ಬಳ್ಳಾರಿಯ ಎ ಪಿ ಎಂ ಸಿ ಪೋಲಿಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದ ನಿವಾಸಿ ಹಿತೇಶ್ ಜೈನ್ ಎಂಬುವವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ಬೆಳಿಗ್ಗೆಯೇ ಹಿತೇಶ್ ಜೈನ್ ನಿವಾಸಕ್ಕೆ ತೆರಳಿದ ಇ ಡಿ ಅಧಿಕಾರಿಗಳ ತಂಡ ಪರಿಶೀಲನೆ ಆರಂಭಿಸಿತು ಎಂದು ಗೊತ್ತಾಗಿದೆ. ಹಿತೇಶ್ ಜೈನ್ ಹಿನ್ನೆಲೆ ಏನು,ಯಾವ ವೃತ್ತಿ ಅಥವಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಸದ್ಯಕ್ಕೆ ಖಚಿತವಾಗಿಲ್ಲ.
ದಾಳಿಗೆ ನಿಖರವಾದ ಕಾರಣಗಳು ಗೊತ್ತಾಗಿಲ್ಲ. ಇ.ಡಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿಯನ್ನೂ ನೀಡಿಲ್ಲ. ಭದ್ರತೆಗೆ ನೆರನ್ನೂ ಕೋರಿಲ್ಲ. ಹೀಗಾಗಿ ಪೋಲಿಸ್ ಇಲಾಖೆಯ ಬಳಿಯೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ವರದಿ ಜಾಫರ್ ಸಾದಿಕ್




















