಣಿ, ಪ್ರಭಾಕರ್ ಭಂಢಾರೆ, ಪಲ್ಲವಿ ಮೇಡಂ ಹಾಗೂ ಎಸ್ಡಿಎಂಸಿ ಸದಸ್ಯರು ಮತ್ತು ಅಡುಗೆ ಸಿಬ್ಬಂದಿ ವರ್ಗದವರು, ಊರಿನ ಪ್ರಮುಖ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ ಚಂದ್ರಶೇಖರ ಆರ್. ಪಾಟೀಲ್



















