ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಧುತ್ತರಗಿ ನಾಟಕ ಓದು-ಅಭಿಪ್ರಾಯ-ಸಂವಾದನಾಟಕಗಳು ಬದುಕಿನ ಪ್ರತಿಬಿಂಬ

ಬಾಗಲಕೋಟೆ/ ಹುನಗುಂದ: ಸಮಾಜಕ್ಕೆ ತಲುಪಿಸಬೇಕಾದ ವಿಷಯವನ್ನು ರಂಗದ ಮೇಲೆ ನೈಜತೆಗೆ ಸವಾಲೆಸೆಯುವಂತೆ ಪ್ರದರ್ಶಿಸಿದಾಗ ಮಾತ್ರ ಅದು ಜನರಿಗೆ ಮುಟ್ಟಲು ಸಾಧ್ಯ ಎಂದು ಸಿಡಿಸಿ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಅಭಿಪ್ರಾಯ ಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಿ.ಬಿ.ಧುತ್ತರಗಿ ಟ್ರಸ್ಟ್(ಸೂಳೇಬಾವಿ) ಬಾಗಲಕೋಟೆ ಹಮ್ಮಿಕೊಂಡ ಕವಿ ಪಿ.ಬಿ.ಧುತ್ತರಗಿ ಅವರ ಮದುಮಗಳು ನಾಟಕದ ವಿದ್ಯಾರ್ಥಿಗಳ ಓದು-ಅಭಿಪ್ರಾಯ-ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬದುಕಿನ ವಿವಿಧ ಆಯಾಮಗಳನ್ನು, ಸಾಮಾಜಿಕ ಸಂದೇಶಗಳನ್ನು ರಂಗದ ಮೂಲಕ ಮನೋಜ್ಞವಾಗಿ ಅಭಿನಯಿಸುವಂತೆ ಹಲವು ನಾಟಕಗಳನ್ನು ಬರೆದ ಪಿ.ಬಿ.ಧುತ್ತರಗಿ ನಮ್ಮ ನಾಡಿನ ದೈತ್ಯ ಮತ್ತು ಮೇರು ರಂಗ ಪ್ರತಿಭೆ. ಅವರ ಮದುಮಗಳು ನಾಟಕವನ್ನು ಇಂದಿನ ಯುವಜನಕ್ಕೆ ಅದರಲ್ಲೂ ವಿದ್ಯಾರ್ಥಿಗಳ ಮೂಲಕ ಓದು-ಸಂವಾದ ಮಾಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಮದುಮಗಳು ನಾಟಕ ಕುರಿತು ಉಪನ್ಯಾಸ ನೀಡಿ ಮಾತನಾಡಿದ, ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಶರಣಪ್ಪ ಹೂಲಗೇರಿ ಅವರು, ಸಾಮಾಜಿಕ ವ್ಯವಸ್ಥೆಯಲ್ಲಿ ನಡೆಯುವ ವೈಪರೀತ್ಯ ಮತ್ತು ತಲ್ಲಣಗಳನ್ನು ಮನೋಜ್ಞವಾಗಿ ಕಟ್ಟಿಕೊಡುವ ಶಕ್ತಿ ಧುತ್ತರಗಿಯವರಿಗಿತ್ತು. ಮಹಿಳೆಯರು ನಿತ್ಯ ಅನುಭವಿಸುವ ಯಾತನೆಗಳು ಮದುಮಗಳು ನಾಟಕದಲ್ಲಿ ಅನಾವರಣಗೊಳ್ಳುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಟ್ರಸ್ಟಿನ ಅಧ್ಯಕ್ಷ ಎಸ್ ಕೆ ಕೊನೆಸಾಗರ ಅವರು ರಂಗಭೂಮಿಯ ದೈತ್ಯ ಪ್ರತಿಭೆ ಪಿ.ಬಿ.ಧುತ್ತರಗಿಯವರ ನಾಟಕಗಳ ಆಶಯವನ್ನು ವಿದ್ಯಾರ್ಥಿಗಳ ಮೂಲಕ ನಾಡಿಗೆ ಮರು ಪರಿಚಯಿಸುವ ಕೆಲಸ ನಮ್ಮ ಪ್ರತಿಷ್ಠಾನದಿಂದ ಆಗುತ್ತಿರುವುದು ನಮ್ಮ ಹೆಮ್ಮೆ. ಈ ಕಾರ್ಯಕ್ರಮ ರಾಜ್ಯದ ಐದು ಜಿಲ್ಲೆಗಳಲ್ಲಿ ಬೇರೆ ಬೇರೆ ನಾಟಕಗಳ ಕುರಿತು ನಡೆಯುವುದು ಎಂದರು. ರೇಣುಕಾ ಕುರಿ, ಮುತ್ತಣ್ಣ ನಂದಾಪುರ, ಸಹನಾ ಮೇರಾಖೋರ, ರಜಿಯಾ ನದಾಫ್, ಕಾವ್ಯಶ್ರೀ ಪಟ್ಟಣದ ನಾಟಕದ ಕುರಿತಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ರಂಗಕರ್ಮಿಗಳಾದ ಜಿ.ವಿ.ದೇಶಪಾಂಡೆ, ಬಿ.ವೈ.ಕೊಡಗಾನೂರ, ಅರುಣಾಚಾರ್ಯ ಹುನಗುಂದ, ವ್ಯಾಸತೀರ್ಥ ಜೋಶಿ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಧುತ್ತರಗಿಯವರ ನಾಟಕಗಳ ಫೋಟೋ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು ಹಾಗೂ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.
ಧುತ್ತರಗಿ ಪ್ರತಿಷ್ಠಾನದ ಸದಸ್ಯ ಡಾ.ಸಿತಿಮಾ ವಜ್ಜಲ, ರಂಗಾಸಕ್ತ ಅನಂತ ಬಬಲೇಶ್ವರ, ಶಿವಪುತ್ರಪ್ಪ ತಾರಿವಾಳ, ಹಿರಿಯ ಲೇಖಕ ಜಿ.ಬಿ.ಕಂಬಾಳಿಮಠ, ವಿಜಯಕುಮಾರ ಕುಲಕರ್ಣಿ, ಕಾಲೇಜು ಸಿಡಿಸಿ ಸದಸ್ಯ ಸಂಗಣ್ಣ ಎಮ್ಮಿ, ಕಸಾಪ ಅಧ್ಯಕ್ಷ ಮಲ್ಲಿರ್ಜುನ ಸಜ್ಜನ, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. ಸುಪ್ರಿಯಾ ಬೆಣಗಿ ಪ್ರಾರ್ಥಿಸಿದರು. ಈರಪ್ಪ ಗೋತಗಿ ಧುತ್ತರಗಿ ಅವರ ಮದುಮಗಳು ನಾಟಕದ ರಂಗಗೀತೆಗಳನ್ನು ಹಾಡಿದರು. ಡಾ.ಮುರ್ತುಜಾ ಒಂಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಲಿಂಗಪ್ಪ ಬೀಳಗಿ ನಿರೂಪಿಸಿದರು. ಡಾ.ನಾಗರಾಜ ನಾಡಗೌಡ ವಂದಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!