
ಚಾಮರಾಜನಗರ : ದಿ. 16.12.25 ರ ತಡರಾತ್ರಿ ತೆರಕಣಾಂಬಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಗೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿಟ್ಟಿದ್ದ ಸುಮಾರು 14 ಲಕ್ಷದ 12,000 ರೂಪಾಯಿಗಳು ಕಳ್ಳತನವಾಗಿರುತ್ತದೆ ಎಂದು ಸಂಘದ ಕಾರ್ಯದರ್ಶಿಯಾದ ಚಂದ್ರಶೇಖರಮೂರ್ತಿಯು ದಿ. 17.12.25 ರಂದು ತೆರಕಣಾಂಬಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಠಾಣಾ ಮೊ. ನo 127/2025 ರಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ನಂತರ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಕವಿತಾ ಮೇಡಂ ಮತ್ತು ಮಾನ್ಯ ಉಪ ಪೊಲೀಸ್ ವರಿಷ್ಠ ಅಧಿಕಾರಿಗಳಾದ ಶಶಿಧರ್ ಸರ್ ಹಾಗೂ ಚಾಮರಾಜನಗರ ಉಪವಿಭಾಗದ dysp ಸ್ನೇಹಾ ರಾಜ್ ಮೇಡಂ ರವರ ಮಾರ್ಗದರ್ಶನದಲ್ಲಿ ಬೇಗೂರು ಪ್ರಭಾರ ವೃತ್ತ ನಿರೀಕ್ಷಕರಾದ ಶ್ರೀಯುತ ರಘು ಸರ್ ರವರ ನೇತೃತ್ವದಲ್ಲಿ ತೆರಕಣಾಂಬಿ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಶ್ರೀಯುತ ಮಹೇಶ್ ಕೆ ಎಂ ರವರ ತಂಡ ತನಿಖೆಯನ್ನು ಕೈಗೊಂಡ ಮೇಲೆ ಮೂಡುಗೂರು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಚಂದ್ರಶೇಖರ ಮೂರ್ತಿರವರು ನೀಡಿದ ದೂರಿನಲ್ಲಿ 14.12 ಲಕ್ಷ ಕಳ್ಳತನವಾಗಿದೆ ಎಂದಿದ್ದರೂ ಆದರೆ ನಿಜವಾಗಿ ಈತ ರೈತರಿಂದ ಕಟ್ಟಿಸಿಕೊಂಡಿರುವ ಹಣವೇ 8.92 ಲಕ್ಷ ರೂಪಾಯಿಗಳು ಮಾತ್ರ ಉಳಿದ 5.10 ಲಕ್ಷ ಹಣವನ್ನು ಈ ಚಂದ್ರಶೇಖರ ಮೂರ್ತಿಯು ಸಾಲ ಪಡೆದ ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹಣವನ್ನು ಪಡೆಯದೆ ರಸೀದಿಗಳನ್ನು ನೀಡಿರುತ್ತಾರೆ, ನಂತರ ಸಂಘದ ನಿಯಮದ ಪ್ರಕಾರ ರೈತರಿಂದ ಪಡೆದ 14. 12 ಲಕ್ಷ ಹಣವನ್ನು ನಿಗದಿತ ಸಮಯಕ್ಕೆ ಬ್ಯಾಂಕಿಗೆ ಜಮೆ ಮಾಡಬೇಕಾಗಿತ್ತು ಆದರೆ ಈ ಚಂದ್ರಶೇಖರ ಮೂರ್ತಿ ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸುಳ್ಳು ರಶೀದಿಯನ್ನು ನೀಡಿದ 5.10 ಲಕ್ಷ ಹಣವನ್ನು ಹೊಂದಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ತನ್ನ ಆರ್ಥಿಕ ಸಂಕಷ್ಟದಿಂದಾಗಿ ರೈತರಿಂದ ಪಡೆದು ಕಚೇರಿಯಲ್ಲಿಟ್ಟಿದ್ದ 8 ಲಕ್ಷದ 92,000ಗಳನ್ನು ತಾನೇ ದಿನಾಂಕ 16.12.25 ರಂದು ಕಳ್ಳತನ ಮಾಡಿಕೊಂಡು ಹೋಗಿ ಈ ಹಣವನ್ನು ಮನೆಯಲ್ಲಿ ಇಟ್ಟಿರುತ್ತೇನೆ ಎಂದು ಒಪ್ಪಿಕೊಂಡ ಮೇಲೆ ತನಿಖೆ ತಂಡ ಮನೆಗೆ ಹೋಗಿ ನೋಡಲಾಗಿ ಈತ ಕದ್ದಿರುವ 8,92,000 ರೂಪಾಯಿಗಳು ಮನೆಯಲ್ಲಿತ್ತು ಈ ಹಣವನ್ನು ಪೊಲೀಸರ ವಶಕ್ಕೆ ಪಡೆದುಕೊಳ್ಳಲಾಯಿತು, ನಂತರ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾದ ಚಂದ್ರಶೇಖರ್ ಮೂರ್ತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ನಂತರ ನ್ಯಾಯಾಲಯದ ಆದೇಶದಂತೆ ಜಿಲ್ಲಾ ಕಾರಾಗೃಹಕ್ಕೆ ಬಿಟ್ಟಿರುತ್ತೇವೆ.
ಈ ಪ್ರಕರಣದ ತನಿಖೆಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜು, ಕಿಶೋರ್, ರಾಜೇಂದ್ರ, ರಾಜಶೇಖರ್, ಬಂಗಾರ ನಾಯಕ ಹಾಗೂ ತನಿಖಾ ಸಹಾಯಕರಾದ ಪುಟ್ಟರಾಜು, ಸಿದ್ದರಾಮು ಭಾಗವಹಿಸಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್




















