ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಖಾಸಗಿ ಬಸ್ ಚಾಲಕನ ರಾಸಲೀಲೆ ವಿಡಿಯೋ ಜಗಜ್ಜಾಹೀರು : ಹೆಂಡತಿ ಮನೆಯಲ್ಲಿದ್ದರೂ ಅವಿವಾಹಿತ ಯುವತಿ ಜೊತೆ ಪ್ರಣಯದಾಟ

ಹೊನ್ನಾವರ : ಮದುವೆಯಾಗಿ ಮನೆಯಲ್ಲಿ ಹೆಂಡತಿ ಮಗು ಇರುವ ಖಾಸಗಿ ಬಸ್ ಚಾಲಕನೊಬ್ಬ ಯುವತಿಯ ಸಹವಾಸಕ್ಕೆ ಬಿದ್ದು, ಮೋಜು ಮಸ್ತಿ ಮಾಡಿಕೊಂಡಿದ್ದ, ಇದೀಗ ಆಕೆಯೊಂದಿಗೆ ಇರುವ ರಾಸಲೀಲೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಲೂಕಿನ ಗ್ರಾಮೀಣ ಪ್ರದೇಶದ ಯುವಕನಿಗೆ ಮದುವೆಯಾಗಿ ಮಗುವಿದೆ. ಪ್ರೀತಿಸಿ ಮದುವೆಯಾದ ಸುಂದರ ಹೆಂಡತಿ ಮನೆಯಲ್ಲಿದ್ದಾಳೆ. ಹೀಗಿದ್ದು ಕೂಡಾ ಈ ಯುವಕನಿಗೆ ಕಾಮದ ಹಸಿವು ನೀಗಿದಂತಿಲ್ಲ. ಅವಿವಾಹಿತ ಯುವತಿಯ ಮೋಹಕ್ಕೆ ಬಿದ್ದು ಇದೀಗ ನಾಲ್ಕು ಗೋಡೆ ಮಧ್ಯದಲ್ಲಿ ಇರಬೇಕಾದ ಖಾಸಗಿ ಪ್ರಣಯದ ಆಟ ಊರೆಲ್ಲಾ ಹರಡಿದೆ.
ತಾಲೂಕಿನ ಖಾಸಗಿ ಬಸ್ ಒಂದರಲ್ಲಿ ಚಾಲಕನಾಗಿರುವ ಈತ ಬಸ್ಸಿನಲ್ಲಿ ಬೆಂಗಳೂರಿಗೆ ಹೋಗಿ ಬರುತ್ತಿರುವ ಪಕ್ಕದ ತಾಲೂಕಿನ ಯುವತಿಯ ಪರಿಚಯವಾಗಿದೆ. ಪರಿಚಯ ಹಂತ ಹಂತವಾಗಿ ಪ್ರೀತಿಗೆ ತಿರುಗಿ, ಪ್ರಣಯದಾಟದವರೆಗೂ ತಲುಪಿದೆ. ಈಕೆಯೊಂದಿಗೆ ಲವ್ವಿ ಡವ್ವಿ ಇಟ್ಟುಕೊಂಡಿರುವ ಈತ, ಚಾಲಕನ ಕೆಲಸಕ್ಕೆ ಹೋಗುವುದು ಕಡಿಮೆ ಮಾಡಿದಾಗ, ಬಸ್ಸಿನ ಮಾಲೀಕರು ಕೆಲಸದಿಂದ ತೆಗೆದುಹಾಕಿದ್ದಾರೆ.
ಮೋಜು ಮಸ್ತಿಯಲ್ಲಿರುವ ಈ ಜೋಡಿ, ತಮ್ಮ ಖಾಸಗಿ ಸಮಯದ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಯುವತಿ ಕೂಡ ಇವನಿಗೆ ಹೆಂಡತಿ ಇದ್ದಾಳೆ ಎಂದು ಗೊತ್ತಿದ್ದರೂ, ಯಾವುದೇ ಹಿಂಜರಿಕೆ ಇಲ್ಲದೆ ಇಬ್ಬರು ಪ್ರಣಯದಾಟದಲ್ಲಿ ತೊಡಗಿಕೊಂಡಿದ್ದಾರೆ. ಇವರಿಬ್ಬರಲ್ಲಿ ಇರಬೇಕಾದ ಖಾಸಗಿ ವಿಡಿಯೋ ಇದೀಗ ಊರೆಲ್ಲಾ ಹಬ್ಬುತ್ತಿದೆ ಮಾಹಿತಿಯಂತೆ ಯುವತಿಯೇ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಫೋಟೋ ಹರಿಬಿಟ್ಟಿದ್ದಾಳೆ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಯುವ ಸಮುದಾಯ ಈ ಇಬ್ಬರು ಜೋಡಿಯ ಪ್ರಣಯದಾಟ ವಿಡಿಯೋ ನೋಡಲು ಮುಗಿ ಬೀಳುತ್ತಿದ್ದಾರೆ.

