ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳು ತಪಾಸಣೆಗೆ ಅಂತ ಹೋದರೆ ವೈದ್ಯರುಗಳು ತಪಾಸಣೆ ಮಾಡಿ ತಮ್ಮ ಹತ್ತಿರ ಇದ್ದ ಔಷಧಿಯನ್ನು ಕೊಡದೆ ಹೊರಗಡೆ ಔಷಧಿ ಚೀಟಿ ಬರೆದು ಕೊಡುತ್ತಿರುತ್ತಾರೆ ಸಾರ್ವಜನಿಕರು ಹೊರಗಡೆ ಔಷಧಿ ಯಾಕೆ ಬರೆಯುತ್ತೀರಿ ಅಂತ ಕೇಳಿದರೆ ನಮ್ಮಲ್ಲಿ ಸ್ಟಾಕ್ ಇಲ್ಲ ಅಂತ ಹೇಳುತ್ತಿದ್ದಾರೆ.
ಇದಕ್ಕೆ ಸಂಬಂಧಿಸಿದ ಹಾಗೆ ಸಮುದಾಯ ಆರೋಗ್ಯ ಅಧಿಕಾರಿಗಳನ್ನು ಭೇಟಿಯಾಗಿ ಈ ವಿಷಯದ ಬಗ್ಗೆ ಮಾತನಾಡಿದಾಗ ಅವರು ಕೂಡ ಇದೇ ಮಾತನ್ನು ಹೇಳಿರುತ್ತಾರೆ ಹೀಗಾಗಿ ಕೂಡಲೇ ತಾಲೂಕು ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಅಧಿಕಾರಿಗಳು ( ಡಿಎಚ್ಒ)
ವಿಜಯಪುರ ಇವರು ಮಧ್ಯಪ್ರವೇಶಿಸಿ ರೋಗಿಗಳಿಗೆ ಔಷಧಿ ಸಿಗುವಂತೆ ಮಾಡಿಕೊಡಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ.
ವರದಿ : ಸಂತೋಷ ಚಿಮ್ಮಲಗಿ



















