ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಯಾವುದೇ ದೇಶ ಸಂಕಷ್ಟದಲ್ಲಿದಲ್ಲಿದ್ದರೂ ಅದಕ್ಕೆ ಸ್ಪಂದಿಸುವ ದೇಶ ಭಾರತ

ಬೆಳಗಾವಿ/ ಬೈಲಹೊಂಗಲ: ವಿಶ್ವವೆ ಒಂದೆ ಕುಟುಂಬ ಎಂಬ ಧೃಡ ನಂಬಿಕೆಯಲ್ಲಿದ್ದು ಯಾವುದೇ ದೇಶ ಸಂಕಷ್ಟದಲ್ಲಿದಲ್ಲಿದ್ದರೂ ಅದಕ್ಕೆ ಸ್ಪಂದಿಸುವ ಭಾರತ ದೇಶದ ಹಿರಿಮೆಯಾದರೆ, ಅದೇ ದೇಶದ ಮೂಲನಿವಾಸಿಗಳು ವಿಭಜಿತ ಬಾಂಗ್ಲಾದೇಶದಲ್ಲಿ ಹಿಂದೂ ಸಮಾಜದ ದೀಪು ಚಂದ್ರದಾಸ ಅವರ ಬರ್ಬರ ಹತ್ಯೆ ಖಂಡನೀಯ ಅಪರಾಧಿಗಳನ್ನು ಬಂಧಿಸಿದರೆ ಸಾಲದು ಅವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಬಾಂಗ್ಲಾದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳಿಗೆ ಆ ದೇಶ ರಕ್ಷಣೆ ಒದಗಿಸಬೇಕೆಂದು ಬಿಜೆಪಿ ರಾಜ್ಯ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಆಗ್ರಹಿಸಿದ್ದಾರೆ.

ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ ಅವರು, ಭಾರತ ವಿರೋಧಿತೆಯನ್ನು ಮೈಗೂಡಿಸಿಕೊಂಡಿದ್ದ ಬಾಂಗ್ಲಾದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರ ನಡೆದ ಗಲಭೆಯಲ್ಲಿ ದೀಪು ಚಂದ್ರಹಾಸ ಅವರನ್ನು ಅಲ್ಲಿಯ ಮತೀಯವಾದಿಗಳ ಗುಂಪು ಅವರನ್ನು ಬೆಂಕಿ ಹಚ್ಚಿ ಹತ್ಯೆಮಾಡುವ ಮೂಲಕ ತಮ್ಮ ಕ್ರೂರತನ ಪ್ರದರ್ಶಿಸಿದ್ದಾರೆ. ಇದೊಂದು ಮಾನವೀಯತೆಯ ಕಗ್ಗೊಲೆ. ಅಮಾಯಕ ಹಿಂದೂ ಯುವಕನ ಅಮಾನುಷ ಹತ್ಯೆ ನಿಜವಾಗಲೂ ಅಲ್ಲಿಯ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ಇಲ್ಲ ಎನ್ನುವುದು ಜಗಜ್ಜಾಹೀರವಾಗಿದೆ. ರಿಕ್ಷಾ ಚಾಲಕ ಗೋಬಿಂದ್ ಬಿಸ್ವಾಸ್ ಅವರ ಮೇಲೆ‌ ನಡೆದ ಹಲ್ಲೆ, ಈ ಹಿಂದೆ ಅಕ್ಷಯ ಪಾತ್ರೆ ಎಂದು ಖ್ಯಾತಿ ಪಡೆದು ಬಾಂಗ್ಲಾದಲ್ಲಿ ಜಾತಿಮತ ಎನ್ನದೆ ಸಂಕಷ್ಟ ಕಾಲದಲ್ಲಿ ಎಲ್ಲರಿಗೂ ಆಹಾರ ನಿಡುವ ಇಸ್ಕಾನ್ ದ ಮೇಲಿನ ದಾಳಿ ಖಂಡನೀಯ. ಭಾರತದ ವೀರ ಸೈನಿಕರ ಬಲಿದಾನ ಪರಾಕ್ರಮ ಮತ್ತು ರಾಜತಾಂತ್ರಿಕ ಸಹಕಾರದಿಂದ ಬಾಂಗ್ಲಾದೇಶ ಸ್ವತ್ರಂತ್ರವಾಗಿದೆ ಎನ್ನುವುದನ್ನು ಆ ದೇಶದ ಕೆಲ ಮತಾಂದರಿಗೆ ಗೊತ್ತಾಗಬೇಕಾಗಿದೆ. ಭಾರತಕ್ಕೆ ಆಸರೆ ಕೇಳಿ ಬಂದ ಆ ದೇಶದ ಮಾಜಿ‌ ಪ್ರಧಾನಿಗೆ ಆಶ್ರಯ ನೀಡಿದ್ದು ಭಾರತ, ಅನೇಕ ಸಂಕಷ್ಟ ಸ್ಥಿತಿಯಲ್ಲಿ ಭಾರತ ‌ಸಹಾಯ ಹಸ್ತ ನೀಡಿದೆ. ಬಾಂಗ್ಲಾ ಅಖಂಡ ಭಾರತದ ಭಾಗ ಆದರೆ ಇಲ್ಲಿಯ ಮೂಲ‌ನಿವಾಸಿ ಹಿಂದೂಗಳೆ ಅಲ್ಲಿ ಅಲ್ಪಸಂಖ್ಯಾತರಾಗಿ ಅವರನ್ನ ಮಾರಣ ಹೊಮ‌ ಮಾಡುತ್ತಿರುವ ಆ ದೇಶದ ಬಹುಸಂಖ್ಯಾತರ ಕೃತ್ಯ ಖಂಡನೀಯ. ಪ್ರತಿ ಸಾರಿ ಒಂದಿಲ್ಲ ಒಂದು ಕಾರಣವಿಟ್ಟು ಅಲ್ಲಿಯ ಹಿಂದೂಗಳಿಗೆ ತೊಂದರೆ ನೀಡುತ್ತಿರುವುದನ್ನು ನಿಲ್ಲಿಸಿ ಹಿಂದೂಗಳಿಗೆ ರಕ್ಷಣೆ ನೀಡುವ ವಿಚಾರವನ್ನು ಭಾರತದಲ್ಲಿರುವ ಬಾಂಗ್ಲಾದೇಶದ ರಾಯಬಾರಿ ಆ ದೇಶಕ್ಕೆ ತುರ್ತು ಸಂದೇಶ ರವಾನಿಸಬೇಕೆಂದು ಆಗ್ರಹಿಸಿದ್ದಾರೆ.

ವರದಿ ಮಂಜು. ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!