ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಗವದ್ಗೀತೆಯ ಆಧುನಿಕ ಅನ್ವಯಿಕತೆ ಕಾರ್ಯಾಗಾರ ಸಂಪನ್ನ

ಬೆಂಗಳೂರು: ಹಲವು ಯಜ್ಞಗಳ ಕುರಿತು ವಿಸ್ತಾರವಾಗಿ ಚರ್ಚಿಸಲಾಗಿದೆ. ಅವುಗಳಲ್ಲಿ ದ್ರವ್ಯ ಯಜ್ಞ ಎಂದರೆ ಕೆರೆಕಟ್ಟೆ ಕಟ್ಟಿಸುವುದು, ದೇವಸ್ಥಾನ, ಸದ್ಗೃಹ ನಿರ್ಮಾಣ ಮಾಡುವುದು ಎಂಬ ಅರ್ಥದಲ್ಲಿಯೇ ಶ್ರೀ ಕೃಷ್ಣ ಪರಮಾತ್ಮನು ಹೇಳಿದ್ದಾನೆ ಎಂದು ಡಾ. ಜಿ ಎನ್ ಭಟ್ಟ ಹರಿಗಾರ ಅವರು ಯಜ್ಞ ಪರಿಕಲ್ಪನೆಯ ಕುರಿತು ವಿಸ್ತಾರವಾಗಿ ತಿಳಿಸಿದರು.
ಅವರು ಇಂದು ನಗರದ ಗಾಯತ್ರಿ ಗೆಳೆಯರ ಬಳಗದಲ್ಲಿ ಭಗವದ್ಗೀತೆಯ ಆಧುನಿಕ ಅನ್ವಯಿಕತೆ ಕುರಿತ ಕಾರ್ಯಗಾರದ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಮುಂದುವರಿದು ಜ್ಞಾನ ಸನ್ಯಾಸ ಯೋಗ, ಆತ್ಮ ಜ್ಞಾನವನ್ನು ಅರಿತವನೇ ಪಂಡಿತ, ಜ್ಞಾನ ಯಾವುದು?, ವಿಜ್ಞಾನ ಯಾವುದು? ಕುಲಧರ್ಮ ಸ್ವಧರ್ಮ ಅಂದರೇನು? ಅವುಗಳ ಕುರಿತು ಬಹು ವಿಸ್ತಾರವಾಗಿ ಉದಾಹರಣೆ ಸಹಿತ ಪಾಂಡಿತ್ಯಪೂರ್ಣ ಉಪನ್ಯಾಸ ನೀಡಿದರು.

ಕಾರ್ಯಾಗಾರದ ಇನ್ನೊಂದು ಗೋಷ್ಠಿಯಲ್ಲಿ ಡಾ. ವಿನಾಯಕ ಭಟ್ಟ ಗಾಳಿಮನೆ ಅವರು ಡಾ. ಜಿ ಎನ್ ಭಟ್ಟ ಹರಿಗಾರ ಅವರ ತತ್ವಶಾಸ್ತ್ರದ ಟೆಕ್ಸ್ಟ್ ಬುಕ್ ಭಗವದ್ಗೀತೆ, ತತ್ವದರ್ಶನ ಮತ್ತು ಆಧುನಿಕ ಅನ್ವಯಿಕತೆ ಪುಸ್ತಕದ ಕುರಿತು ಮಾತನಾಡುತ್ತಾ, ಈ ಪುಸ್ತಕದಲ್ಲಿ ವಾಸ್ತವಿಕತೆ -ಸಂದಿಗ್ಧತೆ, ವ್ಯಕ್ತಿತ್ವ ವಿಕಸನ, ಕರ್ಮಯೋಗದ ಕರ್ಮ- ಅಕರ್ಮ- ವಿಕರ್ಮ ಕುರಿತು, ಪುಸ್ತಕದಲ್ಲಿ ಪ್ರತಿಪಾದಿಸಿದ ಅಂತರಂಗ- ಬಹಿರಂಗ ವಿಷಯವನ್ನು ವಿಸ್ತಾರವಾಗಿ ಪ್ರಸ್ತಾಪಿಸಿ, ಭಗವದ್ಗೀತೆ ನಮಗೇನು ದಾರಿ ದೀಪ ತೋರಿಸಿಕೊಟ್ಟಿದೆ ಎಂಬುದನ್ನು ಬಹಳ ಮಾರ್ಮಿಕವಾಗಿ ತಿಳಿಸಿ ಪುಸ್ತಕದ ಆಶಯವನ್ನು ಸಭಿಕರಿಗೆ ತಿಳಿಸಿದರು.

