ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭೀಮಾ ಕೋರೆಗಾಂವ್ ವಿಜಯೋತ್ಸವವು ಡಾಕ್ಟರ್ ಬಿ.ಆರ್.ಅಂಬೇಡ್ಕರರ ಮೂಲಕ ಆಧುನಿಕ ಭಾರತವನ್ನು ಕಟ್ಟಲು ಪ್ರೇರಣೆಯಾಯಿತು : ರಾಮು.ಟಿ

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರು ಒಂದನೇ ವಾರ್ಡ್ ಅಂಬೇಡ್ಕರ್ ಕಾಲೋನಿಯಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಹಾಗೂ ಅನ್ನದಾತ ರೈತರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಟಿ.ರಾಮು ಮಾತನಾಡಿ ಭೀಮಾ ಕೋರೆಗಾಂವ್ ಕದನ ಎನ್ನುವುದು ಕೇವಲ ಚಾರಿತ್ರಿಕ ಯುದ್ದವಲ್ಲ. ಅದು ಶೋಷಿತರ ಆತ್ಮ ಗೌರವದ ಜ್ವಲಂತ ಪ್ರತೀಕ 1818ರ ಜನವರಿ 1 ರಂದು ನಡೆದ ಈ ಹೋರಾಟವು ಅಸಮಾನತೆ ಮತ್ತು ದಬ್ಬಾಳಿಕೆಯ ವಿರುದ್ದದ ನಿರಂತರ ಪ್ರತಿರೋಧಕ್ಕೆ ಸಾಕ್ಷಿಯಾಗಿದೆ. ನ್ಯಾಯ ಹಾಗೂ ಮಾನವೀಯ ಮೌಲ್ಯಗಳ ಸ್ಥಾಪನೆಗೆ ಇಂದಿಗೂ ಇದು ದಾರಿದೀಪವಾಗಿದೆ ಎಂದರು.

ಯುವ ಮುಖಂಡ ರಾಜಣ್ಣ ಮಾತನಾಡಿ ರೈತ ದೇಶದ ಬೆನ್ನೆಲುಬು. ರೈತರಿಗೆ ಸರಿಯಾಗಿ ವಿದ್ಯುತ್, ಸರಿಯಾದ ರೀತಿಯಲ್ಲಿ ನೀರು ಹಾಗೂ ರೈತ ಬೆಳೆದ ಬೆಳೆಗಳಿಗೆ ಸಮರ್ಪಕವಾಗಿ ಬೆಲೆಯನ್ನು ನಮ್ಮ ಸರಕಾರಗಳು ಸರಿಯಾಗಿ ಕೊಟ್ಟರೆ ರೈತರು ಇಡಿ ದೇಶಕ್ಕಲ್ಲಾ ಇಡಿ ವಿಶ್ವಕ್ಕೆ ಅನ್ನ ನೀಡುತ್ತಾರೆ ಎಂದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಪದ್ಮಾವತಿ ಮಾತನಾಡಿ ಇವತ್ತಿನ ದಿನ ಪ್ರತಿಯೊಬ್ಬರೂ ಒಂದು ತುತ್ತು ಅನ್ನ ತಿನ್ನಬೇಕೆಂದರೆ ದೇವರಿಗಿಂತಲೂ ಮೊದಲು ರೈತರನ್ನು ನೆನೆಸಿಕೊಂಡು ಅನ್ನವನ್ನು ತಿನ್ನಬೇಕು ಎಂದರು.

ಈ ಸಂದರ್ಭದಲ್ಲಿ ಶ್ರೀ ಜಡೇಶತಾತಾ, ಶ್ರೀ ಹುಲುಗಪ್ಪ ತಾತಾ, ಕರೆಪ್ಪ, ಹೇಮಣ್ಣ, ಶಂಕ್ರಪ್ಪ, ಹನುಮಂತಪ್ಪ, ಮಲ್ಲಪ್ಪ, ಬಡಿಗೇರ ವೀರೇಶ, ಹೆಚ್.ಪಂಪಾಪತಿ ಸೇರಿದಂತೆ ಇತರರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!