ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಾಜದ ಅಂಕುಡೊಂಕು ತಿದ್ದುವ ಕಂಪ್ಲಿ ಪತ್ರಕರ್ತರಿಗೆ ನಿವೇಶನ ಕಲ್ಪಿಸಿ : ಪಿ. ವಿರೇಶ

ಬಳ್ಳಾರಿ / ಕಂಪ್ಲಿ : ಪಟ್ಟಣದ ಅತಿಥಿ ಗೃಹದಲ್ಲಿ ಕಂಪ್ಲಿ ತಾಲೂಕು ಘಟಕದ ಪತ್ರಕರ್ತರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಮಿತಿಗೆ ಬಳ್ಳಾರಿ ಜಿಲ್ಲಾ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ತಾಲೂಕು ವರದಿಗಾರ ದ್ಯಾಮನಗೌಡ ಪಾಟೀಲ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಗಿ ದೊಡ್ಡ ಮಂಜುನಾಥ, ಪತ್ರಕರ್ತರ ಅಮರನಾಥ ಶಾಸ್ತ್ರೀ ಇವರಿಗೆ ಭಾನುವಾರ ಸನ್ಮಾನಿಸಿ ಗೌರವಿಸಿದರು. ನಂತರ ತಾಲೂಕು ಅಧ್ಯಕ್ಷ ಪಿ. ವಿರೇಶ ಮಾತನಾಡಿ, ಕಂಪ್ಲಿ ತಾಲೂಕಿನಿಂದ ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ದ್ಯಾಮನಗೌಡ ಪಾಟೀಲ್ ಇವರು ಅವಿರೋಧವಾಗಿ ಆಯ್ಕೆಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಮತ್ತು ಕನ್ನಡ ರಾಜ್ಯೋತ್ಸವ ಸಾಹಿತ್ಯ ವಿಭಾದಲ್ಲಿ ಜಿಲ್ಲಾ ಪ್ರಶಸ್ತಿಯನ್ನು ಬಂಗಿ ದೊಡ್ಡ ಮಂಜುನಾಥ ಪಡೆದಿರುವುದು ಖುಷಿ ತಂದಿದೆ ಹಾಗೂ ಪತ್ರಕರ್ತರ ಅಮರ್‌ನಾಥ ಶಾಸ್ತ್ರೀ ಬೆಂಗಳೂರಿನ ಮಾಧ್ಯಮ ವಲಯದಲ್ಲಿ ಕೆಲಸ ಮಾಡಲು ತೆರಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ನಮ್ಮ ಪತ್ರಿಕಾ ಮಾಧ್ಯಮದವರು ಎಲ್ಲಾ ರಂಗದಲ್ಲಿ ಬೆಳೆಯಬೇಕೆಂಬುದು ನಮ್ಮ ಉದ್ದೇಶವಾಗಿದೆ. ಹಲವು ವರ್ಷಗಳಿಂದ ಮಳೆ, ಬಿಸಿಲು, ಚಳಿ ಎನ್ನದೇ, ಸಮಾಜದ ಅಂಕುಡೊಂಕು ತಿದ್ದುವ ಕೆಲಸವನ್ನು ಪತ್ರಕರ್ತರು ಮಾಡುತ್ತಾ ಬಂದಿದ್ದಾರೆ. ಪತ್ರಕರ್ತರಿಗೆ ಗೌರವಧನ ಬಿಟ್ಟರೆ, ಯಾವುದೇ ವೇತನ ಇಲ್ಲದೇ, ಸಮಾಜ ಸೇವೆ ಮಾಡುತ್ತಿದ್ದಾರೆ. ಆದ್ದರಿಂದ ಪತ್ರಕರ್ತರಿಗೆ ನಿವೇಶನ ಜೊತೆಗೆ ಸೂರು ಒದಗಿಸಬೇಕೆಂಬುದು ಬಹುದಿನದ ಹಕ್ಕೋತ್ತಾಯವಾಗಿದೆ. ಮಾನ್ಯ ಶಾಸಕ ಗಣೇಶ, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಗಮನಕ್ಕೆ ಹಲವು ಬಾರಿ ಗಮನಕ್ಕೆ ತಂದಿದ್ದು, ನಿವೇಶನ ಒದಗಿಸಿಕೊಡುವ ಭರವಸೆಗಳು ಆಗುತ್ತಿವೆ ಹೊರತು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಪತ್ರಕರ್ತರ ಸಂಕಷ್ಟವನ್ನು ಆಲಿಸಿ, ನಿವೇಶನ ಒದಗಿಸಬೇಕು. ಮತ್ತು ಕಂಪ್ಲಿಯಲ್ಲಿ ಪತ್ರಿಕಾ ಭವನ ನಿರ್ಮಿಸಿಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಎಚ್.ಎಂ. ಪಂಡಿತಾರಾಧ್ಯ, ಕರಿ ವಿರುಪಾಕ್ಷಿ, ಜಿ.ಚಂದ್ರಶೇಖರಗೌಡ, ಎಸ್.ಯಮನಪ್ಪ, ಭಾವೈಕ್ಯ ವೆಂಕಟೇಶ, ಚಂದ್ರಶೇಖರ, ರಸೂಲ್ ಇದ್ದರು. ತದನಂತರ ಬಳ್ಳಾರಿಯಿಂದ ಬಂದಂತಹ ಹಿರಿಯ ವರದಿಗಾರರಾದ ಹೆಚ್.ಬಸವರಾಜ, ಮಲ್ಲಿಕಾರ್ಜನ ಚಿಲ್ಕರಾಗಿ, ರಮೇಶ ಇವರು ದ್ಯಾಮನಗೌಡ ಪಾಟೀಲ್, ಬಂಗಿ ಮಂಜುನಾಥ, ಅಮರನಾಥ ಶಾಸ್ತ್ರಿ ಸನ್ಮಾನಿಸಿ ಗೌರವಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!