ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕ ರಾಮಗೇರಿ ಗ್ರಾಮದಲ್ಲಿ ಪಂಚ ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷರಾದ ಶ್ರೀ ನಾಗರಾಜ ಶಿ. ಮಡಿವಾಳರ ಅವರ ಮನೆಯಲ್ಲಿ ನಿನ್ನೆ ರಾತ್ರಿ ” ಶ್ರೀ ತಾಯಿ ಕಾಮಧೇನು ಗೋ ಮಾತೆಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.
ಭಾರತೀಯ ಭವ್ಯ ಪರಂಪರೆಯಲ್ಲಿ ಗೋವಿಗೆ ಮಾತೃ ಸ್ಥಾನ ನೀಡಲಾಗಿದೆ. ಮತ್ತು ತಾಯಿ – ಅಕ್ಕ, ತಂಗಿಯರಿಗೆ ಯಾವ ರೀತಿಯಾದ ಸೀಮಂತ ಕಾರ್ಯ ಕೈಗೊಂಡು ಉಡಿಯನ್ನು ತುಂಬುತ್ತೇವೆ ಅಂತೆಯೇ ಈ ನಮ್ಮ ಪೂಜ್ಯ ಗೋವಿನ ಸೀಮಂತ ಕಾರ್ಯವನ್ನು ಮಾಡಲು ನಮ್ಮ ಪೂರ್ವ ಜನ್ಮದ ಫಲವೇ ಸರಿ ಮತ್ತು ಜಗತ್ತಿಗೆ ಅನ್ನ ಹಾಕುವಂತ ರೈತನ ಎತ್ತುಗಳಿಗೆ ಜನ್ಮದಾತೆ ಈ ಗೋ ಮಾತೆ.
ಸರ್ವರಿಗೂ ಈ ತಾಯಿ ಸಕಲ ಆರೋಗ್ಯ, ಐಶ್ವರ್ಯ, ಸುಖ – ಶಾಂತಿ ನೀಡಿ ಕಾಪಾಡಲಿ ಎಲ್ಲರಿಗೂ ಒಳ್ಳೇದನ್ನು ಮಾಡಲಿ ಎಂದು ಕಾರ್ಯಕ್ರಮ ಉದ್ದೇಶಿಸಿ ಶ್ರೀ ನಾಗರಾಜ ಮಡಿವಾಳರ ಮಾತನಾಡಿದರು.
ಈ ಸಂಧರ್ಭದಲ್ಲಿ ಶ್ರೀಮತಿ ಈರಮ್ಮ ಶಿ. ಮಡಿವಾಳರ, ಶ್ರೀ ಗುಡ್ಡಪ್ಪ ಬೇವಿನಮರದ, ಶ್ರೀ ಮಾರ್ತಾಂಡಪ್ಪ ಗಂಜಿಗಟ್ಟಿ, ಶ್ರೀ ಪರಸಪ್ಪ ಹುನಶಿಮರದ,
ಶ್ರೀ ನಬಿಸಾಬ್ ಅಣ್ಣಿಗೇರಿ, ಶ್ರೀ ಶಿವಾನಂದ ಜುಲ್ಪಿ,
ಶ್ರೀ ಲಕ್ಷ್ಮಣ ಯರಗುಪ್ಪಿ, ಶ್ರೀ ಎಸ್ ಬಿ ಸುಂಕದ,
ಶ್ರೀ ಹನಮಂತಪ್ಪ ಹುನಶಿಮರದ ಹಾಗೂ ಸರ್ವ ತಾಯಂದಿರು ಮನೆಯ ಸದಸ್ಯರೆಲ್ಲರೂ ಹಾಜರಿದ್ದರು.
ವರದಿ ಸದಾಶಿವ ಭೀ. ಮುಡೆಮ್ಮನವರ




















