ಮೂರು ಹೊತ್ತಿನ ಊಟಕ್ಕಾಗಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಹೋರಾಟ. ಕೆಲ ಜನರ ಬದುಕಿನ ಹೋರಾಟ ಕಂಡಾಗ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ಪುಟ್ಟ ಹುಡುಗಿಯೊಬ್ಬಳು ಹಗ್ಗದ ಮೇಲೆ ನಡೆಯುತ್ತಾ ಕುಟುಂಬಕ್ಕಾಗಿ ತನ್ನ ಬಾಲ್ಯವನ್ನೇ ಮಾರಿದ್ದಾಳೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಕಣ್ಣನ್ನು ಒದ್ದೆಯಾಗಿಸಿದೆ.
ಬದುಕು ಅಂದುಕೊಂಡಷ್ಟು ಸುಲಭವಲ್ಲ. ಕೆಲವರು ಎಲ್ಲಾ ಇದ್ದು ನೆಮ್ಮದಿಗಾಗಿ ಹೋರಾಟ ನಡೆಸಿದರೆ, ಇನ್ನು ಕೆಲವರು ಮೂರು ಹೊತ್ತಿನ ತುತ್ತಿಗಾಗಿ ಹೋರಾಟಕ್ಕೆ ಇಳಿಯುತ್ತಾರೆ. ಬಡತನದಿಂದಾಗಿ ಸಣ್ಣ ವಯಸ್ಸಿನಲ್ಲಿಯೇ ಕುಟುಂಬಕ್ಕೆ ಹೆಗಲರಾಗುತ್ತಾರೆ. ಈ ಪುಟ್ಟ ಹುಡುಗಿಯದು ಅದೇ ರೀತಿಯ ಬದುಕು. ಪುಟ್ಟ ಹುಡುಗಿಯೂ ಓದುವ ವಯಸ್ಸಿನಲ್ಲಿ ಈ ಹಗ್ಗದಲ್ಲೇ ನಡೆದಾಡುತ್ತಾ ಜವಾಬ್ದಾರಿ ನಡುವೆ ಹೋರಾಟ ನಡೆಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.
ವಿಡಿಯೋ ಒಂದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬದುಕಿನ ಹೋರಾಟ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಚಿಕ್ಕ ವಯಸ್ಸಿನಲ್ಲಿ ಜವಾಬ್ದಾರಿ ಎಂದರೆ ಇನ್ನೊಬ್ಬರು, ನಿಮ್ಮ ವೀವ್ಸ್ ಗಳಿಗೆ ಅವರ ಬದುಕೇ ಬಂಡವಾಳ, ಆ ಬಂಡವಾಳಕ್ಕೆ ಸಿಗಲಿ ಸರಿಯಾದ ಪ್ರತಿಫಲ ಎಂದು ಕಾಮೆಂಟ್ ಮಾಡಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















