
ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೃಹತ್ ಮಟ್ಟದಲ್ಲಿ ರೈತರಿಂದ ಸತತವಾಗಿ 6 ನೇ ದಿನದ ಸತ್ಯಾಗ್ರಹದಿಂದಾಗಿ ಅಖಂಡ ಲಕ್ಷ್ಮೇಶ್ವರ ಪಟ್ಟಣವೇ ಬಂದ್ ಗೆ ಬಿಕೋ ಎನ್ನುವಂತಿತ್ತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ, ರೈತ ಬೆಳೆದ ಗೋವಿನ ಜೋಳದ ಬೆಳೆಗೆ ಬೆಂಬಲ ಬೆಲೆ ನೀಡಬೇಕೆಂದು ಉಗ್ರ ಹೋರಾಟ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ವಿವಿಧ ಮಠಾಧೀಶರು, ರೈತ ಸೇನೆ, ಕನ್ನಡಪರ ಸಂಘಟನೆಗಳು, ವಿದ್ಯಾರ್ಥಿ ಬಳಗ, ಹಮಾಲರ ಸಂಘ, ಟ್ರ್ಯಾಕ್ಟರ್ ರಿಪೇರಿ ಸಂಘಟನೆ, ಬೀದಿ ಬದಿ ವ್ಯಾಪಾರಸ್ಥರು, ಅಂಬೇಡ್ಕರ್ ಸೇನೆ, ಟಿಪ್ಪು ಸೇನೆ ಮುಂತಾದ ಸಂಘಟನೆಗಳು ವಿವಿಧ ಗ್ರಾಮದ ರೈತರು ಸೇರಿ ಸರ್ಕಾರ ಮತ್ತು ಅಧಿಕಾರಿಗಳು ವಿರುದ್ಧ ಘೋಷಣೆ ಕೂಗಿದರು. ರೈತರು ನಿರಂತರ 4 ದಿನಗಳಿಂದ ಉಪವಾಸ ಕೈಗೊಂಡಿದ್ದರು.
ವರದಿ – ಸದಾಶಿವ ಭೀ. ಮುಡೆಮ್ಮನವರ



















