ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಮಕ್ಕಳ ದಿನಾಚರಣೆ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ನಂತರ
ಪಾಲಕರು ಪೋಷಕರ ಸಭೆ ಮಾಡಲಾಯಿತು ಇದೇ ಸಮಯದಲ್ಲಿ ಶಾಲೆಯ ಮಕ್ಕಳ ತಾಯಂದಿರಿಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ವಿಜೇತರಿಗೆ ಉಡುಗೊರೆಯನ್ನು ನೀಡಿ ಗೌರವಿಸಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷರಾದ ನಿಂಗರಾಜು ಅವರು ಮಾತನಾಡಿ ಪಂಡಿತ್ ಜವಾಹರ್ ಲಾಲ್ ನೆಹರು ಅವರ ಕನಸಿನಂತೆ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿರುವೆವು ಮಕ್ಕಳಲ್ಲಿ ದೇವರನ್ನು ಕಾಣಬೇಕು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಸರ್ಕಾರದ ಶಾಲೆಯನ್ನು ನಮ್ಮ ಆಸ್ತಿಯೆಂದು ಕಾಪಾಡಿಕೊಂಡು ಹೋಗಬೇಕೆಂದು ತಿಳಿಸಿದರು.
ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಕೊಪ್ಪಳ ಜಿಲ್ಲಾಧ್ಯಕ್ಷರು ದೊಡ್ಡ ಬರಮಣ್ಣ ಮಾತನಾಡಿ ನಮ್ಮ ಸರ್ಕಾರ ಮತ್ತು ಶಿಕ್ಷಣ ಮಂತ್ರಿಗಳ ಆದೇಶದ ಮೇರೆಗೆ ಮಕ್ಕಳ ದಿನಾಚರಣೆ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರ ಜಯಂತಿ ಪ್ರಯುಕ್ತ ಪಾಲಕ ಪೋಷಕರ ಸಭೆಯನ್ನು ಇದೇ ಮೊದಲು ಆಚರಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುವುದು ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿ ಒಳ್ಳೆಯ ಸಂಸ್ಕಾರ, ಒಳ್ಳೆಯ ವಿದ್ಯೆ ನೀಡಿದರೆ ಮಾತ್ರ ಒಳ್ಳೆಯ ಪ್ರಜೆಯಾಗುವರು ಎಂದು ಹೇಳಿದರು.
ಬಹುಮಾನ ವಿಜೇತರು
ಪ್ರಥಮ ಬಹುಮಾನ ನೀಲಮ್ಮ ಗಂಡ ಬಸವರಾಜ್ ಆಗೋಲಿ
ದ್ವಿತೀಯ ಬಹುಮಾನ ನೇತ್ರಾವತಿ ಗಂಡ ವಿರೇಶ್
ತೃತೀಯ ಬಹುಮಾನವನ್ನು ಶಶಿಕಲಾ ಮಲ್ಲೇಶ್
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಶಿವಮ್ಮ, ಸಹ ಶಿಕ್ಷಕರಾದ ಕಿರಣ್ ಕುಮಾರ್ , ಜೆಡಿಯಪ್ಪ ,ಶಿಕ್ಷಕಿಯರಾದ ಲಕ್ಮಿ ,ಸರೋಜಾ, ರೂಪಾ ಸೇರಿದಂತೆ ಹನುಮಂತಪ್ಪ ನಾಗನಹಳ್ಳಿ, ರುದ್ರೇಶ್, ವೀರಣ್ಣ ಬಡಿಗೇರ್, ವೆಂಕೋಬ ಪೂಜಾರ್, ಜಂಬಣ್ಣ ಬರಗೂರ್ ಹಾಗೂ ಊರಿನ ಎಲ್ಲಾ ಪಾಲಕರು ಪೋಷಕರು ಭಾಗವಹಿಸಿದ್ದರು
ವರದಿ ದೊಡ್ಡ ಬರಮಣ್ಣ



















