
ವಿಶೇಷ ಪೂಜೆ ಪುಷ್ಪಲಂಕಾರದೊಂದಿಗೆ ಲಕ್ಷ್ಮೀ ತಿಮ್ಮಪ್ಪನ ದರ್ಶನ ಪಡೆದ ಭಕ್ತ ಸಮೂಹ.

ಯಾದಗಿರಿ/ಗುರುಮಠಕಲ್: ಡಿ.30 ನಮ್ಮ ಯಾದಗಿರಿ ಜಿಲ್ಲೆಯ ವೈಕುಂಠ ಎರಡನೇ ತಿರುಪತಿ ಎಂದೇ ಖ್ಯಾತಿಯಾಗಿರುವ ಬೋಡಬಂಡ ಕ್ಷೇತ್ರದಲ್ಲಿ ಇಂದು ಭಕ್ತಾದಿಗಳು ವೈಕುಂಠ ಏಕಾದಶಿ ನಿಮಿತ್ಯ ವೆಂಕಟರಮಣನ ನಾಮ ಸ್ಮರಣೆಯೊಂದಿಗೆ ಭಕ್ತಿ ಪರವಶದಲ್ಲಿ ತೇಲಿದರು.
ವೈಕುಂಠ ಏಕಾದಶಿ ನಿಮಿತ್ಯ ಬೆಳಿಗ್ಗೆಯಿಂದ ವಿಶೇಷ ಪೂಜೆಗಳು ಪುಷ್ಪ ಅಲಂಕಾರ, ಸಹಸ್ರ ತುಳಸಿ ಅರ್ಚನೆ, ವೇದಪಾರಾಯಣ, ಮಹಾಮಂಗಳಾರತಿ, ತೀರ್ಥಗೋಷ್ಠಿ ಜರುಗಿದವು.
ವೈಕುಂಠದ್ವಾರ ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ಅವರಿಂದ ಉದ್ಘಾಟನೆಗೊಂಡು ಭಕ್ತರಿಗೆ ದ್ವಾರ ಪ್ರವೇಶ ನೀಡಲಾಯಿತು.
ಇಂದಿನ ವಿಶೇಷ ದಿನದ ಪ್ರಯುಕ್ತ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಂಘ ವತಿಯಿಂದ ಭಕ್ತರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆಯಿಂದ ಭಕ್ತ ಸಾಮೂಹ ಪಾಲ್ಗೊಂಡಿರುವದು ಸಂತಸ ತಂದಿದೆ ಎಂದು ವ್ಯವಸ್ಥಾಪಕರಾದ ಶ್ರೀ ನರೇಂದ್ರ ರಾಠೋಡ್ ತಿಳಿಸಿದರು.
ದೇವಸ್ಥಾನದ ಈ ಕಾರ್ಯಕ್ರಮದಲ್ಲಿ ಶ್ರೀಮತಿ ಲಕ್ಷ್ಮೀ ರಾಠೋಡ್, ಅಯ್ಯಪ್ಪ ರಾಠೋಡ್, ಶ್ರೀಮತಿ ವೆಂಕಟಮ್ಮ ರಾಠೋಡ್, ಶ್ರೀಮತಿ ಚಂದ್ರಿಕಾ ರಾಠೋಡ್, ಮನೋಹರ್ ಪವಾರ್, ರಮೇಶ್ ಪವಾರ್, ಮೋಹನ್ ರಾಠೋಡ್, ರಾಜು ರಾಠೋಡ್ ಜೆಸಿಬಿ, ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು ದೇವಸ್ಥಾನದ ಭಕ್ತರು ಇದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ



















