ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಹಿತ್ಯ ಲೋಕದಲ್ಲಿ, ಗೋಲಗುಂಡರವರ ಕಥೆಗಳು ಅಪರೂಪದ ಸಂಕಲನವಾಗಿದೆ : ಸುಜಾತ ಚಲವಾದಿ

ಬಾಗಲಕೋಟೆ/ ಹುನಗುಂದ : ೨೩ ಸಮಾಜದಲ್ಲಿ ಮಾನವೀಯತೆ ಕಳೆದು ಹೋಗುತ್ತಿದೆಯೇ ? ಎನ್ನುವ ಸಂಧರ್ಭದಲ್ಲಿ ಡಾ|| ಶ್ರೀಶೈಲ ರುದ್ರಪ್ಪ ಗೋಲಗುಂಡ ಅವರು ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು ಮಾನವೀಯತೆಯನ್ನು ಪೂನ್ನರು ಸೃಷ್ಟಿಸುವ ಕಥೆಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಇದೊಂದು ಅಪರೂಪದ ಕಥಾ ಸಂಕಲನವಾಗಿದೆ ಎಂದು ವಿಜಯಪೂರ ಜಿಲ್ಲೆಯ ತಾಳಿಕೋಟಿಯ ಖಾಸತೇಶ್ವರ ಪದವಿ ಉಪನ್ಯಾಸಕಿ ಡಾ|| ಸುಜಾತಾ ಚಲವಾದಿಯವರು ಕಥಾ ಸಂಕಲನದ ಬಗ್ಗೆ ಮಾತನಾಡುತ್ತಾ ಹೇಳಿದರು.
ಅವರು ಪಟ್ಟಣದ ಹೊನ್ನಕುಸುಮ ವೇದಿಕೆಯ ಆಶ್ರಮದಲ್ಲಿ ತಿಂಗಳು- ಬೆಳಕು ೩೧ ನೇ ಕಾರ್ಯಕ್ರಮದಲ್ಲಿ ವಿ. ಎಂ. ಕಾಲೇಜಿನ ಪ್ರಾಚಾರ್ಯ ಶ್ರೀಶೈಲ ಗೋಲಗುಂಡರವರ ದ್ಯಾಮ್ರ ಯಮ್ನವ್ವ ಮತ್ತು ಇತರ ಕಥೆಗಳು ಎಂಬ ಕಥಾಸಂಕಲನ ಬಗ್ಗೆ ಮಾತನಾಡಿ ಇಲ್ಲಿಯ ಎಲ್ಲಾ ಹತ್ತು ಕಥೆಗಳು ಹೃದಯ ಸ್ಪರ್ಧಿಯಾಗುದ್ದು ಜೀವನದ ಮೌಲ್ಯಗಳನ್ನು ಎತ್ತಿ ಹಿಡಿದು ಸಮಾನತೆಯ ಸಮಾಜ ಕಟ್ಟಬೇಕಾದ ಅವಶ್ಯಕತೆ ಇದೇ ಎಂದು ಇಲ್ಲಿಯ ಕಥೆಗಳು ಬತ್ತಿ ಹೇಳುತ್ತದೆ ಎಂದರು.
ಕಥೆಗಾರ ಶ್ರೀಶೈಲ ಗೋಲಗುಂಡ ಮಾತನಾಡಿ ಇಲ್ಲಿಯ ಎಲ್ಲಾ ಕಥೆಗಳು ವಾಸ್ತವಿಕ ನೆಲೆಯಲ್ಲಿ ರಚನಗೊಂಡಿವೆ ಸಮಾಜದಲ್ಲಿ ನಡೆಯುವ ಪ್ರಸಂಗಗಳನೇ ಕಥೆಗಳಾಗಿ ರೂಪಿಸಿ ಕೊಂಡಿದ್ದೇನೆ ಆದರಿಂದ ಇಲ್ಲಿಯ ಕಥೆಗಳು ಬಹಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹೇಶ ತಿಪ್ಪಾಶೆಟ್ಟಿ ಮಾತನಾಡಿ ಮೌಲ್ಯಯುತ ಸಾಹಿತ್ಯಕ್ಕೂ ಎಂದು ಸಾವಿಲ್ಲ ಗೊಲಗುಂಡರವರ ಕಥೆಗಳಲ್ಲಿ ವಾಸ್ತವಿಕತೆ ಎಂದು ಕಾಣುತ್ತದೆ. ಭಾರತೀಯ ಸಂಸ್ಕೃತಿಯ ಚೌಕಟ್ಟಿನಲ್ಲಿ ರೂಪಗೊಂಡ ಇಲ್ಲಿಯ ಕಥೆಗಳು ಮೌಲ್ಯಯುತವಾಗಿದೆ ಎಂದರು.
ಎಂ.ಡಿ. ಚಿತ್ತರಗಿ ಸ್ವಾಗತಿಸಿ ನಿರೂಪಿಸಿದರು ಬಿ.ಡಿ.ಚಿತ್ತರಗಿ ಪ್ರಾರ್ಥಿಸಿದರು ಜಗದೀಶ ಹಾದಿಮನಿ ವಂದಿಸಿದರು.
ಕಾರ್ಯಕ್ರಮದಲ್ಲಿ ಹುನಗುಂದ, ಇಲಕಲ್ಲ ಅವಳಿ ತಾಲೂಕಿನ ಹಿರಿಯ, ಕಿರಿಯ ಸಾಹಿತಿಗಳು ಭಾಗವಹಿಸಿದರು.

  • ಕರುನಾಡ ಕಂದ ಪತ್ರಿಕೆ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!