ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರ ಪಟ್ಟಣದಲ್ಲಿ ಇಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ವತಿಯಿಂದ ಹಮ್ಮಿಕೊಂಡಿದ್ದ ೭೦ ನೆಯ ಕರ್ನಾಟಕ ರಾಜ್ಯೋತ್ಸವ ಆಚರಣೆ ನಿಮಿತ್ಯ ಧ್ವಜಾರೋಹಣವನ್ನು ಅಧ್ಯಕ್ಷರಾದ ಶ್ರೀ ಸುರೇಶ ದೇಶಪಾಂಡೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ವಿ ಲಕ್ಷ್ಮಯ್ಯ ಕ್ಷೇತ್ರ ಸಮನ್ವಯ ಅಧಿಕಾರಿ ಶ್ರೀ ನಾಗೇಶ ಭದ್ರಶೆಟ್ಟಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಯಶವಂತ ಪೂಜಾರಿ ಶ್ರೀಮತಿ ನಜೀಮುನಿಸಾ ಬೇಗಂ ಪರಿಷತ್ ಪದಾಧಿಕಾರಿಗಳಾದ ಶ್ರೀ ರಂಗಣ್ಣ ಪೂಜಾರಿ ಸದಸ್ಯರಾದ ಬಸವರಾಜ ಬೇಲೂರು ಹಣಮಂತ ಪುಜಾರಿ ಸೂರ್ಯಕಾಂತ ಹುಲಿ ಮೆಹಮೂದ ಪಠಾಣ ಉಲ್ಲಾಸ ಕೇರೊಳ್ಳಿ ಅನಿಲ ಬಿರಾದರ ಮಹೇಶ ಸೇರಿದಂತೆ ಇತರರು ಇದ್ದರು.
ವರದಿ ಎಸ್ ವಿ ಗಂಗಾಣಿ.



















