ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಮಸ್ಯೆ ಬಗೆಹರಿಯದಿದ್ದರೆ ಶಾಸಕರು ಹಾಗೂ ತಾಲೂಕು ದಂಡಾಧಿಕಾರಿ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ

ಹನೂರು: ಶಾಸಕ ಎಂ ಆರ್ ಮಂಜುನಾಥ್ ಹಾಗೂ ತಾಲ್ಲೂಕು ದಂಡಾಧಿಕಾರಿ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಬೈರನತ್ತ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಪಟ್ಟಣದ ತಾಲ್ಲೂಕು ಕಚೇರಿಯ ಆವರಣದಲ್ಲಿ ಸೇರಿದ್ದ ಅವರು ಸ್ಮಶಾನಕ್ಕೆ ತಿರುಗಾಡುವ ರಸ್ತೆಯ ಒತ್ತುವರಿಯನ್ನು ಬಿಡಿಸದಿದ್ದರೆ ನಾವು ನಮ್ಮ ತಾಲ್ಲೂಕು ಸಮುದಾಯದ ಸಂಘಟನೆ ವತಿಯಿಂದ ನಾವು ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸ್ಮಶಾನಕ್ಕೆ ತಿರುಗಾಡುವ ಒತ್ತುವರಿ ಜಾಗವನ್ನು ಬಿಡಿಸಬೇಕೆಂದು ಗ್ರಾಮದ ಆದಿ ಜಾಂಬವ ಸಮುದಾಯದ ಜನರು ತಹಶೀಲ್ದಾರರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ತಿಳಿಸಿದರು.
ತಾಲ್ಲೂಕಿನಲ್ಲಿ ಬರುವ ಬೈರನತ್ತ ಗ್ರಾಮದಲ್ಲಿ ಆದಿಜಾಂಬವ ಸಮುದಾಯದ ಸ್ಮಶಾನದ ರಸ್ತೆಯನ್ನು ಗ್ರಾಮದ ಲೋಕೇಶ್ ಎಂಬ ವ್ಯಕ್ತಿ ಅನೇಕ ವರ್ಷಗಳಿಂದ ಸ್ಮಶಾನಕ್ಕೆ ಹೋಗುತ್ತಿದ್ದ ರಸ್ತೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾನೆ ಎಂದರು.
ನಾವು ನಮ್ಮ ಸಮುದಾಯದಲ್ಲಿ ಯಾರಾದರೂ ತೀರಿ ಹೋದರೆ ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ಹೋಗುವುದಕ್ಕೆ ತೊಂದರೆ ಉಂಟಾಗುತ್ತಿದೆ ಎಂದರು

ಇದೆ ಸಮಸ್ಯೆಯವನ್ನು ಎಸ್ ಸಿ ಎಸ್ ಟಿ ಸಭೆಯಲ್ಲಿ ತಿಳಿಸಿದಾಗ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ರವರಿಗೆ ಸೂಚನೆ ನೀಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಿದರು.
ತಹಶೀಲ್ದಾರ್ ಕೂಡ ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿ ಬಗ್ಗೆ ಮಾಹಿತಿ ತಿಳಿದುಕೊಂಡು ಸರ್ವೇ ಅಧಿಕಾರಿಗಳಿಗೆ ಸರ್ವೇ ಮಾಡುವಂತೆ ಹೇಳಿದರು ಸರ್ವೆಯಲ್ಲಿ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಿತು ಅದರಂತೆ ಸ್ಮಶಾನಕ್ಕೆ ದಾರಿ ಬಿಡಿಸಲು ದಿನಾಂಕವನ್ನು ನಿಗದಿ ಮಾಡಿದ್ದರು ಈ ಮಧ್ಯದಲ್ಲಿ ಶಾಸಕರು ಭಾಗಿಯಾಗಿ ನೀವು ಈಗಿರುವ ಹಳ್ಳದಲ್ಲಿ ತಿರುಗಾಡಿ ಒತ್ತುವರಿಯನ್ನು ಬಿಡಿಸುವುದಕ್ಕೆ ಆಗುವುದಿಲ್ಲ ಎಂದು ಅವರ ಪರವಾಗಿ ಮಾತನಾಡಿ ದಲಿತರಿಗೆ ಮೋಸ ಮಾಡುತ್ತಾ ಇದ್ದಾರೆ ಎಂದರು.
ಮಳೆ ನೀರು ಹರಿಯುವ ಹಳ್ಳವನ್ನು ಕೂಡ ಒತ್ತುವರಿ ಮಾಡಿಕೊಂಡಿದ್ದು ಕಿರಿದಾದ ಹಳ್ಳದಲ್ಲಿ ಶವವನ್ನು ಹೊತ್ತುಕೊಂಡು ಹೋಗುವುದಕ್ಕೆ ಆಗುತ್ತಾ? ಎಂದರು
ಮಳೆ ಬಿದ್ದಾಗ ಹಳ್ಳದಲ್ಲಿ ನೀರು ತುಂಬಿಕೊಂಡು ಹರಿಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದೇ ಸಂದರ್ಭದಲ್ಲಿ ಯಾರಾದ್ರೂ ತೀರಿಕೊಂಡರೆ ನಾವು ಹೇಗೆ ಶವಸಂಸ್ಕಾರ ಮಾಡುವುದು ಎಂದರು
ತಹಶೀಲ್ದಾರರು ನಿಗದಿ ಮಾಡಿದ ದಿನದಂದು ನಮ್ಮ ಗ್ರಾಮಕ್ಕೆ ಬಂದು ಒತ್ತುವರಿ ಆಗಿರುವ ಜಾಗವನ್ನು ಬಿಡಿಸಬೇಕು ಇಲ್ಲದಿದ್ದರೆ

ಒಂಬತ್ತನೇ ತಾರೀಕು ಜಿಲ್ಲಾ ಡಾಕ್ಟರ್ ಬಾಬು ಜಗಜೀವನ ರಾಮ್,ತಾಲೂಕು ದಲಿತ ಸಂಘರ್ಷ ಸಮಿತಿ ಸಂಘಟನೆ ಜಿಲ್ಲಾ ದಲಿತ ಸಂಘಟನೆ ತಾಲೂಕು ಸಂಘಟನೆಗಳು ಅಹೋರಾತ್ರಿ ಧರಣಿಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಹಾಗೂ ಉಗ್ರ ಹೋರಾಟ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮಹದೇವ್ ಯಜಮಾನರಾದ ಮಹದೇವ್ ಮಾಜಿ ಗ್ರಾಮ ಪಂಚಾಯತಿ ಸದಸ್ಯ ,ಮಹಾದೇವ ಯಜಮಾನರು, ಶಂಭುಲಿಂಗ ,ಬಸವಣ್ಣ , ಬೂದು ಬಾಳು ಮಹದೇವು, ತಾಲೂಕು ಅಧ್ಯಕ್ಷರು ಬಾಬು ಜಗಜೀವನ ರಾಮ , ಸುದೇಶ್ ಹನೂರು ಪಟ್ಟಣ ಪಂಚಾಯಿತಿ ಸದಸ್ಯರು, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕರಾದ ಮಾದೇಶ್, ಯುವಕರು ಹಾಗೂ ಇನ್ನಿತರರು ಇದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!