ಅಂಗವೈಕಲ್ಯ ನಿರ್ಮೂಲನೆಗಾಗಿ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ | ಡಾ. ನಾಜ್ರೀನ್
ಯಾದಗಿರಿ/ಗುರುಮಠಕಲ್ : ಡಿ. ೨೧- ಮಕ್ಕಳ ಅಂಗವಿಕಲತೆ ನಿರ್ಮೂಲನೆಗೆ ಕಡ್ಡಾಯವಾಗಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವದು ಕಡ್ಡಾಯ, ಪೋಲಿಯೋ ಲಸಿಕೆ ತಪ್ಪದೇ ಐದು ವರ್ಷದ ಒಳಗಿನ ಮಕ್ಕಳಿಗೆ ಹಾಕಿಸಿ ಎಂದು ನಮ್ಮ ಕ್ಲಿನಿಕ್ ವೈದ್ಯರಾದ ಡಾ. ನಾಜ್ರೀನ್ ಹೇಳಿದರು.
ಇವತ್ತು ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ಆಸ್ಪತ್ರೆ, ಎಲ್ಲಾ ವಾರ್ಡ್ ಗಳಲ್ಲಿ ಪೋಲಿಯೋ ಹಾಕಲಾಗುತ್ತಿದ್ದು ತಪ್ಪದೇ ಐದು ವರ್ಷದ ಮಕ್ಕಳಿಗೆ ಪೋಲಿಯೋ ಹಾಕಿಸಿ ಎಂದು ಹೇಳಿದರು.
ಅಭಿಯಾನದಲ್ಲಿ ನಮ್ಮ ಕ್ಲಿನಿಕ್ ನ ಆರೋಗ್ಯ ನಿರೀಕ್ಷಕ ಶರಣ ಬಸಪ್ಪ, ಎಲ್. ಟಿ ದೌಲತ್, ಸಿಬ್ಬಂದಿ ಶ್ರೀಮತಿ ಗಂಗಮ್ಮ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















