1987 ರಿಂದ 1992 ರವರೆಗೆ ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಎಚ್ ವಿಶ್ವನಾಥ ಇದ್ದಾಗ ಎಸ್ ಸಿ ಎಸ್ ಟಿ ಶಾಲಾ ಕಾಲೇಜುಗಳು ಅನುದಾನಕ್ಕೆ ಒಳಪಟ್ಟಿವೆ. ತದ ನಂತರ 2008ರಲ್ಲಿ ಬಿಜೆಪಿ ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಸನ್ಮಾನ್ಯ ಶ್ರೀ ಬಿಎಸ್ ಯಡಿಯೂರಪ್ಪನವರ ಮುಖ್ಯಮಂತ್ರಿ ಹಾಗೂ ಬಿ ಎಸ್ ಹೊರಟ್ಟಿ ಶಿಕ್ಷಣ ಮಂತ್ರಿ ಆಗಿದ್ದಾಗ 1992 ರಿಂದ 1995 ಡಿಸೆಂಬರ್ 31ರ ತನಕ ಅನುದಾನ ಕೊಟ್ಟಿದ್ದಾರೆ .ಆದರೆ 1995 ರಿಂದ 2025 ರವರೆಗೆ ಅಂದರೆ 30 ವರ್ಷಗಳಿಂದ ಪ್ರಾರಂಭವಾದ ಶಾಲಾ ಕಾಲೇಜುಗಳಿಗೆ ಅನುದಾನ ಭಾಗ್ಯ ಇಲ್ಲ ಚಳುವಳಿ, ಹಲವಾರು ಹೋರಾಟ ಮಾಡಿದರೂ ಪ್ರತಿಫಲ ಸಿಕ್ಕಿಲ್ಲ ನೊಂದ ನೂರಾರು ಶಾಲಾ ಶಿಕ್ಷಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಕುಟುಂಬ ನಡೆಸಲು ಹಲವಾರು ಶಿಕ್ಷಕರು ತೊಂದರೆ ಅನುಭವಿಸುತ್ತಿದ್ದಾರೆ. ಕನ್ನಡ ಭಾಷೆಯ ಉಳುವಿಗೆ ಒತ್ತು ನೀಡಿ. ಈ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರ ಬದುಕಿಗೆ ಹಾಗೂ ವ್ಯಾಸಂಗ ಮಾಡುತ್ತಿರುವ ಲಕ್ಷಾಂತರ ಬಡ ಮಕ್ಕಳಿಗೆ ಆಶ್ರಯ ಆಗಬೇಕೆಂದು ನೊಂದ ಎನ್ ಜಿ ಚೌದ್ರಿ ಅಧ್ಯಕ್ಷರು (ಸ್ವಾಮಿ ವಿವೇಕಾನಂದ ಶಿಕ್ಷಣ ಸಂಸ್ಥೆ ತಾಂಬಾ) ಶಿವಶರಣ ಕಣ್ಣಿ ,ರಮೇಶ್ ಬಿರಾದಾರ್, ಎಂಡಿ .ಶೇಕ್ ಗುಲಾಬ್ ಚವಾಣ್ ಅವರು ಆಗ್ರಹಿಸಿದ್ದಾರೆ.
ವರದಿ : ಲೋಹಿತಕುಮಾರ ರೂಗಿ





















One Response
SC ST shiskhana samstegalige anudana bandilla pls attempt sir