ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸತ್ಕಾರ್ಯಗಳಿಂದ ಬದುಕು ಸಾರ್ಥಕ : ಶ್ರೀ ರಂಭಾಪುರಿ ಜಗದ್ಗುರುಗಳು

ಗುರುಮಠಕಲ್ : ಯೌವನ ಸಂಪತ್ತು ಆಯುಷ್ಯ ಶಾಶ್ವತವಲ್ಲ. ಧರ್ಮ ದೇವರು ಮನಸ್ಸನ್ನು ಅರಳಿಸಲು ಬೇಕು. ಕಣ್ಣು ಒಳ್ಳೆಯದನ್ನು ಕಾಣಲಿ. ಕಿವಿ ಒಳ್ಳೆಯದನ್ನು ಕೇಳಲಿ. ನಾಲಿಗೆಯಿಂದ ಒಳ್ಳೆಯದನ್ನು ನುಡಿಯುವಂತಾದರೆ ಜೀವನ ಪಾವನ. ಸತ್ಕಾರ್ಯಗಳ ಮೂಲಕ ಮಾನವ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.


ಅವರು ಶುಕ್ರವಾರ ನಗರದ ಎಸ್.ಎಮ್.ಆರ್. ಕಲ್ಯಾಣ ಮಂಟಪದಲ್ಲಿ ಮಣ್ಣಿನಿಂದ ಮುಕ್ತಿಗೆ-ಆಧ್ಯಾತ್ಮಿಕ ಚಿಂತನ ಮಂಥನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಬದುಕು ಭಗವಂತ ಕೊಟ್ಟ ಅಮೂಲ್ಯ ಕೊಡುಗೆ. ಆದರ್ಶ ಮೌಲ್ಯಗಳ ಪರಿಪಾಲನೆಯಿಂದ ಬದುಕನ್ನು ಕಟ್ಟಿಕೊಳ್ಳಲು ಪ್ರಯತ್ನಿಸಬೇಕು. ಮನಕ್ಕೆ ಶಾಂತಿ ಆತ್ಮಕ್ಕೆ ಆನಂದ ಕೊಡುವುದು ಧರ್ಮ. ಸಮಾಜದ ಕಷ್ಟ ಸುಖಗಳನ್ನು ಚಿಂತಿಸಿ ಅವುಗಳಿಗೆ ಪರಿಹಾರ ಹುಡುಕಿ ಕಾರ್ಯ ಪ್ರವೃತ್ತರಾಗುವುದೇ ನಿಜವಾದ ಧರ್ಮವಾಗಿದೆ. ಮನುಷ್ಯ ಧರ್ಮಕ್ಕೆ ತಲೆ ಬಾಗಬೇಕೇ ಹೊರತು ಅವಿವೇಕಿಗಳಿಗಲ್ಲ. ಸಂಬಂಧವೆಂದರೆ ವಯಸ್ಸು ದೂರ ಸಂಪರ್ಕಗಳನ್ನು ಮೀರಿದ ಸ್ಥಿತಿ. ವಿಶ್ವಾಸ ನಿಷ್ಠೆಗಳಿಂದ ಮಾತ್ರ ನಿಜ ಸಂಬಂಧ ಉಳಿಯಲು ಸಾಧ್ಯ. ಬೀಜದಂತೆ ಮನುಷ್ಯನಲ್ಲಿಯೂ ಸಹ ಅದ್ಭುತ ಶಕ್ತಿ ಸಾಮರ್ಥ್ಯವಿದೆ. ಬೀಜದಿಂದ ವೃಕ್ಷ ಬೆಳೆಯುತ್ತದೆ. ಸುಂದರ ಹೂವು ರುಚಿಯಾದ ಹಣ್ಣು ಮೈತುಂಬ ಹಸಿರು ಎಲೆ ತಣ್ಣನೆಯ ನೆರಳು ಶುದ್ಧವಾದ ಗಾಳಿ ಕೊಡುತ್ತದೆ. ಮನುಷ್ಯನಲ್ಲಿರುವ ಸಾಮರ್ಥ್ಯವನ್ನು ಸದ್ಬಳಕೆ ಮಾಡಿಕೊಂಡು ಬಾಳಿದರೆ ಜೀವನ ಉತ್ತುಂಗಕ್ಕೇರುವುದೆಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದಲ್ಲಿ ಬೋಧಿಸಿದ್ದಾರೆ. ಅರಿತು ಆಚರಿಸಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದರು.

ಸಗರ ನಾಗಠಾಣ ಹಿರೇಮಠದ ಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸಿದ್ದರು. ಮಳಖೇಡ ಮೂಲಾಧಾರ ಹಿರೇಮಠದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ ಸ್ವಾಮಿಗಳು, ಮಳಖೇಡ ಬಂಗಿಮಠದ ಕೊಟ್ಟೂರೇಶ್ವರ ಶಿವಾಚಾರ್ಯ ಸ್ವಾಮಿಗಳು, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮಿಗಳು ಸಮ್ಮುಖ ವಹಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಶಾಸಕ ಶರಣಗೌಡ ಕಂದಕೂರು ಮಾತನಾಡಿ ಜೀವನಾಧಾರಕ್ಕೆ ನೀರು ಅನ್ನ ಗಾಳಿ ಬೆಳಕು ಮತ್ತು ಒಳ್ಳೆಯ ಮಾತು ಬಹಳ ಮುಖ್ಯ. ಮಾನವೀಯತೆಯೇ ಭಾರತೀಯ ಸಂಸ್ಕೃತಿಯ ತಳಹದಿ. ಬಾಯಾರಿದವನಿಗೆ ನೀರು ಹಸಿದವನಿಗೆ ಅನ್ನ ಕೊಡುವುದೇ ನಿಜವಾದ ಧರ್ಮ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯವಾಗಿದೆ. ಪಂಚ ಭೂತಗಳಿಂದ ನಿರ್ಮಾಣಗೊಂಡ ಈ ಜೀವ ಜಗತ್ತು ಕೊನೆಗೆ ಒಂದು ದಿನ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತದೆ. ಅರಿವುಳ್ಳ ಜನ್ಮದಲ್ಲಿ ಹುಟ್ಟಿದ ಮೇಲೆ ಹುಟ್ಟಿದ ಮೇಲೆ ಒಂದಿಷ್ಟಾದರೂ ಶಿವಜ್ಞಾನ ಪಡೆದು ಗುರು ಕಾರುಣ್ಯಕ್ಕೆ ಒಳಗಾದರೆ ಜೀವನ ಸಾರ್ಥಕಗೊಳ್ಳುವುದೆಂದರು.
ರೇವಣಸಿದ್ಧಯ್ಯ ಡೆಂಗಿಮಠ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಿಸಿದ ವಿಜಯಕುಮಾರ ಹಿರೇಮಠ ಮೊದಲ್ಗೊಂಡು ಹಲವಾರು ಗಣ್ಯರು ಪಾಲ್ಗೊಂಡು ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು. ಬಾಳೆಹೊನ್ನೂರು ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ ಜರುಗಿತು. ವೀರಣ್ಣ ಭಾಗೋಜಿ ಸ್ವಾಗತಿಸಿದರು. ಮಡಿವಾಳಯ್ಯ ಶಾಸ್ತ್ರೀ ಗಳು ಜೇರಟಗಿ ನಿರೂಪಿಸಿದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!