ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯುವ ಸಮುದಾಯ ದುಷ್ಟ ಚಟಗಳಿಂದ ದೂರವಿದ್ದು ಜಾಗೃತಿ ವಹಿಸಬೇಕು

ಕೊಪ್ಪಳ/ ಯಲಬುರ್ಗಾ: ಯುವ ಸಮುದಾಯ ಗುಟಕಾ, ಸಿಗರೇಟ್ , ಮದ್ಯಪಾನ ಇಂತಹ ದುಷ್ಟ ಚಟಗಳಿಗೆ ಅಂಟಿಕೊಂಡು ತಮ್ಮ ಬದುಕನ್ನು ಹಾಳುಮಾಡಿಕೊಳ್ಳದೆ ಉತ್ತಮರ ಸಂಘವನ್ನು ಮಾಡಬೇಕು ಎಂದು ಆರೋಗ್ಯ ಇಲಾಖೆಯ ಟಿ. ಕೃಷ್ಣಪ್ಪ ಅವರು ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮದ ಗದಿಗೆಮ್ಮ ಬಳೂಟಗಿ ಪ್ರೌಢ ಶಾಲೆಯಲ್ಲಿ ಜರುಗಿದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ಧರ್ಮಸ್ಥಳದ ಪೂಜ್ಯರು ೨೧ ನೆ ಪಟ್ಟಾಧಿಕಾರವನ್ನು ವಹಿಸಿಕೊಂಡು ಧಾರ್ಮಿಕ, ಸಮಾಜಮುಖಿ ಹಲವಾರು ಯೋಜನೆಗಳ ಮೂಲಕ ಬಡವರಿಗೆ ದಾರದೀಪವಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಯೋಜನಾಧಿಕಾರಿ ಗಣೇಶ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರಿಗೆ ಬ್ಯಾಂಕಿನ ವ್ಯವಹಾರದ ಮಾಹಿತಿಯನ್ನು ನೀಡಿ ಅವರಿಗೆ ಸಾಲ ಸೌಲಭ್ಯಗಳನ್ನು ನೀಡಿ ಅವರ ಬದುಕಿಗೆ ಆಸರೆಯಾಗಿದ್ದಾರೆ ಎಂದು
ಜಿಲ್ಲಾ ಜನಜಾಗೃತಿ ಸಮಿತಿಯ ಸದಸ್ಯರಾದ ಶಕುಂತಲಾದೇವಿ ಮಾಲಿಪಾಟೀಲ ಮಾತನಾಡಿದರು. ಸಿಗರೇಟ್ ಧೂಮಪಾನ ಸೇವನೆಯಿಂದ ವಿಷ ಪಧಾರ್ಥಗಳು ನಮ್ಮ ಹೊಟ್ಟೆ ಸೇರಿ ನೂರು ವರ್ಷ ಬದುಕಿ ಬಾಳಬೇಕಾದವರು ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿ ನಮ್ಮ ಬದುಕು ಬೀದಿ ಪಾಲಾಗಿ ಹೋಗುತ್ತದೆ ಆದ್ದರಿಂದ ದುಷ್ಟ ಚಟಗಳನ್ನು ಬಿಟ್ಟು ಆರೋಗ್ಯವಂತರಾಗಬೇಕು, ಕೋಟಿ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ ,ಯುವ ಸಮುದಾಯ ಇದನ್ನು ಅರಿತುಕೊಂಡು ನಿಮ್ಮ ಪಾಲಕರಿಗೂ ಇದರ ಮಾಹಿತಿಯನ್ನು ನೀಡಬೇಕು ಸುಂದರ ಸಮಾಜ ಪರಿಸರ ನಿರ್ಮಿಸುವಲ್ಲಿ ನಿಮ್ಮ ಪಾತ್ರ ಮಹತ್ವವಾಗಿದೆ ಎಂದು ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯ ಶರಣಬಸಪ್ಪ ದಾನಕೈ ಅವರು ಮಾತನಾಡಿದರು. ಮುಖ್ಯಗುರು ನಾಗಭೂಷಣ ಚಿನಿವಾಲರ, ಎಸ್.ಡಿ.ಎಂ.ಸಿ ಅಧ್ಯಕ್ಷ ಹನುಮಂತಪ್ಪ ಗೋಸಾವಿ, ಶಿಕ್ಷಕರಾದ ಶಿವಶಂಕರಯ್ಯ ಹಿರೇಮಠ, ಸಂಗಪ್ಪ ಸಂಗಳದ, ದೇವಪ್ಪ ಮುಗುಳಿ, ಮಲ್ಲನಗೌಡ್ರ ಎಂ.ಬಿ ಹಾಗೂ ಮುಖಂಡರಾದ ಅಶೋಕ ಕೋಳಿಹಾಳ, ಸುಭಾಷ ಕೊಂಗಿ, ಮಲ್ಲಿಕಾರ್ಜುನ ಎಂಟೆತ್ತಿನ, ಮೇಲ್ವಿಚಾರಕರಾದ ,ಈಶ್ವರ ಸಿ, ಸೇವಾ ಪ್ರತಿನಿಧಿ ರಾಜಾಭಕ್ಷಿ ಸೇರಿದಂತೆ ಸಿಬ್ಬಂದಿ ,ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!