
ಯಾದಗಿರಿ/ಗುರುಮಠಕಲ್: ತಾಲೂಕಿನ ವಿಶ್ವ ಹಿಂದೂ ಪರಿಷದ್, ಭಜರಂಗದಳ ಪ್ರಖಂಡ, ಪಟ್ಟಣದ ಹಿಂದೂ ಸಮಾಜವತಿಯಿಂದ ಬಾಂಗ್ಲಾದೇಶದಲ್ಲಿ ಇತ್ತೀಚಿಗೆ ಹಿಂದೂ ಯುವಕನನ್ನು ದಹಿಸಿದ ಹೀನಾಯ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ನಗರೇಶ್ವರ ದೇವಸ್ಥಾನದಿಂದ ಅಂಬಿಗರ ಚೌಡಯ್ಯ ವೃತ್ತದವರೆಗೆ ಧರ್ಮದ ಹೆಸರಿನಲ್ಲಿ ಆಗುತ್ತಿರುವ ಹತ್ಯೆ ಖಂಡಿಸಿ, ಬಾಂಗ್ಲಾದೇಶದ ಪ್ರಧಾನಿ ಭಾವಚಿತ್ರ ಇರುವ ಪ್ರತಿಕೃತಿ ಹಿಡಿದು ಬಾಂಗ್ಲಾದೇಶದ ಧ್ವಜ ರಸ್ತೆಗೆ ಅಂಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿ ಪ್ರತಿಕೃತಿ ದಹನ ಮಾಡಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರವೀಂದ್ರ ರೆಡ್ಡಿ ಪೋತುಲ್ ದೀಪು ಚಂದ್ರ ದಾಸ್ ಎನ್ನುವ ಗಾರ್ಮೆಂಟ್ ಕಾರ್ಖಾನೆ ಕಾರ್ಮಿಕನನ್ನ ಬಾಂಗ್ಲಾದೇಶದ ಸ್ಥಳೀಯರ ಗುಂಪೊಂದು ಥಳಿಸಿ ಬಳಿಕ ಮರಕ್ಕೆ ಕಟ್ಟಿ ಬೆಂಕಿ ಹಚ್ಚಿರುವ ಹೀನಾಯ ಕೃತ್ಯ ಮತ್ತೆ ಮರುಕಳುಹಿಸದಂತೆ ಪ್ರಧಾನಿಯವರು ವಿದೇಶದಲ್ಲಿರುವ ಹಿಂದೂಗಳಿಗೆ ರಕ್ಷಣೆ ಮಾಡಬೇಕು ಎಂದು ಆಕ್ರೋಶದ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಹಿಂದೂ ಪರಿಷದ್ ತಾಲೂಕು ಅಧ್ಯಕ್ಷ ಶ್ರೀನಿವಾಸ್ ಯಾದವ್, ಹಿಂದೂ ಯುವ ಘರ್ಜನೆ ವೇದಿಕೆ ಅಧ್ಯಕ್ಷ ವೆಂಕಟೇಶ್ ಮುದಿರಾಜ್, ಲಕ್ಷ್ಮಣ್ ಕುಂಬಾರ್, ಮಹಾದೇವ್ ಶಾಸ್ತ್ರಿ, ವಿಶಾಲ್ ಮುತ್ತಿಗೆ ,ಚಂದ್ರಕಾಂತ್ ಸುದ್ದಿ ,ರಮೇಶ ಹೂಗಾರ, ಮಹೇಶ್ ಬುದೂರ್, ಅಂಜಪ್ಪ ರಾಮುಲು, ನರಸಿಂಹಲು ಗಂಗನೋಳ್, ಭೀಮು ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ



