ಕಾರ್ಯಗಾರವನ್ನು ವಿದ್ವಾನ್ ಚಂದ್ರಶೇಖರ್ ಭಟ್ ಗಾಳಿ ಮನೆ, ಡಾಕ್ಟರ್ ಎಂ ಜಿ ಹೆಗಡೆ, ಎಂ ಎಸ್ ಹೆಗಡೆ ಅವರೊಂದಿಗೆ ವಿಶ್ವೇಶ್ವರ ಗಾಯತ್ರಿಯವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ವಿದ್ವಾನ್ ಚಂದ್ರಶೇಖರ ಭಟ್ಟ ಗಾಳಿಮನೆ ಅವರು, ಆತ್ಮ ತತ್ವ, ಮೋಕ್ಷದ ಕುರಿತು ತಿಳಿಸಿ ಮುಕ್ತಿ ಹೇಗೆ ಪಡೆಯಬೇಕೆಂಬುದರ ಕುರಿತು ಆಡಿದ ಬೋಧಪ್ರಧವಾದ ಮಾತುಗಳು ಸಭಿಕರ ಹೃದಯವನ್ನು ತಟ್ಟುವಂತೆ ಮಾಡಿತು.

ಕಾರ್ಯಾಗಾರದಲ್ಲಿ ಭಾಗವಹಿಸಿದ ಡಾ. ಜ್ಯೋತಿ ಗೋಕಾವಿ ಅವರು ಭಗವದ್ಗೀತೆಯಲ್ಲಿ ಪ್ರಸ್ತಾಪಿಸಲಾದ ಆತ್ಮ ಪರಮಾತ್ಮನ ಕುರಿತು ತಿಳಿಸಿ, ಸಂಯೋಗ, ಪರ ಸಂಯೋಗ, ಪರಮಾತ್ಮ ಸಂಯೋಗ ಹೇಗೆ ಎಂಬುದನ್ನು ತಮ್ಮ ಪುಟ್ಟ ಭಾಷಣದಲ್ಲಿ ತಿಳಿಸಿ ಹೇಳಿದರು. ಕಾರ್ಯಗಾರದಲ್ಲಿ ಭಾಗವಹಿಸಿದ ಡಾ. ಪ್ರಕಾಶ ಹೆಗಡೆ ಅವರು ಭಗವದ್ಗೀತೆಯನ್ನು ಸರ್ವಶಾಸ್ತ್ರಗಳ ಸಾರ ಎಂದು ಸ್ವೀಕರಿಸಬಹುದು; ಭಗವದ್ಗೀತೆಯ ಕಾಂತತ್ವ ನನ್ನನ್ನು ಧಾರವಾಡದಿಂದ ಶಿರಸಿಯ ಈ ಕಾರ್ಯಾಗಾರಕ್ಕೆ ಕರೆ ತಂದಿದೆ ಎಂದು ಹೇಳಿ, ಭಗವದ್ಗೀತೆಯಲ್ಲಿ, ಭಾಸನ ಪರಿಕಲ್ಪನೆಯ ಯುದ್ಧ ಯಜ್ಞದ ಕುರಿತು ಇಲ್ಲಿ ಸೇರಿದ ನನ್ನಂತಹ ಜಿಜ್ಞಾಸುಗಳಿಗೆ ತಿಳಿಸಬೇಕೆಂದು ಕೋರಿಕೊಂಡರು.

