
ಗುರುಮಠಕಲ್/ ಬೋಡಬಂಡಾ : ನ 02. ತಾಲೂಕಿನ ಎರಡನೇ ತಿರುಪತಿ ಎಂದೇ ಪ್ರಖ್ಯಾತಿ ಹೊಂದಿರುವ ಬೋಡಬಂಡಾ 16 ನೇಯ ಜಾತ್ರಾ ಮಹೋತ್ಸವ ಮತ್ತು ಕಲ್ಯಾಣೋತ್ಸವ ಇದೇ ತಿಂಗಳ 4 ನೇಯ ಮತ್ತು 5 ನೇಯ ತಾರೀಖು ಜರುಗಲಿದೆ ಎಂದು ಶ್ರೀ ಲಕ್ಷ್ಮೀತಿಮ್ಮಪ್ಪ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಂಘದ ಸದಸ್ಯರಾದ ಮಣಿಕಂಠ ರಾಥೋಡ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.
ದಿನಾಂಕ 04-11-2025 ಮಂಗಳವಾರ ಜರುಗುವ ಕಾರ್ಯಕ್ರಮದ ವಿವರ:
ಬೆಳಿಗ್ಗೆ 5.30 ನಿಮಿಷಕ್ಕೆ ಸುಪ್ರಭಾತ ಸೇವೆ, 6.30 ನಿಮಿಷಕ್ಕೆ ಪಂಚಾಮೃತ ಅಭಿಷೇಕ, 9 ಗಂಟೆಗೆ ಅಲಂಕಾರ ಹೋಮ, ಸಾಯಂಕಾಲ 6 ಗಂಟೆಗೆ ಕಾರ್ತಿಕ ದೀಪೋತ್ಸವ, 8 ಗಂಟೆಗೆ ಪಲ್ಲಕಿ ಉತ್ಸವ, ತದನಂತರ ಭಜನ ಕಾರ್ಯಕ್ರಮ.
ದಿನಾಂಕ 05-11-2025 ಬುಧವಾರ ಜರುಗುವ ಕಾರ್ಯಕ್ರಮದ ವಿವರ:
ಬೆಳಿಗ್ಗೆ 5.30 ನಿಮಿಷಕ್ಕೆ ಸುಪ್ರಭಾತ ಸೇವೆ, 6.30 ನಿಮಿಷಕ್ಕೆ ಪಂಚಾಮೃತ ಅಭಿಷೇಕ, 8 ಗಂಟೆಗೆ ರಥಾಂಗ ಹೋಮ, 9.30 ನಿಮಿಷಕ್ಕೆ ಅಭ್ಯಂಗ ಸ್ನಾನ ಕಲ್ಯಾಣೋತ್ಸವ 11.30 ನಿಮಿಷಕ್ಕೆ ರಥೋತ್ಸವ ಸೇವಾ ಮತ್ತು ಉಂಜಲ ಸೇವಾ ತದನಂತರ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.
ಬಿಗ್ ಬಾಸ್ ಖ್ಯಾತಿಯ ಹನಮಂತ ಅವರಿಂದ ದಿನಾಂಕ 4 ನೇಯ ತಾರೀಖು ಸಂಗೀತ ಕಾರ್ಯಕ್ರಮ, 5 ನೇಯ ತಾರೀಖು ಸಾಯಂಕಾಲ 4 ಗಂಟೆಯಿಂದ ಕೈ ಕುಸ್ತಿ ಪಂದ್ಯಗಳು ಆಯೋಜಿಸಿರುವದಾಗಿ ಕಾಶೀನಾಥ್ ರಾಥೋಡ್ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಅಯ್ಯಪ್ಪ ರಾಥೋಡ್, ರಮೇಶ್ ಪವಾರ್, ಕಾಶೀನಾಥ್ ರಾಥೋಡ್, ಶಂಕರ ರಾಥೋಡ್, ವಾಸುರಾಮ ಕಾರುಬಾರ್, ಸುರೇಶ್ ಪವಾರ್, ಶಂಕರ ಪವಾರ್, ಶರಣು ರಾಥೋಡ್, ಗೋಪಾಲ್ ರಾಥೋಡ್, ರಾಜು ಪವಾರ್, ಬೋಡಬಂಡಾ ಗ್ರಾಮದ ಸಾರ್ವಜನಿಕರು ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ




















