ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೈತಿಕ ರಾಜಕಾರಣದ ದೀಪಸ್ತಂಭ ಅಟಲ್ ಬಿಹಾರಿ ವಾಜಪೇಯಿ : ಮಾಜಿ ಪ್ರಧಾನಿ ಜನ್ಮದಿನಕ್ಕೆ ಅಕ್ಷರ ನಮನ

ಇಂದು ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ, ಅಜಾತಶತ್ರು ಅಟಲ್​ ಬಿಹಾರಿ ವಾಜಪೇಯಿ ಅವರ ಜನ್ಮ ದಿನ. ಇವರ ಹುಟ್ಟುಹಬ್ಬವನ್ನು ಸರ್ಕಾರ ಉತ್ತಮ ಆಡಳಿತ ದಿನ (ಗುಡ್​ ಗವರ್ನನ್ಸ್​ ಡೇ) ಎಂದು ಆಚರಿಸುತ್ತಾ ಬಂದಿದೆ.

ದುನಿಯಾ ಕೆ ಸಾರೆ ಸುಖ್ ಫೀಚೆ, ಮೇರಾ ದೇಶ್ ಫೆಹಲೇ’, ಈ ಮಾತನ್ನು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಹೊರತುಪಡಿಸಿ ಬೇರೆ ಯಾರ ಬಾಯಲ್ಲೂ ಇಷ್ಟು ಪ್ರಾಮಾಣಿಕವಾಗಿ ಹೇಳಲು ಸಾಧ್ಯವಿಲ್ಲ. ಕವಿಯಾಗಿ, ಪತ್ರಕರ್ತರಾಗಿ, ಹಾಗೂ ದೇಶದ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಕಾಂಗ್ರೆಸೇತರ ಪ್ರಧಾನಿಯಾಗಿ ಪೂರ್ಣಾವಧಿ ಪೂರೈಸಿದ ಕೀರ್ತಿ ‘ಅಜಾತಶತ್ರು’ ವಾಜಪೇಯಿ ಅವರಿಗೆ ಸಲ್ಲುತ್ತದೆ. ವಾಜಪೇಯಿ ಎಂಬ ಪುಸ್ತಕದ ಪುಟ ತಿರುವಿದಂತೆ, ನಮಗೆ ವಿಭಿನ್ನ ರೀತಿಯ ರಾಜಕಾರಣ ತೆರೆದುಕೊಳ್ಳುತ್ತಾ ಹೋಗುತ್ತದೆ. ಅಲ್ಲೊಬ್ಬ ಅಟಲ್ ಸೇವಕನನ್ನು ನೋಡುತ್ತೇವೆ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಬಿಹಾರಿಯನ್ನು ಎದುರುಗೊಳ್ಳುತ್ತೇವೆ, ಸಾಮರಸ್ಯದಿಂದ ಮತ್ತು ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ನಡೆದ ನೈತಿಕ ಪಯಣವನ್ನು ಕಾಣುತ್ತೇವೆ. ಈ ಉದಾರವಾದಿ, ಮೃದುಹೃದಯಿ ನಾಯಕ ಇಂದಿಗೂ ‘ಮೋರಲ್ ಪಾಲಿಟಿಕ್ಸ್’ ಎಂಬ ಗುರುತಿನ ಪ್ರತೀಕ. ಇಂದು ಅವರ ಜನ್ಮದಿನದ ಸಂದರ್ಭದಲ್ಲಿ, ವಾಜಪೇಯಿ ಅವರ ಕನಸಿನ ಭಾರತ ರೂಪುಗೊಳ್ಳುವ ಹಾದಿಯಲ್ಲಿದೆಯೇ ಎಂಬ ಪ್ರಶ್ನೆ ರಾಜಕೀಯ ಮನೆಯ ಹೃದಯವನ್ನು ಪದೇಪದೇ ತಟ್ಟುತ್ತದೆ. ಈ ನಿಟ್ಟಿನಲ್ಲಿ ಅವರ ಬದುಕಿನ ಪಯಣವನ್ನು ಒಂದೇ ಕಂತಿನಲ್ಲಿ ಕಟ್ಟಿಕೊಡುವ ಪ್ರಯತ್ನ ಇದಾಗಿದೆ.

