ಅಜ್ಜನ ಜಾತ್ರೆಗೆ ಬನ್ನಿ…
ಕೊಪ್ಪಳ ನಗರದಲ್ಲೊಂದು ಮಠ,
ಅಪ್ಪಟ, ಅದ್ಭುತ ಮಠ,
ಅದುವೇ ಶ್ರೀ ಗವಿಮಠ,
ಮಹಿಮಾ ಪುರುಷರ ಮಹಾ ಮಠ,
ಇದು ಪ್ರಕೃತಿ ಸೌಂದರ್ಯದ ತಾಣ,
ಎಷ್ಟು ನೋಡಿದರೂ
ತಣಿಯದು ಮನ,
ಹಲವು ಧರ್ಮೀಯರ ನಾಡಿಗೆ
ಸಾಕ್ಷಿಯಾಗಿ ನಿಂತಿದೆ,
ಕೊಪ್ಪಳವ ನೋಡು,
ಇದೋ ಪರಮ ಪೂಜ್ಯರ ಸ್ಥಾನ,
ಇಲ್ಲಿ ಸರ್ವರೂ ಸಮಾನ,
ಬಂದಿದೆ ಇಲ್ಲಿಗೆ ಸಕಲ ಸದ್ಭಕ್ತ ಜನ,
ಪಾವನವಾಯ್ತು ಮನ,
ಎಳೆಯಲಿದೆ ಇಂದು ಭವ್ಯ, ದಿವ್ಯ, ತೇರು,
ಬೇಡುತಿದೆ ಭಕ್ತ
ಸಮೂಹ ಈ ಭವದಿಂದ ಮಾಡೆಮ್ಮನು ಪಾರು,
ಜಡವ ಕಳೆದು ಬಿಡಿಸು ಈ ಪಾಶ,
ಜಗವ ಉದ್ಧರಿಸೋ ಶ್ರೀ ಗವಿಸಿದ್ಧೇಶ,
ಇಂಥ ಪುಣ್ಯ ಕ್ಷೇತ್ರವ ಬಂದು ನೋಡೊಮ್ಮೆ,
ನಿತ್ಯ ನಡೆದಿದೆ ಇಲ್ಲಿ ಜ್ಞಾನ ದಾಸೋಹ, ನಿರಂತರವಾಗಿದೆ,
ಇಲ್ಲಿ ಅನ್ನ ದಾಸೋಹ.
ಅಂತೆಯೇ
ಇದಾಗಿದೆ, ಅದ್ಭುತ ಮಠ,
ಸೋಜಿಗವೆನಿಸುವ ಅಪ್ಪಟ ಮಠ, ಪೂಜ್ಯರು ಬಾಳಿದ, (ಬಾಳುವ) ಪುಣ್ಯ ಮಠ, ಅದುವೇ ಶ್ರೀ ಗವಿಮಠ.

- ಶಿವಪ್ರಸಾದ್ ಹಾದಿಮನಿ.✍️
ಕನ್ನಡ ಉಪನ್ಯಾಸಕರು.
ಸ. ಪ್ರ. ದ. ಮಹಿಳಾ ಕಾಲೇಜು.
ಕೊಪ್ಪಳ. 583231.
ಮೊ. 7996790189.




