ಪೊಲೀಸರ ಮಾಹಿತಿಯಂತೆ ಎರಡು ಮೂರು ದಿನದ ಹಿಂದೆ ಯುವತಿ ಗುಣವಂತೆ ಹತ್ತಿರ ತಲೆ ಸುತ್ತು ಬಂದು ಆಟೋದಲ್ಲಿ ಹೋಗುತ್ತಿದ್ದಳು. ಪೊಲೀಸರು ಸಂಪರ್ಕ ಮಾಡಿದಾಗ, ಯುವತಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ನಂತರ ಯುವಕನನ್ನು ಠಾಣೆಗೆ ಕರೆಸಲಾಗಿದೆ. ಇಬ್ಬರ ನಡುವೆ ಮಾತುಕತೆಯಾಗಿ ಇಬ್ಬರ ಮೊಬೈಲ್ ನಲ್ಲಿ ಇರುವ ಫೋಟೋ ವಿಡಿಯೋ ಡಿಲೀಟ್ ಮಾಡುತ್ತೇವೆ ಎಂದು ಹೋಗಿದ್ದರು ಎನ್ನುವ ಮಾಹಿತಿ ಇದೆ. ಇನ್ನು ಯುವತಿ ವಿಡಿಯೋ ಫೋಟೋಗಳನ್ನು ಇನ್ಸ್ಟಾಗ್ರಾಮ್ ಹಾಗೂ ಯುವಕನ ಹೆಂಡತಿ ಸೇರಿ ಇನ್ನು ಕೆಲವರ ವಾಟ್ಸಪ್ ಗೆ ಕಳಿಸಿದ್ದಾಳೆ ಎನ್ನುವ ಚರ್ಚೆ ನಡೆದಿದೆ. ಘಟನೆಗೆ ಸಂಬಂಧ ಪಟ್ಟಂತೆ ಇಲ್ಲಿಯ ತನಕ ದೂರು ದಾಖಲು ಆಗಿಲ್ಲ. ಮತ್ತಷ್ಟು ನಿಖರವಾದ ಮಾಹಿತಿ ಪ್ರಕರಣ ದಾಖಲಾದ ನಂತರ ತಿಳಿದು ಬರಬೇಕಿದೆ. ಅಂತರ ಜಾತಿ ವಿವಾಹವಾಗಿದ್ದ ಈತ ಮದುವೆಯಾಗಿರುವ ಹುಡುಗಿ ಬೇರೆ ಸಮಾಜದವಳು ಇವನ ಪ್ರೀತಿಗೆ ಮರುಳಾಗಿ ಸಾಕಿ ಸಲಹಿ ಬೆಳೆಸಿದ ಅಪ್ಪ-ಅಮ್ಮ ಬಿಟ್ಟು ಇವನ ಮನೆ ಸೇರಿದ್ದಾಳೆ. ಈತನನ್ನೇ ನಂಬಿದ ಹೆಂಡತಿಗೆ ಅತ್ತ ತವರು ಮನೆ ದಿಕ್ಕು ಇಲ್ಲ ಇತ್ತ ಗಂಡ ಮಾಡಿದ ಸಾಧನೆ ಹೇಳಿಕೊಳ್ಳುವಂತದ್ದು ಇಲ್ಲ. ಹೆಣ್ಣಿನ ಸಹವಾಸಕ್ಕೆ ಬಿದ್ದಿರುವ ವಿಡಿಯೋ ನೋಡಲು ಮನೆ ಮಂದಿ ಎಲ್ಲಕ್ಕಿಂತ ಹೆಚ್ಚಾಗಿ ಸಮಾಜ ಅಸಹ್ಯ ಪಡುವಂತಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!