ಯಾದಗಿರಿ/ ಗುರುಮಠಕಲ್: ಡಿ.29 ತಾಲೂಕಿನ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಬೋಡಬಂಡ ದೇವಸ್ಥಾನದಲ್ಲಿ ನಾಳೆ ವೈಕುಂಠ ಏಕಾದಶಿ ನಿಮಿತ್ಯ ಬೆಳಿಗ್ಗೆಯಿಂದ ವಿಶೇಷ ಪೂಜೆ, ಪುಷ್ಪ ಅಲಂಕಾರ, ಸಹಸ್ರ ತುಳಸಿ ಅರ್ಚನೆ, ವೇದಪಾರಾಯಣ, ಮಹಾಮಂಗಳಾರತಿ, ತೀರ್ಥಗೋಷ್ಠಿ ನೆರವೇರುವುದು ಎಂದು ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಂಘ ವ್ಯವಸ್ಥಾಪಕರಾದ ಶ್ರೀ ನರೇಂದ್ರ ರಾಥೋಡ್ ತಿಳಿಸಿದ್ದಾರೆ.
ಬೆಳಿಗ್ಗೆ 9-00 ಗಂಟೆಗೆ ವೈಕುಂಠದ್ವಾರ ಉದ್ಘಾಟನೆಗೊಂಡು ಭಕ್ತರಿಗೆ ದ್ವಾರ ಪ್ರವೇಶ ನೀಡಲಾಗುವುದು, ಸಂಜೆ 5ಗಂಟೆಯಿಂದ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮಾಡಲಾಗುತ್ತದೆ ಹಾಗೂ ಶ್ರೀದೇವಿ ಭೂದೇವಿ ಸಮೇತ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವರ ಪಲ್ಲಕ್ಕಿ ಸೇವೆ, ಪವಲಿಂಪಸೇವ, ಅಷ್ಟಾವಧಾನ ಸೇವೆ ಸಾಯಂಕಾಲದವರೆಗೆ ಜರುಗುತ್ತವೆ ಎಲ್ಲಾ ದೇವಸ್ಥಾನದ ಭಕ್ತಾಧಿಗಳು
ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಂಘ ವತಿಯಿಂದ ಜರುಗುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೋರಿದ್ದಾರೆ.
ವರದಿ: ಜಗದೀಶ್ ಕುಮಾರ್ ಭೂಮಾ



















