ಬೆಳಗಾವಿ : ಅಥಣಿಯಲ್ಲಿ 07/12/2025 ರಂದು ಕರ್ ಕರ್ ಮುಂಡಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಹಣಮಂತ ಮಹದೇವಪ್ಪ ಗುಂಜಿಯವರು ಮಾತನಾಡಿ ಹಲವು ದಶಕಗಳಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯ ವಾಹಿನಿಯಿಂದ ವಂಚಿತರಾದ ಕರ್ ಕರ್ ಮುಂಡಾ ಸಮಾಜದ ಜನರು ಇಂದಿಗೂ ಭೀಕ್ಷಾಟನೆ ವೃತ್ತಿ ಮಾಡುತ್ತ ಊರಿಂದ ಊರಿಗೆ ಅಲಿಯುತ್ತಾ ಜೋಪಡಿಗಳಲ್ಲಿ ವಾಸಿಸುತ್ತಾ ತೀರಾ ಕಷ್ಟಕರ ಜೀವನ ಸಾಗಿಸುತ್ತಿದ್ದಾರೆ.
ಇಂದಿನ ಆಧುನಿಕ ಯುಗದಲ್ಲಿಯೂ ಅದೇ ಅಲೆಮಾರಿ ಜೀವನ ಸಾಗಿಸಿ ಬದುಕು ಕಟ್ಟಿಕೊಳ್ಳುತ್ತಿರುವ ಕರ್ ಕರ್ ಮುಂಡಾ ಸಮಾಜವನ್ನು ಸರ್ಕಾರದ ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ ಪ್ರತ್ಯೇಕವಾಗಿ ಕರ್ ಕರ್ ಮುಂಡಾ ಅಭಿವೃದ್ಧಿ ನಿಗಮ ರಚಿಸುವಂತೆ ಒತ್ತಾಯ ಮಾಡುವುದರ ಜೊತೆಗೆ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಕರ್ ಕರ್ ಮುಂಡಾ ಸಮಾಜದ ಆತ್ಮಗೌರವ, ಸ್ವಾಭಿಮಾನ ಹಾಗೂ ನೈತಿಕ ಬಲ ಹೆಚ್ಚಿಸಬೇಕಾದರೆ ನಮಗೆ ಮೀಸಲಾತಿ ದೊರಕಿಸಿಕೊಡಬೇಕು ಮತ್ತು ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರಿಗೆ ಕರ್ ಕರ್ ಮುಂಡಾ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪರವಾಗಿ ಮನವಿ ಸಲ್ಲಿಸಲಾಯಿತು.
ವರದಿ. ವಿಠ್ಠಲ ಖೋಕಾಟೆ



















