ನಮ್ಮ ಭಾಷೆ ಹೊನ್ನಿನ ನುಡಿಯು/
ಕನ್ನಡ ಗುಡಿ ಸವಿಜೇನಿನ ಹನಿಯು/
ಸುಂದರ ನುಡಿ ಗಂಧದ ಗುಡಿಯು/
ಮಕ್ಕಳು ನುಡಿದರೆ ಚೆಂದ ಸಕ್ಕರೆಯು//{೦೧}//
ಅಕ್ಷರ ಜೋಡಣೆ ಮುತ್ತಿನ ಮಾಲೆಯಂತೆ/
ಕನ್ನಡ ನುಡಿದರೆ ಮಾಣಿಕ್ಯದ ಹರಳಂತೆ/
ಸವಿನುಡಿ ಆಲಿಸಲು ಇಂಪಾದ ಸಂಗೀತದಂತೆ/
ಪಟಪಟನೆ ಮಾತನಾಡಲು ನವಿಲ ನರ್ತನದಂತೆ//{೦೨}//
ಧಾರವಾಡ ಕನ್ನಡ ಧಾರವಾಡ ಪೇಡೆಯಂತೆ/
ಉತ್ತರ ಕರ್ನಾಟಕದ ನುಡಿ ಉತ್ತತ್ತಿಯಂತೆ/
ದಕ್ಷಿಣದಲ್ಲಿ ಕನ್ನಡ ನುಡಿ ದೋಸೆಯಂತೆ./
ಕರಾವಳಿ ಕನ್ನಡ ನುಡಿ ಕರದಂಟಿನಂತೆ //{೦೩}//
ಭಾವನುಡಿಯು ಆಚಾರ ಸಂಸ್ಕೃತಿ ಬೇರೆಯಾದರೇನು/
ವೈವಿಧ್ಯತೆಯಲ್ಲಿ ಏಕತೆಯ ಆಚರಣೆ ಹೇಳಿದರೆ ಏನು/
ನಾವೆಲ್ಲ ಕನ್ನಡಾಂಬೆಯ ಮಕ್ಕಳೆಂಬ ಭಾವದವರು/
ನಾಡುನುಡಿ ನೆಲಜಲ ರಕ್ಷಣೆಗೆ ಹೋರಾಡುವವರು//{೦೪}//
✍️ ಶ್ರೀ ಚನ್ನಬಸಪ್ಪ ಬಳಗಾರ (ಮಾಜಿ ಸೈನಿಕ) ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತರು.




