ಗ್ವಾಲಿಯರ್‌ನಲ್ಲಿ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ಕೃಷ್ಣಾದೇವಿ ದಂಪತಿಗಳಿಗೆ ಜನಿಸಿದ ಅಟಲ್ ಬಿಹಾರಿ ವಾಜಪೇಯಿ ಬಾಲ್ಯದಿಂದಲೇ ರಾಷ್ಟ್ರವಾದದ ಚಿಂತನೆ ಹೊತ್ತು ಬೆಳೆದವರು. ಸ್ಥಳೀಯವಾಗಿ ಪಿಯು ಹಂತದ ಶಿಕ್ಷಣ ಪೂರೈಸಿ, ಇಂದಿನ ರಾಣಿ ಲಕ್ಷ್ಮೀಬಾಯಿ ಕಾಲೇಜಿನಲ್ಲಿ ಪದವಿ ಪಡೆದರು. ನಂತರ ವಿಕ್ಟೋರಿಯಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯುವಕನಾಗುತ್ತಿದ್ದಂತೆ ಸಂಘ ಪರಿವಾರದತ್ತ ಅವರ ಪಯಣ ಬೆಳೆಯಿತು. ಕ್ವಿಟ್ ಇಂಡಿಯಾ ಸೇರಿ ಹಲವು ಚಳವಳಿಗಳಲ್ಲಿ ಭಾಗವಹಿಸಿ ಸ್ವಾತಂತ್ರ್ಯ ಹೋರಾಟದಲ್ಲೂ ತೊಡಗಿದರು. ‘ರಾಷ್ಟ್ರಧರ್ಮ’ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕವಿತೆಗಳ ಮೂಲಕ ದೇಶಪ್ರೇಮವನ್ನು ಮೆರೆದು ಜನಾನುರಾಗಿಯಾಗಿ ಬೆಳೆದರು. ದೀನ್ ದಯಾಳ್ ಉಪಾಧ್ಯಾಯ ಮತ್ತು ಶ್ಯಾಮ ಪ್ರಸಾದ್ ಮುಖರ್ಜಿ ಅವರ ಒಡನಾಟ ಮುಂದಿನ ಇತಿಹಾಸಕ್ಕೆ ದಾರಿ ಮಾಡಿಕೊಟ್ಟಿತು.

ಸಿದ್ಧಾಂತ ಬೇರೆ, ಆಡಳಿತ ಬೇರೆ : ಅಟಲ್ ಧೋರಣೆ!

ಸಿದ್ಧಾಂತವನ್ನು ಆಡಳಿತಕ್ಕೆ ಬಲವಂತವಾಗಿ ತುರುಕದೆ, ಸಮನ್ವಯದ ರಾಜಕಾರಣ ನಡೆಸಿದವರು ವಾಜಪೇಯಿ. ಸುಮಾರು 20 ಪಕ್ಷಗಳೊಂದಿಗೆ ಮೈತ್ರಿ ಸರ್ಕಾರ ರಚಿಸಿ ಹೊಸ ರಾಜಕೀಯ ಭಾಷ್ಯ ಬರೆದರು. ಮಂಡಲ್ ಆಯೋಗದ ಅನುಷ್ಠಾನವನ್ನು ಆರೋಗ್ಯಕರ ರೀತಿಯಲ್ಲಿ ಕೈಗೊಂಡರು. ರಾಮರಥಯಾತ್ರೆಯ ಅತಿರೇಕ ರಾಜಕೀಕರಣಕ್ಕೆ ವಿರೋಧ ವ್ಯಕ್ತಪಡಿಸಿದರು. ಹಿಂದುಳಿದವರತ್ತ ಅವರ ಕಾಳಜಿ ಅವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿತು.

ಕರ್ನಾಟಕದೊಂದಿಗೆ ಅಜಾತಶತ್ರುವಿನ ಒಡನಾಟ !

ಬೆಂಗಳೂರು ಮೆಟ್ರೋ ಉದ್ಘಾಟನೆ, ಮಹಾದಾಯಿ ಯೋಜನೆಗೆ ತಾತ್ವಿಕ ಅನುಮೋದನೆ, 1975ರ ತುರ್ತು ಪರಿಸ್ಥಿತಿಯಲ್ಲಿ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬಂಧನ, ಇವೆಲ್ಲವೂ ಕರ್ನಾಟಕದೊಂದಿಗೆ ವಾಜಪೇಯಿಯ ಆತ್ಮೀಯ ಸಂಬಂಧವನ್ನು ತೋರಿಸುತ್ತವೆ. ಎಂ.ಜಿ. ರಸ್ತೆಯ ಕಾಫಿ ಹೌಸ್‌ನಲ್ಲಿ ಮಸಾಲ ದೋಸೆ ಮತ್ತು ಕಾಫಿ ಅವರ ಮೆಚ್ಚಿನ ಆಹಾರ. ಶಿವಮೊಗ್ಗದ ಜೋಗವನ್ನು ನೋಡಿ ಹಿಂದಿಯಲ್ಲಿ ಕವಿತೆ ಬರೆದಿದ್ದರು. ಕರ್ನಾಟಕದ ಪರ ನಿಲುವುಗಳನ್ನು ಅವರು ಹಲವು ಬಾರಿ ತೋರಿಸಿದ್ದರು.

