ದೆಹಲಿ /ಬೆಂಗಳೂರು: ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ವಿಂಧ್ಯಾ ಇ-ಇನ್ಫೋಮೀಡಿಯಾ ಸಂಸ್ಥೆಯು ದಿ. 3-12-2025 ರಂದು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ದಿವ್ಯಾಂಗ ಸಬಲೀಕರಣ ಇಲಾಖೆಯ ವತಿಯಿಂದ ಕೊಡ ಮಾಡುವ ಅಂಗವಿಕಲ ವ್ಯಕ್ತಿಗಳ ಸಬಲೀಕರಣಕ್ಕಾಗಿ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದು ಭಾರತ ಸರಕಾರದ ಘನತೆವೆತ್ತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮರ್ಮು ಅವರಿಂದ ವಿಂಧ್ಯಾ ಇ ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್ ಇದರ ಇದರ ಸಂಸ್ಥಾಪಕಿ ಪ್ರಧಾನ ನಿರ್ದೇಶಕಿ ಶ್ರೀಮತಿ ಪವಿತ್ರಾ ವೈ ಸುಂದರೇಶನ್ ಇವರು ಪ್ರಶಸ್ತಿ ಸ್ವೀಕರಿಸಿದರು.
ದೇಶಾದ್ಯಂತ ಅಂಗವಿಕಲ ವ್ಯಕ್ತಿಗಳಿಗೆ ದೊಡ್ಡ ಪ್ರಮಾಣದ, ಅರ್ಥಪೂರ್ಣ ಮತ್ತು ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ದೀರ್ಘಕಾಲದ ಬದ್ಧತೆಯನ್ನು ಗುರುತಿಸಿ, ಸರ್ವಶ್ರೇಷ್ಠ ನಿಯೋಕ್ತ (ಅತ್ಯುತ್ತಮ ಉದ್ಯೋಗದಾತ) ವಿಭಾಗದ ಅಡಿಯಲ್ಲಿಯ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಸಾವಿರಾರು ವಿಕಲಚೇತನರ ಜೀವನದ ಕನಸಿಗೆ ತೇಜಸ್ಸನ್ನು ತಂದಿದ್ದಾರೆ ಎಂದು ಈ ಶುಭ ಸಂದರ್ಭದಲ್ಲಿ ಇಂಡಿಯನ್ ದಿವ್ಯಾಂಗ ಎಂಪವರ್ಮೆಂಟ್ ಅಸೋಸಿಯೇಷನ್ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಅವರು ಪ್ರಕಟಣೆಯ ಮೂಲಕ ಅಭಿನಂದಿಸಿದ್ದಾರೆ.





















One Response