ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಉಪಕರಣಗಳ ಬಳಕೆಯಿಂದ ನಿಮ್ಮ ಸ್ವಾವಲಂಬಿ ಜೀವನದ ಆದಾಯದ ಮೂಲ ವೃದ್ಧಿಯಾಗಲಿ – ಕು. ಸಂಪ್ರೀತ್ ದೇವಪುತ್ರ

ಯಾದಗಿರಿ: ಡಿ.22 ಜಿಲ್ಲೆಯ ವಿವಿಧ ತಾಲ್ಲೂಕುಗಳ ಆಯ್ಕೆಯಾದ ವಿಕಲಚೇತನ ಫಲಾನುಭವಿಗಳಿಗೆ ಅಗತ್ಯವಾದ ಉಪಕರಣಗಳನ್ನು ವಿತರಿಸಿ, ಇದರಿಂದ ಅವರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಆದಾಯ ಗಳಿಸಲು ಸಹಕಾರಿಯಾಗಲಿದೆ ಎಂದು ಎಪಿಡಿ ಸಂಸ್ಥೆಯ ಮುಖ್ಯಸ್ಥರಾದ ಕು. ಸಂಪ್ರೀತ ದೇವಪುತ್ರ ಹೇಳಿದರು.

ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸಂಸ್ಥೆಯ ವತಿಯಿಂದ ವಿಕಲಚೇತನ ವ್ಯಕ್ತಿಗಳ ಸ್ವಯಂ ಉದ್ಯೋಗ ಉತ್ತೇಜನ ಹಾಗೂ ಜೀವನೋಪಾಯ ಬಲವರ್ಧನೆ ಉದ್ದೇಶದಿಂದ ಜಿಲ್ಲೆಯ 12 ಜನರಿಗೆ 10 ಪ್ರಿಂಟರ್‌ಗಳು ಮತ್ತು 2 ತಳ್ಳುಗಾಡಿಗಳನ್ನು ವಿತರಿಸಲಾಯಿತು.

ಹುಣಸಗಿ ತಾಲೂಕಿನ ವಿಕಲಚೇತನರಿಗೆ 3 ಪ್ರಿಂಟರ್‌ ಮತ್ತು 2 ತಳ್ಳು ಗಾಡಿ, ಯಾದಗಿರಿ ತಾಲ್ಲೂಕಿನ 4 ಜನ ವಿಕಲಚೇತನರಿಗೆ ಪ್ರಿಂಟರ್‌,
ಗುರುಮಠಕಲ್ ತಾಲ್ಲೂಕಿನ 2 ವಿಕಲಚೇತನರಿಗೆ ಪ್ರಿಂಟರ್‌ಗಳು, ಶೋರಾಪುರ ತಾಲ್ಲೂಕಿನ ಒಬ್ಬರು ವಿಕಲಚೇತನರಿಗೆ ಪ್ರಿಂಟರ್ ವಿತರಿಸಲಾಯಿತು.

ವಿತರಣೆಯಲ್ಲಿ ಜೀವನಪಯೋಗ ತಜ್ಞ ಶಿವಯೋಗಪ್ಪ ಮೇಲಕೇರಿ, ಯಾದಗಿರಿ ತಾಲೂಕ ಸಂಯೋಜಕರು ರಮೇಶ್ ಕಟ್ಟಿಮನಿ ಸಿಬ್ಬಂದಿಗಳಾದ ಹರೀಶ ಜೋಶಿ, ನಾಗರಾಜ, ಹುಲಿಯಪ್ಪ, ಮಲ್ಲಿಕಾರ್ಜುನ ಶಿಲ್ಪಾ ಶರಣಮ್ಮ ಮೋಹನ್ ಇನ್ನಿತರರು ಉಪಸ್ಥಿತರಿದ್ದರು.

ವರದಿ: ಜಗದೀಶ್ ಕುಮಾರ್ ಭೂಮಾ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!