(ಕಡಲೆ ಬೇಳೆಗಳಿಗೆ ಕೀಟ ಬಾಧೆ, ಸಿಡಿ ರೋಗದ ನಿಯಂತ್ರಣದ ಬಗ್ಗೆ ಸಲಹೆ )
ಗದಗ :ತಾಲ್ಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಕಡಲೆ ಬೇಳೆ ಬೆಳೆದ ರೈತರ ಜಮೀನುಗಳಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕೃಷಿ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗದಗ ಕೃಷಿ ಇಲಾಖೆ ಉಪ ನಿರ್ದೇಶಕರಾದ ಶ್ರೀಮತಿ ಸ್ಪೂರ್ತಿ ಜಿ ಎಸ್ ಅವರು ಮಾತನಾಡಿ ಬಿತ್ತನೆಗೆ ಮೊದಲು ಸರಿಯಾಗಿ ಬೀಜೋಪಚಾರ ಮಾಡುವುದರಿಂದ ಬೀಜಗಳಿಂದ ಹಾಗೂ ಮಣ್ಣಿನಿಂದ ಬರುವ ರೋಗಗಳನ್ನು ತಡೆಗಟ್ಟಲು ಸಾಧ್ಯ,
ಕಡಲೆ ಬೆಳೆಗಳಲ್ಲಿ ಸಿಡಿ ರೋಗ ನಿಯಂತ್ರಣಕ್ಕೆ
ಟ್ರೈಕೋಡರ್ಮ ಬೀಜೋಪಚಾರ ಮಾಡುವುದರಿಂದ ಸಿಡಿ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಕೃಷಿ ಇಲಾಖೆಯಿಂದ ಈ ವರ್ಷ ರಿಯಾಯಿತಿ ದರದಲ್ಲಿ ಕೊಡಮಾಡಿದ ಬಿಜಿಡಿ 111 – 1 ಸುಧಾರಿತ ತಳಿ ಯಾಗಿದ್ದು ಹೆಚ್ಚು ಇಳುವರಿ ಹಾಗೂ ರೋಗನಿರೋಧಕ ಶಕ್ತಿಯನ್ನು ಹೊಂದಿದೆ ಎಂದು ಹೇಳಿದರು.
ಕೃಷಿ ವಿಜ್ಞಾನಿ ಡಾಕ್ಟರ್ ಕಲಾವತಿ ಕಾಂಬಳೆ ಅವರು ಮಾತನಾಡಿ ರೈತರು ವರ್ಷದಿಂದ ವರ್ಷಕ್ಕೆ ಪರ್ಯಾಯ ಬೆಳೆಯನ್ನು ಬೆಳೆಯುವುದರಿಂದ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಕಡಲೆ ಬಿತ್ತನೆ ಜೊತೆಗೆ ಮಿಶ್ರ ಬೆಳೆಯಾಗಿ ಜೋಳವನ್ನು ಸೇರಿಸಿ ಬಿದ್ದರೆ ಪಕ್ಷಿಗಳನ್ನು ಆಕರ್ಷಿಸಿ ಕೀಟಗಳ ಹತೋಟಿಯನ್ನು ಮಾಡಲು ಸಹಾಯಕವಾಗುತ್ತದೆ.
ಸಿಡಿರೋಗ ಕಂಡುಬಂದಂತೆ ಗಿಡಗಳನ್ನು ಕಿತ್ತು ಸುಟ್ಟು ಹಾಕುವುದರಿಂದ ರೋಗವನ್ನು ಹರಡಲು ತಡೆದಿಟ್ಟಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಳ್ಳಿ ಶಾಸ್ತ್ರಜ್ಞ ಡಾ. ಮೋಳಗಿ, ಹಾಗೂ ರೈತ ಸಂಘ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಕೃಷಿ ಅಧಿಕಾರಿ ಬಸವ ರಾಜೇಶ್ವರಿ ಸಜ್ಜನರ, ರಮೇಶ ಜತ್ತಿ ಹಾಗೂ ರೈತರಾದ ಶರಣಪ್ಪ ಜೋಗಿನ, ಹಾಲ್ಲಪ್ಪ ಗದಗ, ಹುಚ್ಚೀರಪ್ಪ ಜೋಗಿನ, ಶ್ರೀಕಾಂತ ಗುಡ್ಲಾನೂರು, ಮಾರುತಿ ಜೋಗಿನ, ಗಿರೀಶ್ ಗುಡ್ಲಾನೂರು ಸೇರಿದಂತೆ ಇನ್ನೂ ಮುಂತಾದ ರೈತರು ಪಾಲ್ಗೊಂಡಿದ್ದರು.
- ಕರುನಾಡ ಕಂದ ಪತ್ರಿಕೆ.




