ಕಾರ್ಯಗಾರದಲ್ಲಿ ಭಗವದ್ಗೀತೆಯ ಕುರಿತ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಅಪರ್ಣಾ ಹೆಗಡೆ, ಪ್ರಭಾವತಿ ಹೆಗಡೆ, ಜ್ಯೋತಿ ಪಿ ಎಂ ಅವರು ತಾವು ಸ್ಪರ್ಧೆಯಲ್ಲಿ ಮಂಡಿಸಿದ ವಿಷಯಗಳು ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಶಿರಸಿ ಎಮ್ ಇ ಎಸ್ ವಿದ್ಯಾ ಸಂಸ್ಥೆಗಳ ಉಪಾಧ್ಯಕ್ಷರಾದ ಡಾ. ಎಂ ಜಿ ಹೆಗಡೆ ಅವರು ಸಂಶೋಧನಾ ಸಂಸ್ಥೆಯು ಕಳೆದ 25 ವರ್ಷಗಳಿಂದ 17 ರಾಷ್ಟ್ರ ಮಟ್ಟದ ಸೆಮಿನಾರ್ ಗಳನ್ನು ಏರ್ಪಡಿಸಿದ್ದು, ದೇಶದ ವಿವಿಧ ಭಾಗಗಳಿಂದ ಹಿರಿ-ಕಿರಿಯ ವಿದ್ವಾಂಸರುಗಳನ್ನು ಸೇರಿಸಿ ಯಶಸ್ವಿಯಾಗಿರುವದನ್ನು ತಿಳಿಸಿ, ಡಾ. ವಿನಾಯಕ ಭಟ್ಟ ಗಾಳಿಮನೆ, ಡಾ. ಪದ್ಮನಾಭ ಮರಾಠೆ ಅವರೊಂದಿಗೆ ಸೇರಿ, ಡಾ. ದಯಾನಂದ ಶಾನಭಾಗ ಅವರ ಆಶಯದಂತೆ ಮುಂದುವರಿಯುತ್ತಿದ್ದೇನೆ, ಎಲ್ಲರೂ ಸಹಕರಿಸಬೇಕೆಂದು ಕೋರಿಕೊಂಡರು.

ಲಯನ್ ಅನಿತಾ ಹೆಗಡೆವರು, ಪ್ರಭಾವತಿ, ರೇಖಾ, ಸವಿತಾ, ಪ್ರೇಮಾ ಅವರೊಂದಿಗೆ ವಿಶ್ವರೂಪದರ್ಶನ ಭಗವದ್ಗೀತಾ ಪಾರಾಯಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಡಾ. ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ನಿರೂಪಿಸಿದರು ಹಾಗೂ ವಿಶ್ವೇಶ್ವರ ಗಾಯತ್ರಿ ವಂದಿಸಿದರು. ಕಾರ್ಯಕ್ರಮದಲ್ಲಿ ರಾಜೇಂದ್ರ ಭಟ್, ವಿವೇಕ್ ಪೈ, ಪ್ರೊ. ಕೆ ಎನ್ ಹೊಸಮನಿ, ಎಂ ಆರ್ ಹೆಗಡೆ ಇಳ್ಳೂಮನೆ, ವಿ ಜಿ ಹೆಗಡೆ ಕಬ್ಬನಳ್ಳಿ, ಡಿ ಎಸ್ ಹೆಗಡೆ, ಲಕ್ಷ್ಮಣ ಶಾನಭಾಗ, ಐ ಜಿ ಗಿಡ್ಡನ್, ಪಾರ್ವತಿ ಹೆಗಡೆ, ಕೃಷ್ಣವೇಣಿ ಹೆಗಡೆ, ಆಶಾ ಸಭಾಹಿತ, ಪದ್ಮಾವತಿ ಹೆಗಡೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ: ಶಿವಪ್ರಸಾದ್ ಕೊಡಕ್ಕಲ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!