ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಿದೆ : ಡಿಂಡಿ ಮಹರ್ಷಿ

ಬಳ್ಳಾರಿ / ಕಂಪ್ಲಿ : ಕನಕದಾಸರು ಸಮಾಜನದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಿದ್ದು, ಅವರ ಜೀವನ ಸಾರವನ್ನು ನಾವೆಲ್ಲರೂ ಅನುಸರಿಸೋಣ ಎಂದು ಕಂಪ್ಲಿ ತಾಲೂಕು ಹಾಲುಮತ (ಕುರುಬರ)ಸಮಾಜದ ಅಧ್ಯಕ್ಷ ಡಿಂಡಿ ಮಹರ್ಷಿ ಹೇಳಿದರು.
ಪಟ್ಟಣದ ಬಳ್ಳಾರಿ ರಸ್ತೆಯ ಎಚ್‌ಪಿ ಪೆಟ್ರೋಲ್ ಬಂಕ್ ಬಳಿಯಲ್ಲಿರುವ ಕನಕದಾಸ ವೃತ್ತದಲ್ಲಿ ಭಾವಚಿತ್ರಕ್ಕೆ ಹಾಗೂ ನಾಮಫಲಕಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶನಿವಾರ ಆಚರಿಸಿದ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನಾಡಿಗೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಇಂತಹ ಮಹನೀಯರ ತತ್ವ, ಆದರ್ಶ ಮತ್ತು ಚಿಂತನೆಗಳನ್ನು ಅನುಸರಿಸಿಕೊಂಡು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಬದುಕಬೇಕಿದೆ. ಸಮಾಜದ ಮೇಲು, ಕೀಳು ಹಾಗೂ ಮೂಢನಂಬಿಕೆ ಹೋಗಲಾಡಿಸಲು ಕನಕದಾಸರು ಶ್ರಮಿಸಿದರು. ಅವರ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಎಂದರು.
ಉಪನ್ಯಾಸಕ ರಾಜಕುಮಾರ ಕನಕದಾಸರ ಚರಿತ್ರೆಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಕನಕದಾಸರು ಬರೆದಂತಹ ರಾಮಧಾನ್ಯಚರಿತ, ಹರಿಭಕ್ತಸಾರ ಹಾಗೂ ಅವರ ಅನೇಕ ಕೃತಿಗಳು ಮನುಷ್ಯಪರವಾಗಿದೆ. ಅವರ ಕೃತಿಗಳನ್ನು ಓದುವ ಮೂಲಕ ಅವರ ಚಿಂತನೆಗಳನ್ನು ಯುವಜನಾಂಗ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ನಗರ ಘಟಕ ಅಧ್ಯಕ್ಷ ಕೆ.ವಸಂತಕುಮಾರ, ಉಪಾಧ್ಯಕ್ಷ ಕುರಿ ಸಿದ್ದಪ್ಪ, ಖಜಾಂಚಿ ಬಿ.ಶೇಖರ, ಮುಖಂಡರಾದ ಕೆ.ಯಮ್ಮನೂರಪ್ಪ, ಕೆ.ಹರಿನಾಥ, ಕುರಿ ಹುಸೇನಪ್ಪ, ಬಿ.ಲಕ್ಷ್ಮಣ, ಕುರಿ ಮಂಜುನಾಥ, ಬಲಕುಂದಿ ರಾಜಶೇಖರ, ಮೈಲಾರಿ ಯಲ್ಲಪ್ಪ, ಬಿಂಗಿ ವಿರುಪಣ್ಣ, ಉಳ್ಳೂರು ಪಕ್ಕೀರಪ್ಪ, ದೇವಸಮುದ್ರ ಪಾಂಡುರಂಗಪ್ಪ, ಎಂ.ಆನಂದ ಸೇರಿದಂತೆ ಅನೇಕರಿದ್ದರು.

ತಹಶೀಲ್ದಾರ್ ಕಛೇರಿ :
ಇಲ್ಲಿನ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಕನಕದಾಸರ ಜಯಂತಿ ಅರ್ಥಪೂರ್ಣವಾಗಿ ಆಚರಿಸಿದರು. ತಹಶೀಲ್ದಾರ್ ಜೂಗಲ್ ಮಂಜುನಾಯಕ, ಕಂಪ್ಲಿ ತಾಲೂಕು ಹಾಲುಮತ (ಕುರುಬರ)ಸಮಾಜದ ಅಧ್ಯಕ್ಷ ಡಿಂಡಿ ಮಹರ್ಷಿ, ಸಹಕಾರ ಸಂಘದ ನಾಮ ನಿರ್ದೇಶಿತ ಸದಸ್ಯ ಬಳ್ಳಾಪುರ ಲಿಂಗಪ್ಪ ಸೇರಿದಂತೆ ಹಾಲುಮತ ಸಮಾಜದ ಹಾಗೂ ಸಿಬ್ಬಂದಿ ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!