
ಗುರುಮಠಕಲ್ : ಡಿ.23 ಪಟ್ಟಣದ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ಹಿರಿಯ ನಾಗರೀಕ ಹಾಗೂ ಅಂಗವಿಕಲ ಸಬಲೀಕರಣ ಇಲಾಖೆ ಮತ್ತು ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮದ (ALIMCO) ಕಂಪನಿ ವತಿಯಿಂದ ತಾಲೂಕಿನ ವಿಕಲಚೇತನರಿಗೆ ಅವರ ಅಗತ್ಯತೆ ಅನುಗುಣವಾಗಿ ಅವರು ಬಳಸುವ ವಿವಿಧ ಸಾಧನ ಸಲಕರಣೆಗಳಾದ ಬ್ಯಾಟರಿ ಚಾಲಿತ ವಾಹನ ವಾಕಿಂಗ್ ಸ್ಟಿಕ್, ವೀಲ್ ಚೇರ್, ಸಿಪಿ ಚೇರ್, ಕೇನ್, ಟ್ರೇ ಸೈಕಲ್ ಸೇರಿದಂತೆ ಒಟ್ಟುವ 46 ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ಮಂಗಳವಾರ ವಿತರಿಸಲಾಯಿತು.
ವಿತರಣೆ ನಂತರ ಮಾತನಾಡಿದ ಶಾಸಕ ಶರಣಗೌಡ ಕಂದಕೂರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಕಲಚೇತನರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಇವುಗಳನ್ನು ಪಡೆದು ತಾವುಗಳು ಸ್ವಾವಲಂಬಿ ಜೀವನ ನಡೆದು ಸಮಾಜಕ್ಕೆ ಮಾದರಿಗಳಾಗಬೇಕೆಂದು ತಿಳಿಸಿದರು.
ವಿಕಲಚೇತನರಿಗೆ ಮೀಸಲಿಟ್ಟ 5% ಅನುದಾನವೂ ಸಮರ್ಪಕ ಬಳಕೆಯಾಗಬೇಕು, ಈ ನಿಟ್ಟಿನಲ್ಲಿ ಎಲ್ಲಾ ಅಧಿಕಾರಿಗಳಿಗೆ ಸೂಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಲಿಂಕೋ ಸಂಸ್ಥೆಯ ಬಿಶ್ವತ್ ಮಿಶ್ರ, ಎಪಿಡಿ ಸಂಸ್ಥೆಯ ವಿರುಪಾಕ್ಷಪ್ಪ ಮಾಲಿ ಪಾಟೀಲ್, MRW ಭೀಮರಾಯ, ಅರ್.ಪಿ.ಡಿ ಆಧ್ಯಕ್ಷರಾದ ಸಿದ್ದನಗೌಡ, ವಿವಿಧ ಗ್ರಾಮ ಪಂಚಾಯತಿಗಳಿಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿ. ಆರ್. ಡಬ್ಲ್ಯೂ ಗಳು, ಜೆಡಿಎಸ್ ಪಕ್ಷದ ಕಾರ್ಯಕರ್ತರು, ಅಹವಾಲು ನೀಡಲು ಬಂದ ಸಾರ್ವಜನಿಕರು ಸೇರಿದಂತೆ ಇನ್ನಿತರ ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















