
ಬೆಳಗಾವಿ/ಮೂಡಲಗಿ: ಸೇಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎರಡು ದಿನಗಳ ಕಾಲ ಮಕ್ಕಳ ಶಾಲಾ ಪ್ರದರ್ಶನವು ವಿಜೃಂಭಣೆಯಿಂದ ನೆರವೇರಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರೇ. ವಿಜಯಕುಮಾರ ಮೂಡಲಗಿ, ರೇ. ಯಶ್ವಂತ ಮೂಡಲಗಿ ರೇ. ಎಭಿನೇಜರ್ ಕರಬನ್ನವರ ವಹಿಸಿದರು, ಉದ್ಘಾಟಕರಾಗಿ ಪುರಸಭಾ ಅಧ್ಯಕ್ಷರಾದ ಶ್ರೀಮತಿ ಖುರ್ಷದಬಾನು ನದಾಫ್ ಭಾಗವಹಿಸಿ ಮಕ್ಕಳ ಪ್ರತಿಭೆಯನ್ನು ಮೆಚ್ಚಿಕೊಂಡರು.
ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪಿ.ಬಿ. ಹಿರೇಮಠ, ಎಸ್.ಸಿ. ಅರ್ಗಿ, ಗೀತಾ ಹಿರೇಮಠ, ಮರಿಯಪ್ಪ ಮರೆಪ್ಪಗೊಳ, ಸುನೀತಾ ಎಸ್ ಅನ್ವರ್ ನದಾಫ್, ಸಂಗಮೇಶ್ ಕೌಜಲಗಿ ಹಾಗೂ ಅಜ್ಜಪ್ಪ ಅಂಗಡಿ ಚೇತನ್ ಜೋಗನ್ನವರ್ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಶಿಕ್ಷಣ ಸಂಯೋಜಕರಾದ ಆರ್ ವಿ ಯರಗಟ್ಟಿ, ಸಿ ಆರ್ ಪಿ ಎಸ್ ಎನ್ ದಬಾಡಿ, ದ್ಯಾಗಾನಟ್ಟಿ ಪತ್ರಿಕಾ ಮಿತ್ರರು ಉಪಸ್ಥಿತರಿದ್ದರು.
ನಿರ್ಣಾಯಕರಾಗಿ ಎಂ ಎಂ ಡಿ ಆರ್ ಎಸ್ ಶಾಲೆಯ ಆಂಗ್ಲಭಾಷಾ ಶಿಕ್ಷಕರಾದ ನದಾಫ್ , ಗೀತಾ ಹಿರೇಮಠ, ಶಶಿರೇಖಾ ಬೆಳ್ಳಕ್ಕಿ, ಶೀಲಾ ನೀಲನ್ನವರ್, ಗೀತಾ ವರಾಳೆ, ಅಶೋಕ್ ಬಸಳಿಗುಂದಿ,
ಶೇಖರ್ ಹುಡೇದ್, ರಶ್ಮಿ ಕಳ್ಳಿಮನಿ, ಜ್ಯೋತಿ ದೇಸಾಯಿ, ಜೆ ಎ ಮುತ್ನಾಳ್, ಸೌಮ್ಯ ಗಾಡವಿ ಶಾಲಾ
ಪ್ರದರ್ಶನದ ಫಲಿತಾಂಶವನ್ನು ನಿರ್ಣಯಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಡ್ಯಾನಿಯಲ್ ಸರ್ವಿ ಅವರ ನೇತೃತ್ವದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗ ಹಾಗೂ ವಿದ್ಯಾರ್ಥಿಗಳು, ಪಾಲಕರು ಉತ್ಸಾಹಭರಿತವಾಗಿ ವ್ಯವಸ್ಥಿತವಾಗಿ ಅಚ್ಚುಕಟ್ಟಾಗಿ ಮಕ್ಕಳಿಗೆ ಶಾಲಾ ಪ್ರದರ್ಶನದ ಮಾದರಿಗಳನ್ನು ತಯಾರು ಮಾಡಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ವಿವಿಧ ಸಾಂಸ್ಕೃತಿಕ, ಕಾರ್ಯಕ್ರಮಗಳು, ಕಲಾ ಪ್ರದರ್ಶನಗಳು ಹಾಗೂ ಮಕ್ಕಳ ಪ್ರತಿಭೆಯನ್ನು ಹೊಮ್ಮಿಸುವ ವಿವಿಧ ಸ್ಪರ್ಧೆಗಳು ನಡೆಯುವ ಮೂಲಕ ಎರಡು ದಿನಗಳ ಈ ಪ್ರದರ್ಶನವು ವೈವಿಧ್ಯಮಯವಾಗಿ ಯಶಸ್ವಿಯಾಯಿತು.
ಶಾಲಾ ಆಡಳಿತ ಮಂಡಳಿ ಮತ್ತು ಪಾಲಕರು ಈ ಕಾರ್ಯಕ್ರಮವನ್ನು ಶ್ಲಾಘಿಸಿದರು.
ವರದಿ ವಿಲ್ಸನ್ ಢವಳೇಶ್ವರ




