ಅಜಾತಶತ್ರುವಿನ ಕಲ್ಯಾಣ ಕಾರ್ಯಕ್ರಮಗಳು !

1999–2004ರ ಅವಧಿಯಲ್ಲಿ ವಾಜಪೇಯಿ ಸರ್ಕಾರವು ಸರ್ವತೋಮುಖ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿತು. ಅಂತ್ಯೋದಯ ಅನ್ನ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ವಾಲ್ಮೀಕಿ–ಅಂಬೇಡ್ಕರ್ ಆವಾಸ್ ಯೋಜನೆ, ಸುವರ್ಣ ಚತುಷ್ಕೋನ ರಸ್ತೆ ಯೋಜನೆ ಮತ್ತು ನ್ಯೂ ಟೆಲಿಕಾಂ ಪಾಲಿಸಿ ಒಂದೇ ಎರಡೇ, ಇವೆಲ್ಲವೂ ಸಾಮಾನ್ಯ ಜನರ ಬದುಕಿನಲ್ಲಿ ನೈಜ ಬದಲಾವಣೆ ತಂದವು.

1998ರ ಪೋಖ್ರಾನ್–2 ಅಣುಪರೀಕ್ಷೆಯ ಮೂಲಕ ಭಾರತವನ್ನು ಪರಮಾಣು ಶಕ್ತಿ ರಾಷ್ಟ್ರವನ್ನಾಗಿ ಘೋಷಿಸಿದ ಧೈರ್ಯ ವಾಜಪೇಯಿಯದು. ಅಂತರರಾಷ್ಟ್ರೀಯ ಒತ್ತಡಗಳ ನಡುವೆಯೂ ಅವರು ತೋರಿದ ದೃಢತೆ ಅಪರೂಪ. 2003ರಲ್ಲಿ ಚಂದ್ರಯಾನ–1 ಯೋಜನೆಗೆ ಅನುಮೋದನೆ ನೀಡಿ ಭಾರತದ ಬಾಹ್ಯಾಕಾಶ ಸಂಶೋಧನೆಗೆ ಹೊಸ ದಿಕ್ಕು ನೀಡಿದರು. ಅಟಲ್ ಬಿಹಾರಿ ವಾಜಪೇಯಿ ರಾಜಕಾರಣ ಎಂದರೆ ಕೇವಲ ಅಧಿಕಾರವಲ್ಲ, ಅದು ನೈತಿಕತೆ, ಸಂಯಮ ಮತ್ತು ಸಾಮರಸ್ಯದ ಅಭ್ಯಾಸ ಎಂದು ತಮ್ಮ ಬದುಕಿನ ಮೂಲಕ ಸಾಬೀತುಪಡಿಸಿದರು. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ರಾಷ್ಟ್ರಹಿತವನ್ನು ಮೊದಲಿಗಿಡುವ ಅವರ ಧೋರಣೆ ಇಂದಿನ ರಾಜಕಾರಣಕ್ಕೆ ದೀಪಸ್ತಂಭವಾಗಿದೆ. ‘ದೇಶ ಮೊದಲು’ ಎಂಬ ಮಂತ್ರವನ್ನು ಕಾರ್ಯರೂಪಕ್ಕೆ ತಂದ ಅವರ ಕನಸಿನ ಭಾರತ ಇನ್ನೂ ನಮ್ಮ ಮುಂದೆ ಗುರಿಯಾಗಿ ನಿಂತಿದೆ. ಆ ಗುರಿಯನ್ನು ಸಾಧಿಸುವುದೇ ವಾಜಪೇಯಿ ಅವರಿಗೆ ಸಲ್ಲಿಸುವ ನಿಜವಾದ ಗೌರವ.

ವಿಶೇಷ ಲೇಖನ : ಜಿಲಾನಸಾಬ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!