ಬೀದರ್: ಭೀಮ ಪ್ರಜಾ ಸಂಘ (ರಿ.) ವತಿಯಿಂದ ಆಯೋಜಿಸಲಾಗಿದ್ದ ಬೀದರ್ ಜಿಲ್ಲಾ ಸಮಿತಿ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ನಗರದ ಮಯೂರ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ವೈಟ್ಫೀಲ್ಡ್ ಮುರುಗೇಶ್ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಮುನಿರತ್ನ ಅರವಿಂದ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭೀಮ ಪ್ರಜಾ ಸಂಘದ ಬೀದರ್ ಜಿಲ್ಲಾ ಅಧ್ಯಕ್ಷರಾಗಿ ಆಕಾಶ್ ಶಿಂಧೆ ಅವರನ್ನು ಅಧಿಕೃತವಾಗಿ ನೇಮಕ ಮಾಡಲಾಯಿತು. ನಿಷ್ಕಲ್ಮಶ ನಾಡುಪ್ರೇಮ, ನಡೆ-ನುಡಿ, ಉತ್ತಮ ಚಾರಿತ್ರ್ಯ ಹಾಗೂ ದಲಿತಪರ ಕಾಳಜಿಯನ್ನು ಪರಿಗಣಿಸಿ, ಸಂಘದ ಎಲ್ಲರ ಒಪ್ಪಿಗೆಯೊಂದಿಗೆ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ವೈಟ್ಫೀಲ್ಡ್ ಮುರುಗೇಶ್ ಅವರು, “ಆಕಾಶ್ ಶಿಂಧೆ ಅವರು ಮುಂದಿನ ದಿನಗಳಲ್ಲಿ ದಲಿತರು, ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಗ್ರ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಿ, ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಭೀಮ ಪ್ರಜಾ ಸಂಘದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಬುದ್ಧ, ಬಸವಣ್ಣ ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಿ ಸೇವೆ ಸಲ್ಲಿಸಬೇಕು” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪಾಧ್ಯಕ್ಷರಾಗಿ ಅಯೋದ್ದೀನ್, ಜಿಲ್ಲಾ ಕಾರ್ಯದರ್ಶಿಯಾಗಿ ಚಂದ್ರಕಾಂತ್ ದೇವಕೆ, ಜಿಲ್ಲಾ ಖಜಾಂಚಿಯಾಗಿ ಶಿವಕುಮಾರ್ ಶಿಂಧೆ ಅವರನ್ನು ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸುರೇಶ್ ಜೋಜನಳ್ಕರ್, ಸಂತೋಷ್ ಪಡಸಲೆ, ಹರ್ಷಿತ್ ದಾಂಡೇಕರ್, ಜೈವರ್ಧನ್ ಫುಲೆ, ಉಮಾಕಾಂತ್ ಶಾಸ್ತ್ರಿ, ಸಂತೋಷ್ ಹಾಲೆಪುರಗೆ, ರಾಜು ಗುಂಗೆ, ನರೇಶ್ ಚಿದ್ರಿ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.
ವರದಿ ಸಾಗರ ಪಡಸಲೆ




















