ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಅನಿರ್ಧಿಷ್ಠಾವಧಿ ಮುಷ್ಕರ

ಬಳ್ಳಾರಿ / ಕಂಪ್ಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಪತ್ರ ಬರಹಗಾರರ ಒಕ್ಕೂಟದಿಂದ ಪಟ್ಟಣದ ಪುರಸಭೆ ಎದುರುಗಡೆಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಹಿರಿಯ ಉಪ ನೋಂದಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ಅನಿರ್ಧಿಷ್ಠಾವಧಿ ಮುಷ್ಕರ ನಡೆಸಿ, ನಂತರ ಉಪನೋಂದಣಾಧಿಕಾರಿ ಎಸ್.ಬಿ.ಶ್ರೀನಿವಾಸ್‌ಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಹಿರಿಯ ಪತ್ರ ಬರಹಗಾರ ಕೆ.ಮೆಹಬೂಬ್ ಮಾತನಾಡಿ, ಕಾವೇರಿ-2 ಪ್ರಕ್ರಿಯೆಯಲ್ಲಿ ಕೆಲ ಬದಲಾವಣೆಗೆ ಎಲ್ಲಾ ಉಪ-ನೋಂದಣಿ ಕಛೇರಿಗಳಲ್ಲಿ ನೋಂದಣಿ ಕಾರ್ಯಗಳು ಕುಂಠಿತಗೊಂಡಿವೆ. ಸ್ವತ್ತಿನ ವಿವರಣೆಯಲ್ಲಿ ಮೂಲ ಕರಡುಪ್ರತಿಯಲ್ಲಿ ಇರುವ ಅಂಶಗಳು ಸಂಪೂರ್ಣವಾಗಿ ಅನ್‌ಲೈನ್‌ನಲ್ಲಿ ನಮೂದು ಆಗದೇ ಇರುವುದರಿಂದ ನೋಂದಣಿ ಪ್ರಕ್ರಿಯೆಯಲ್ಲಿ ಶೇ.100ಕ್ಕೆ 95% ಪತ್ರಗಳು ಸ್ಥಗಿತಗೊಂಡಿರುತ್ತವೆ. ಇದರಿಂದ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತಿದೆ. ಆದ್ದರಿಂದ ತಂತ್ರಾಂಶದಲ್ಲಿ ಆಗುತ್ತಿರುವ ತೊಂದರೆಗಳನ್ನು ಆದಷ್ಟು ಬೇಗನೆ ಸರಿಪಡಿಸಿ ನೋಂದಣಿ ಪ್ರಕ್ರಿಯೆಯನ್ನು ಸುಗಮಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ನೋಂದಣಿ ಮಾಡಿಸಿಕೊಳ್ಳಲು ಅನುಕೂಲ ಮಾಡಿಕೊಡಬೇಕು. ಪರವಾನಿಗೆ ಪಡೆದ ಭೂ-ಮಾಪಕರಿಗೆ ಅಧಿಕೃತ ಹಾಗೂ ಪ್ರಸ್ತುತ ಭೂ-ಮಾಪಕರ ಇಲಾಖೆಯಲ್ಲಿ ಪ್ರತ್ಯೇಕವಾಗಿ ಪತ್ರಗಳ ನೋಂದಣಿಗೆ ಬಂಧಿಸಿದಂತೆ ಅಧಿಕೃತ ಜಿಲ್ಲಾ ಬರಹರಾರರಿಗೆ ಲಾಗಿನ್ ಐಡಿ ನೀಡಿರುವ ಮಾದರಿಯಲ್ಲಿ ನಮಗೂ ಸಹ ಸಿಟಿಜನ್ ಲಾಗೀನ್ ಜೊತೆಗೆ ಪ್ರತ್ಯೇಕ ಲಾಗೀನ್ ಐಡಿ ನೀಡಬೇಕು. ಅನಧಿಕೃತ ಬರಹಗಾರರ ಹಾವಳಿಯನ್ನು ಇಲಾಖೆಯ ಒಳಗೆ ಬರದಂತೆ ಕ್ರಮ ವಹಿಸಬೇಕು. ಸೇವಾ ಭದ್ರತೆ ಜೊತೆಗೆ ಲಾಗೀನ್ ಐಡಿ ಅಥವಾ ಗುರುತಿನ ಚೀಟಿ ನೀಡಬೇಕು. ಹೀಗೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪತ್ರಬರಹಗಾರರಾದ
ಎಸ್. ಶರ್ಮಸ್‌ವಲಿ, ಆರ್.ಚನ್ನಬಸುವ, ಜಿ.ಮಹೇಶ, ಎ.ಸತ್ಯನಾರಾಯಣಮೂರ್ತಿ, ಎಸ್.ಮಹಮ್ಮದ್ ಆಶಂ, ಡಿ.ಮಂಜುನಾಥ, ಹೆಚ್.ರಾಜಶೇಖರ, ವಿ.ಅನಂತಪದ್ಮನಾಥ, ಕೆ.ವಿ.ಸಂದೀಪ, ಸಿದ್ದರಾಮಯ್ಯ ಸೇರಿದಂತೆ ಇತರರು ಇದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!