ಬಳ್ಳಾರಿ / ಕಂಪ್ಲಿ : ಗಣೇಶೋತ್ಸವ, ದಸರಾ, ಹೋಳಿ ಹಬ್ಬವನ್ನು, ರಂಜಾನ್ ಹಬ್ಬಗಳನ್ನು ಸರ್ವಧರ್ಮೀಯರು ಕೂಡಿ ಆಚರಿಸುವಂತೆ ಕ್ರಿಸ್‌ಮಸ್ ಹಬ್ಬದ ಜತೆಗೂ ಸರ್ವಧರ್ಮದ ನಂಟು ಬೆಸೆದುಕೊಂಡಿದೆ. ದೇಶ, ಭಾಷೆ, ಗಡಿಗಳನ್ನೂ ಮೀರಿ ಈ ಹಬ್ಬ ಎಲ್ಲಾ ಧರ್ಮಗಳ ಜನರನ್ನು ಒಂದಾಗಿಸುತ್ತದೆ.
ಪಟ್ಟಣದ ಶುಗರ್ ಫ್ಯಾಕ್ಟರಿಯ ಸಹಾಯಮಾತೆ ದೇವಾಲಯದಲ್ಲಿ ಬಾಲಯೇಸುವಿನ ಜನನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಎಲ್ಲಾ ಕ್ರೈಸ್ತ ಭಕ್ತಾದಿಗಳು ಒಟ್ಟಾಗಿ ಸೇರಿ ಪ್ರಾರ್ಥಿಸಿ ಬಾಲ ಯೇಸುವನ್ನು ಗೋದಲಿಯಲ್ಲಿ ನಮಿಸಿದರು. ದೇವರ ಶಾಂತಿ ಪ್ರೀತಿಯನ್ನು ಎಲ್ಲರೊಡನೆ ಹಂಚಿಕೊಂಡರು.
ಕ್ರಿಸ್ಮಸ್ ದೇವರ ಪ್ರೀತಿಯ ಸ್ಮರಣೆ ಮನುಜರೆಲ್ಲರೂ ದ್ವೇಷ, ಸ್ವಾರ್ಥ ತ್ಯಜಿಸಿ ಶಾಂತಿ ಸೌಹಾರ್ದತೆಯಲ್ಲಿ ಬಾಳುವುದೇ ಕ್ರಿಸ್ಮಸ್ ಆಚರಣೆಯ ನಿಜ ಅರ್ಥವಾಗಿದೆ.
ಈ ಭಕ್ತಿಯುತ ಆಚರಣೆಯನ್ನು ಧರ್ಮ ಕೇಂದ್ರದ ಗುರುಗಳಾದ ಫಾದರ್ ಸುನಿಲ್ ಧರ್ಮ ಭಗೀನರು ಹಾಗೂ ಎಲ್ಲಾ ಕ್ರೈಸ್ತ ಭಕ್ತಾದಿಗಳು ಸಂತೋಷದಿಂದ ಸೇರಿ ಒಂದೇ ಕುಟುಂಬವಾಗಿ ಆಚರಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















