ಬಳ್ಳಾರಿ / ಕಂಪ್ಲಿ : ಪಟ್ಡಣದ ಅಂಬೇಡ್ಕರ್ ವೃತ್ತದ ಕಂಪಲಿರಾಯ ಆಟೋ ನಿಲ್ದಾಣ ಬಳಿಯಲ್ಲಿ ಕರವೇ(ಪ್ರವೀಣ್ ಕುಮಾರ ಶೆಟ್ಟಿ ಬಣ) ತಾಲೂಕು ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಅತ್ಯಂತ ಅದ್ಧೂರಿಯಾಗಿ ಶನಿವಾರ ಆಚರಿಸಿದರು.
ಮೊದಲಿಗೆ ಹೊಸ ಬಸ್ ನಿಲ್ದಾಣದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅವರು ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿದ ನಂತರ ಬೈಕ್ ರ‍್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಕನ್ನಡ ಕೇವಲ ಭಾಷೆ ಮಾತ್ರವಲ್ಲ, ಅದು ನಮ್ಮ ಬದುಕು ಕೂಡ ಹೌದು. ಹಾಗಾಗಿ ಕನ್ನಡವನ್ನು ನಾವು ಬದುಕಾಗಿ ಬದಲಾವಣೆ ಮಾಡಿಕೊಂಡಲ್ಲಿ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ನಮ್ಮ ಭಾಷೆ, ಸಂಸ್ಕೃತಿಯನ್ನು ನಾವೆಂದೂ ಮರೆಯಬಾರದು ಎಂದರು.
ತದನಂತರ ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ನಡೆದ ವೇದಿಕೆ ಸಮಾರಂಭದ ಅಧ್ಯಕ್ಷತೆವಹಿಸಿ ತಾಲೂಕು ಅಧ್ಯಕ್ಷ ವೆಂಕಟರಮಣ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸುಂದರ ಭಾಷೆ. ಕನ್ನಡ ಭಾಷೆ ನಮ್ಮ ಬದುಕು. ಭಾಷೆ ಹಾಗೂ ನಾಡಿನ ಪರಂಪರೆಯ ಶ್ರೀಮಂತಿಕೆಯನ್ನು ಯಾರೂ ಮರೆಯಬಾರದು ಎಂದರು. ನಂತರ ಸಾಧಕರಿಗೆ ಹಾಗೂ ಗಣ್ಯರಿಗೆ ಸನ್ಮಾನಿಸಿ ಗೌರವಿಸಿದರು. ತದನಂತರ ಮದರ್ ತೇರೆಸಾ ಪಿಯು ಕಾಲೇಜು ವಿದ್ಯಾರ್ಥಿನಿಯರು ಕನ್ನಡಾಂಬೆಯ ಹಾಡು, ಭಾಷಣ ಮಾಡಿ ಗಮನ ಸೆಳೆದರು.
ಈ ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯ ಹೂಗಾರ ರಮೇಶ, ಪಿಐ ಕೆ.ಬಿ.ವಾಸುಕುಮಾರ, ಜಿಲ್ಲಾ ಸಂಚಾಲಕ ಬಿ.ರಮೇಶ, ತಾಲೂಕು ಗೌರವಾಧ್ಯಕ್ಷ ಬಿ.ನಾಗೇಂದ್ರ, ನಗರ ಘಟಕ ಅಧ್ಯಕ್ಷ ಇಸ್ಮಾಯಿಲ್‌ಬೇಗ್, ಮುಖಂಡರಾದ ವಿ.ತಿಪ್ಪೇಸ್ವಾಮಿ, ಬಿ.ನಾರಾಯಣಪ್ಪ, ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಜಿ.ರಾಮಣ್ಣ, ಬಿ.ದೇವೆಂದ್ರ, ಬಿ.ಕೆ.ವಿರುಪಾಕ್ಷಿ, ಜಾಫರ್, ಬಾಲೆಸಾಬ್, ಬಳ್ಳಾಪುರ ಮೌನೇಶ, ರಾಕೇಶ, ವೆಂಕಟೇಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















