
ಕೊಪ್ಪಳ: ವಿದ್ಯಾರ್ಥಿನಿಯರು ಸ್ವಯಂ ಆಲೋಚನೆ ಮತ್ತು ಅರಿವು ಬೆಳಸಿಕೊಳ್ಳಬೇಕು ಎಂದು ಕೊಪ್ಪಳದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಭಾರ ಪ್ರಾಚಾರ್ಯ ಡಾ. ಹುಲಿಗೆಮ್ಮ ಹೇಳಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ರೆಂಜರ್ಸ್ ( ಸ್ಕೌಟ್ ಮತ್ತು ಗೈಡ್ ) ವಿದ್ಯಾರ್ಥಿ ನಿಯರಿಗೆ ಅಭಿಯೋಜನೆ ಮತ್ತು ಸ್ವಾಗತ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಿಕ್ಷಕರಿಗಿಂತ ವಿದ್ಯಾರ್ಥಿಗಳು ಬಹಳ ಕ್ರಿಯಾಶೀಲರಾಗಿರಬೇಕು,
ನೆಪಗಳನ್ನು ಹೇಳುತ್ತಾ ಕಾಲ ಕಳೆಯಬಾರದು, ಮಹಿಳೆಯರ ಮೇಲೆ ಬಹಳ ಜವಾಬ್ದಾರಿ ಇದೆ, ವಿದ್ಯಾರ್ಥಿಗಳು ಅರಿವು ಮತ್ತು ಸ್ವಯಂ ಆಲೋಚನೆಗಳು, ಶಿಸ್ತು, ಸಮಯ ಪ್ರೆಜ್ಞೆ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ವಿದ್ಯಾರ್ಥಿನಿಯರಾದ ಲಕ್ಷ್ಮಿ, ದುರಗಮ್ಮ, ಕಮಲ, ಪವಿತ್ರ , ವೈಷ್ಣವಿ ಸ್ಕೌಟ್ ಮತ್ತು ಗೈಡ್ಸ್ ಅರ್ಥ, ಇತಿಹಾಸ, ನಿಯಮಗಳು, ಮಾರ್ಗದರ್ಶನಗಳು, ಉದ್ದೇಶಗಳು ಕುರಿತು ಅನಿಸಿಕೆಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣದ ಭೋದಕರಾದ ಡಾ. ಪ್ರದೀಪ್ ಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಸಮಯ ಪಾಲನೆ, ದೇಶಭಕ್ತಿ, ಹಿರಿಯರಿಗೆ ಗೌರವ ಕೊಡುವುದು ಮತ್ತು ಸೇವೆಯನ್ನು ಪಾಲಿಸಬೇಕು. ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ದೇಶದ ಬೆಳವಣಿಗೆ ಕಾರಣವಾಗಬೇಕು. ಸಿಕ್ಕ ಅವಕಾಶಗಳು ಮತ್ತು ಸಮಯವನ್ನು ಬಳಸಿಕೊಳ್ಳಬೇಕು. ನೀವು ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ಶಾಸ್ತ್ರದ ಸಹಾಯಕ ಪ್ರಾಧ್ಯಪಕರು ಮತ್ತು ರೇಂಜರ್ಸ್ ಘಟಕದ ನಿಕಟ ಪೂರ್ವ ಸಂಚಾಲಕರಾದ ಸುಮಿತ್ರಾ ಎಸ್. ವಿ ಮಾತನಾಡುತ್ತ ನಮ್ಮ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ ಸಿಕ್ಕಿದೆ. ನೀವು ಸಮರ್ಪಣೆ ಮನೋಭಾವನೆ ಬೆಳಸಿಕೊಳ್ಳಬೇಕು. ಯಾವುಗಲು ಸೇವೆ ಮಾಡುವುದಕ್ಕೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಿದ್ದರಾಗಿಬೇಕು. ನೀವು ಕೂಡಾ ದೇಶದ ಗಡಿ ಕಾಯುವ ಸೈನಿಕರಿದ್ದಂತೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸ್ಕೌಟ್ ಮತ್ತು ಗೈಡ್ ನ ಸಂಚಾಲಕರಾದ ಶುಭ ಟಿ. ಈ ಪ್ರಾಸ್ತವಿಕವಾಗಿ ಮಾತನಾಡುತ್ತಾ ಕಾಲೇಜಿನಲ್ಲಿ ಓದುವ ಸಂದರ್ಭದಲ್ಲಿ ಪಠ್ಯತರ ಚಟುವಟಿಕೆಗಳಲ್ಲಿ ಮತ್ತು ಈ ರೀತಿಯ ಘಟಕಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳ ವ್ಯಕ್ತಿತ್ವ ಮತ್ತು ಜ್ಞಾನ ವಿಕಾಸವಾಗುತ್ತದೆ, ಜೀವನಕ್ಕೆ ಉಪಯೋಗಕ್ಕೆವಾಗುವ ವಿಷಯಗಳನ್ನು ಕಲಿಯುತ್ತೀರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನರಸಿಂಹ, ಇಂಗ್ಲಿಷ್ ವಿಭಾಗದ ಸಹಾಯಕ
ಪ್ರಾಧ್ಯಾಪಕ ಸುಮಯ್ಯ ಕೆ. ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಭವ್ಯ ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿದರು. ಶಕುಂತಲಾ ವಂದಿಸಿದರು.
- ಕರುನಾಡ ಕಂದ ಪತ್ರಿಕೆ





















One Response
Hanamageri