
ಕನ್ನಡಿಗರ ಚಿಂತನೆಯ ದೃಷ್ಟಿ ವಿಶಾಲವಾದದ್ದು |ಚಿಂತಕುಂಟಾ
ಗುರುಮಠಕಲ್: ನ.01. ಕನ್ನಡಿಗರೆಂದರೆ ರಾಷ್ಟ್ರ ಚಿಂತನೆಯ ದೃಷ್ಟಿಯನ್ನು ಹೊಂದಿದವರು. ನಮ್ಮ ನಾಡಗೀತೆಯೇ ಅದನ್ನು ಸಾರುತ್ತದೆ. ಇತರೆ ರಾಜ್ಯಗಳ ನಾಡಗೀತೆಗಳು ತಮ್ಮ ನಾಡಿನ ಕುರಿತಾಗಿವೆ. ಆದರೆ, ನಮ್ಮದು ಭಾರತದ ಸಮಗ್ರತೆಯ ಚಿತ್ರಣವನ್ನು ಕೊಡುತ್ತದೆ ಎಂದು ಶಿಕ್ಷಕ ಶರಣಪ್ಪ ಚಿಂತಕುಂಟಾ ಅಭಿಪ್ರಾಯಪಟ್ಟರು.
ಪಟ್ಟಣದ ಜವಹಾರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕು ಆಡಳಿತದಿಂದ ಕನ್ನಡ ರಾಜ್ಯೋತ್ಸವದ ಹಿನ್ನಲೆ ಆಯೋಜಿಸಿದ್ದ ಸಾರ್ವಜನಿಕ ಧ್ವಜಾರೋಹಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೂರ್ವದಲ್ಲೆ ಶ್ರೀವಿಜಯ ಕವಿ ಕನ್ನಡಿಗರ ವಿಷೇಶಣವನ್ನು ನೀಡಿದ್ದಾರೆ. ನಮ್ಮ ನಾಡಿನ ಸೈನಿಕ, ಕವಿ, ಜನಪದ ಹೀಗೆ ಎಲ್ಲವುದರ ಕುರಿತೂ ವಿವರಗಳನ್ನು ನೀಡಿದ್ದಾರೆ. ಕನ್ನಡಿಗರು ಪ್ರತಿಯೊಂದರಲ್ಲೂ ಅತ್ಯಂತ ನಿಷ್ಟಾವಂತರಾಗಿದ್ದಾರೆ ಎಂದಿದ್ದಾರೆ ಎಂದು ವಿವರಿಸಿದರು.
ಜಿ.ಪಿ.ರಾಜರತ್ನಂ ಅವರು ತಮಿಳು, ಬೇಂದ್ರೆಯವರು ಮರಾಠಿ, ಮಾಸ್ತಿಯವರು ತೆಲುಗು ಭಾಷಿಕರು. ಕುವೆಂಪು ಇಂಗ್ಲೀಷ್ ಭಾಷೆಯಲ್ಲಿ ಆಸಕ್ತರು. ಆದರೆ, ಕನ್ನಡ ಸಾಹಿತ್ಯದ ಮೇರು ಕೃತಿಗಳೂ ಅವರಾಗಿದ್ದು ವಿಶೇಷ. ಕನ್ನಡದ ಕಂಪು ಹೇಗಿದೆ ಎನ್ನಲ್ಲು ರಾಜರತ್ನಂ ಅವರ ಹೆಂಡ ಹೆಂಡತಿ ಕನ್ನಡ ಪದಗಳ್ ಎನ್ನುವ ಪದ್ಯದಲ್ಲಿ ವಿವರಿಸಿದ್ದಾರೆ ಎಂದು ತಿಳಿಸಿದರು.
ತಹಶೀಲ್ದಾರ್ ಶಾಂತಗೌಡ ಬಿರಾದರ ಅವರು ಭಾಷಾವಾರು ಪ್ರಾಂತಗಳ ರಚನೆ, ಮೈಸೂರುರಾಜ್ಯ, ಕರ್ನಾಟಕ ನಾಮಕರಣ ಹಾಗೂ ಕನ್ನಡ ಸಾಹಿತಿಗಳ ಕುರಿತು ವಿವರಿಸಿದರು.
ನೆಹರೂ ಕ್ರೀಡಾಂಗಣದಿಂದ ಗಾಂಧಿ ಮೈದಾನದವರೆಗೆ ಪಟ್ಟಣದ ಮುಖ್ಯರಸ್ತೆಗಳಲ್ಲಿ ಕನ್ನಡಾಂಬೆ ಭಾವಚಿತ್ರದ ಮೆರವಣಿಗೆ ಜರುಗಿತು.
ಖಾಸಾಮಠ ಸ್ವಾಮೀಜಿ, ಪುರಸಭೆ ಅಧ್ಯಕ್ಷೆ ಜಯಶ್ರೀ ಪಾಟೀಲ, ಗ್ರೇಡ್-2 ತಹಶೀಲ್ದಾರ್ ನರಸಿಂಹಸ್ವಾಮಿ, ಪಿಐ ವೀರಣ್ಣ ದೊಡ್ಮನಿ, ಇಒ ಅಂಬ್ರೀಷ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಭಾರತಿ ಸಿ.ದಂಡೋತಿ, ಸಿಡಿಪಿಒ ಶರಣಬಸಪ್ಪ, ತಾಲ್ಲೂಕು ಕಸಾಪ ಅಧ್ಯಕ್ಷ ಬಸರೆಡ್ಡಿ ಎಂ.ಟಿ.ಪಲ್ಲಿ, ಬಾಲಪ್ಪ ಸಿರಿಗೆಂ, ನಾರಾಯಣ ರೆಡ್ಡಿ ಪೊಲೀಸ್ ಪಾಟೀಲ, ಲಾಲಪ್ಪ ತಲಾರಿ, ಅಶೋಕ್ ಶನಿವಾರಂ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ವರದಿ : ಜಗದೀಶ್ ಕುಮಾರ್ ಭೂಮಾ




















